ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅನಿರ್ಧಿಷ್ಟಾವದಿ ಮುಷ್ಕರ
ಬಸವಕಲ್ಯಾಣ:ಸೆ.26: ಇಲ್ಲಿಯ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ತಾಲೂಕು ಘಟಕದ ವತಿಯಿಂದ ಸೋಮವಾರ ಅನಿರ್ಧಿಷ್ಠಾವಧಿ ಮುಷ್ಕರ ನಡೆಸಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಬರೆದ ಮನವಿ ಪತ್ರವನ್ನು ಗ್ರೇಡ್ -2 ತಹಸೀಲ್ದಾg ಡಾ. ರಮೇಶ ಬಾಬು ಹಾಲೂÀ ಮೂಲಕ ಮನವಿ ಸಲ್ಲಿಸಲಾಯಿತು.
ಇಲಾಖೆಯಿಂದ ಅಭಿವೃದ್ದಿ ಪಡಿಸಿರುವ ಸುಮಾರು 17ಕ್ಕೂ ಅಧಿಕ ಮೊಬೈಲ್-ವೆಬ್ ತಂತ್ರಾಂಶಗಳ ಮೂಲಕ ಕರ್ತವ್ಯ ನಿರ್ವಹಿಸಲು ಒತ್ತಡ ಹೇರುತ್ತಿದ್ದು, ಈ ತಂತ್ರಾಂಶಗಳ ನಿರ್ವಹಣೆಗೆ ಅವಶ್ಯಕವಾಗಿರುವ ಮೋಬೈಲ್ ಸಾಧನ, ಲ್ಯಾಪ್ ಟಾಪ್, ಅದಕ್ಕೆ ಅವಶ್ಯಕವಾಗಿರುವ ಇಂಟರ್‍ನೆಟ್ ಹಾಗೂ ಸ್ಕ್ಯಾನರ್‍ಗಳನ್ನು ಒದಗಿಸದೇ ಕರ್ತವ್ಯ ನಿರ್ವಹಿಸಲು ಒತ್ತಡ ಹೇರುತ್ತಿರುವುದರಿಂದ ಕ್ಷೇತ್ರ ಮಟ್ಟದಲ್ಲಿ ಅಧಿಕ ಒತ್ತಡದೊಂದಿಗೆ ಗ್ರಾಮ ಆಡಳಿತ ಅಧಿಕಾರಿಗಳು ಸಾವು ಆಗುತ್ತಿದೆ. ಅಲ್ಲದೆ ಕಂದಾಯ ಇಲಾಖೆಯ ಮೂರು ವರ್ಷ ಸೇವೆ ಪರಿಗಣಿಸಿ ಅಂತರ ಜಿಲ್ಲಾ ವರ್ಗಾವಣೆಗೆ ಹೊಸ ಮಾರ್ಗ ಸೂಚಿ ರಚಿಸಬೇಕು, ಆಯುಕ್ತಾಲಯದ ಅಡಿಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಜೇಷ್ಠತೆಯನ್ನು ರಾಜ್ಯ ಮಟ್ಟದ ಜೇಷ್ಠತೆಯನ್ನಾಗಿ ಪರಿಗಣಿಸಬೇಕು, ಮೊಬೈಲ್ ತಂತ್ರಾಂಶಗಳ ಕೆಲಸದ ವಿಚಾರವಾಗಿ ಇದುವರೆಗೆ ಆಗಿರುವ ಎಲ್ಲಾ ಅಮಾನತುಗಳನ್ನು ತಕ್ಷಣವೇ ರದ್ದು ಪಡಿಸಿ ಹಿಂಪಡೆಯಬೇಕು, ಪ್ರಯಾಣ ಭತ್ತೆ ದರವನ್ನು 500ರ ಬದಲಾಗಿ 3000 ಸಾವಿರ ಹೆಚ್ಚಿಸಬೇಕು ಎಂಬ ಇತರೆ ಬೇಡಿಕೆಗಳ ಈಡೇರಿಕೆಗಾಗಿ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಲಾಯಿತು.
ಈ ಸಂದರ್ಬದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ತಾಲೂಕು ಘಟಕದ ಕಾಶಿನಾಥ ಚಂಡಕಾಪೂರೆ, ಉಪಾಧ್ಯಕ್ಷ ದುಶಾಂತ ರೆಡ್ಡಿ, ಗೌರವ ಅಧ್ಯಕ್ಷ ದಿಲೀಪ ಡೋಮೆ, ಪ್ರಧಾನ ಕಾರ್ಯದರ್ಶಿ ಸುಧಾಕರ ಗೌರಶೆಟ್ಟಿ, ಖಜಾಂಚಿ ಇರಪ್ಪಾ ಧುಲಾರೆ ಸೇರಿದಂತೆ ಪ್ರಮುಖರಾದ ಸಂದೀಪ ತೇಲಿ, ಶಿವರಾಜ, ಆಶಾರಾಣಿ, ಸರುಬಾಯಿ, ಸವಿತಾ ಶಾರದಾ, ಕಾವೇರಿ, ವಿಜಯಶಾಂತಿ, ಅನುರಾಧಾ ಸೇರಿದಂತೆ ಮತ್ತಿತರಿದ್ದರು.