ರಾವೂರ-ಚಿತ್ತಾಪುರ ರಸ್ತೆಯಲ್ಲಿ ತಗ್ಗು ಗುಂಡಿ: ವಾಹನ ಸವಾರರು ಹೈರಾಣ
ವಾಡಿ,ಜೂ.28-ರಾವೂರದಿಂದ ಚಿತ್ತಾಪುರಕ್ಕೆ ಹೋಗುವ ರಸ್ತೆ ಮಧ್ಯದಲ್ಲಿ ತಗ್ಗುಗುಂಡಿಗಳು ಬಿದ್ದಿದ್ದು, ವಾಹನ ಸವಾರರು ಸಂಕಷ್ಟ ಎದುರಿಸುವಂತಾಗಿದೆ.
ಜನ ಪ್ರತಿನಿಧಿಗಳು, ಅಧಕಾರಿಗಳು ಇಲ್ಲಿಂದ ದಿನಾಲು ತಾಲುಕಾ ಕೆಂದ್ರ ಸ್ಥಾನಕ್ಕೆ ಇದೇ ರಸ್ತೆಯಲ್ಲಿ ಓಡಾಡಿದರೂ ಈ ಬಗ್ಗೆ ನಿಗಾವಹಿಸುತ್ತಿಲ್ಲ. ರಾವೂರದಿಂದ ಯೆರಗಲ ಕ್ರಾಸವರೆಗೆ ಸಂಚರಿಸಲು ವಾಹನ ಚಾಲಕರು ಹರಸಾಸ ಪಡುವಂತಾಗಿದೆ. ಇದೇ ಮಾರ್ಗದಿಂದ ಕಲಬುರಗಿ, ಮುಂಬೈ, ಪುಣೆ ಹೈದ್ರಾಬಾದ, ಕೆರಳ, ತಮೀಳನಾಡು ರಾಜ್ಯಗಳಿಗೆ ಹೋಗಲಾಗುತ್ತದೆ. ಪಕ್ಕದಲ್ಲೆ ಎ.ಸಿ.ಸಿ ಸಿಮೆಂಟ್ ಕಾರ್ಖಾನೆ, ಓರಿಯಂಟಲ ಸಿಮೆಂಟ ಕಾರಖಾನೆ ಹಾಗೂ ಶ್ರೀ ಸಿಮೆಂಟ ಕಾಖಾನೆ ಇದೆ. ಇಲಿಂದ ದಿನಾಲು ಸಾವಿರಾರು ವಾಹನ ಸಂಚರಿಸುತ್ತವೆ. ರಸ್ತೆ ನೋಡಿ ಬೆರೆ ರಾಜ್ಯದಿಂದ ಬರುವ ವಾಹನ ಚಾಲಕರು ದಿಗ್ಭ್ರಮೆಯಾಗುತ್ತಿದ್ದಾರೆ. ರಸ್ತೆ ಮಧ್ಯೆದಲ್ಲಿಯೇ ತಗ್ಗುಗುಂಡಿಗಳು ಬಿದ್ದಿರುವುದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆಗಳಿವೆ. ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸಿ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕಿದೆ.