ಮೊಬೈಲ್ ಸುಲಿಗೆ: ಇಬ್ಬರ ಬಂಧನ
ಕಲಬುರಗಿ,ಜೂ.28-ಆಟೋದಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬರ ಮೊಬೈಲ್ ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಸ್ಟೇಷನ್ ಬಜಾರ್ ಪೊಲೀಸರು ಬಂಧಿಸಿದ್ದಾರೆ.
ಬುಲೆಂದ್ ಪರವೇಜ್ ಕಾಲೋನಿಯ ಫಿರೋಜ್ ಅಲಿಯಾಸ್ ಸ್ಮಾರ್ಟಿ ತಂದೆ ಮಹ್ಮದ್ ಶೇಕ್ (22) ಮತ್ತು ಶೇಕ್ ಅಮನ್ ತಂದೆ ಶೇಕ್ ಇನಾಯತ್ (19) ಎಂಬುವವರನ್ನು ಬಂಧಿಸಿ 17 ಸಾವಿರ ರೂ.ಮೌಲ್ಯದ ರೆಡ್ ಮೀ ಕಂಪನಿಯ ಮೊಬೈಲ್ ಜಪ್ತಿ ಮಾಡಿದ್ದಾರೆ.
ಶಾಂತಾಬಾಯಿ ಕೆ.ಪತ್ತಾರ್ ಎಂಬುವವರು ಸುಪರ್ ಮಾರ್ಕೆಟ್‍ದಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದ ಕಡೆಗೆ ಮಗಳೊಂದಿಗೆ ಮೊಬೈಲ್‍ನಲ್ಲಿ ಮಾತನಾಡುತ್ತ ಆಟೋದಲ್ಲಿ ಬರುತ್ತಿದ್ದಾಗ ಮಿನಿ ವಿಧಾನ ಸೌಧದ ಹತ್ತಿರ ಆಟೋ ಹಿಂದುಗಡೆಯಿಂದ ಪಲ್ಸರ್ ಬೈಕ್ ಮೇಲೆ ಬಂದ ಮೂವರು ಯುವಕರು ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಅವರು ಸ್ಟೇಷಬ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಈ ದೂರಿನ ಅನ್ವಯ ಡಿಸಿಪಿಗಳಾದ ಕನಿಕಾ ಸಿಕ್ರಿವಾಲ್, ಪ್ರವೀಣ ಹೆಚ್.ನಾಯಕ್, ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಭೂತೇಗೌಡ ವಿ.ಎಸ್.ಅವರ ಮಾರ್ಗದರ್ಶನದಲ್ಲಿ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯ ಪಿಐ ಶಕೀಲ್ ಅಹ್ಮದ್ ಅಂಗಡಿ ನೇತೃತ್ವದಲ್ಲಿ ಪಿಎಸ್‍ಐ ವಂದನಾ, ಅಪರಾಧ ಪತ್ತೆದಳದ ಸಿಬ್ಬಂದಿಗಳಾದ ಪ್ರಭಾಕರ, ಮೋಶಿನ್, ಫಿರೋಜ್, ವಿಠ್ಠಲ, ಸಂಗಣ್ಣ ಅವರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ಮೊಬೈಲ್ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯವನ್ನು ನಗರ ಪೊಲೀಸ್ ಆಯುಕ್ತ ಚೇತನ್ ಆರ್.ಅವರು ಶ್ಲಾಘಿಸಿದ್ದಾರೆ.