ಕೃಷ್ಣಾ ನದಿ ತೀರದಲ್ಲಿ ಅಕ್ರಮ ಮಣ್ಣು ಮಾಫಿಯಾ
ರಾತ್ರಿ ವೇಳೆ ಟಿಪ್ಪರ್ ಮತ್ತು ಜೆಸಿಬಿ ಗಳ ಘರ್ಜನೆ /
ಕಂಡು ಕಾಣದಂತೆ ಮೌನ ವಹಿಸಿರುವ ತಾಲೂಕಾ ಅಧಿಕಾರಿಗಳು
ಅಥಣಿ :ಜೂ.28: ಕೃಷ್ಣಾ ನದಿಯಲ್ಲಿ ನೀರು ಕಡಿಮೆಯಾದರೆ ಸಾಕು, ಆಕ್ರಮ ಚಟುವಟಿಕೆಗಳು ನಡೆಸುವವರಿಗೆ ಸುಗಿಯೋ ಸುಗ್ಗಿ. ಹಿಂದಿನ ವರ್ಷಗಳಲ್ಲಿ ನದಿ ತೀರದ ಅನೇಕ ಗ್ರಾಮಗಳಲ್ಲಿ ಮರಳು ಮಾಫಿಯಾ ರಾಜಾರೋಷವಾಗಿ ನಡೆಯುತ್ತಿತ್ತು. ಆದರೆ ಈ ಬಾರಿ ನದಿಯ ತೀರದ ಗ್ರಾಮಗಳಲ್ಲಿ ಅಕ್ರಮ ಮಣ್ಣು ಸಾಗಿಸುವ ಮಾಫಿಯಾ ವ್ಯವಸ್ಥಿತವಾಗಿ ನಡೆಯುತ್ತಿದೆ.
ಕಳೆದ ಒಂದು ವಾರದಿಂದ ಕೃಷ್ಣಾ ನದಿ ನೀರು ಇಳಿದ ಮೇಲೆ ಉಳಿದ ಫಲವತ್ತಾದ ಮಣ್ಣನ್ನು ತುಂಬಿ ಮಾರಾಟ ಮಾಡುತ್ತಿರುವ ದೊಡ್ಡ ದಂಧೆ ಅವರಖೋಡ, ಹುಲಗಬಾಳ , ಮಹಿಷವಾಡಗಿ, ನಾಗನೂರ ಪಿಕೆ , ನದಿ ಇಂಗಳಗಾವ, ಸಪ್ತಸಾಗರ, ತೀರ್ಥ. ಶಿರಹಟ್ಟಿ ಇನ್ನಿತರ ಗ್ರಾಮಗಳಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿದ್ದು, ನದಿ ತೀರದ ಅನೇಕ ಗ್ರಾಮಗಳಲ್ಲಿ ಜಿಸಿಬಿ, ಟ್ಯಾಕ್ಟರ್ ಬುಲ್ಡೋಜರ್ ಸಹಾಯದಿಂದ ಫಲವತ್ತಾದ ಮಣ್ಣನ್ನು ಟ್ರ್ಯಾಕ್ಟರ್ ಮತ್ತು ಟಿಪ್ಪರ್ ಗಳ ಮೂಲಕ ತುಂಬಿ ಬೇರಡೆಗೆ ಸಾಗಿಸುವ ದೃಶ್ಯಗಳು ಸಾಮಾನ್ಯವಾಗಿವೆ.
ತಡ ರಾತ್ರಿಯ ನಂತರ ಆರಂಭವಾಗುವ ಈ ಮಣ್ಣು ಮಾಫಿಯಾ ಯಾವುದೇ ಅಧಿಕೃತ ಇಲಾಖೆಯ ಅನುಮತಿ ಇಲ್ಲದೇ ರಾಜಾರೋಷವಾಗಿ ನಡೆಯುತ್ತಿದ್ದು, ಪೆÇಲೀಸ್ ಠಾಣೆಗಳ ಮುಂದೆಯೇ ಅಕ್ರಮವಾಗಿ ನದಿ ಮಣ್ಣು ಸಾಗಾಣಿಕೆಯಾಗುತ್ತಿದ್ದರೂ ಕಂಡು ಕಾಣದಂತೆ ಮೌನವಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿದೆ . ಪೆÇಲೀಸ್ ಇಲಾಖೆ ಸೇರಿದಂತೆ ಬೇರೆ ಬೇರೆ ಇಲಾಖೆಯ ಅಧಿಕಾರಿಗಳು ಈ ಅಕ್ರಮ ದಂಧೆಯಲ್ಲಿ ಶಾಮೀಲಾಗಿದ್ದಾರೆ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ದಂದೆಗೆ ಕಡಿವಾಣ ಹಾಕದಿರುವುದು ವಿಪರ್ಯಾಸದ ಸಂಗತಿಯಾಗಿದೆ.
ಈ ರೀತಿ ನದಿಯ ಮಣ್ಣನ್ನು ಒಯ್ದರೇ ನದಿಯಲ್ಲಿರುವ ಹೂಳು ಕಡಿಮೆ ನದಿಯ ಸಾಂದ್ರತೆ ಕಡಿಮೆಯಾಗುತ್ತದೆ. ಸವಳು ಜವಳು ಸಮಸ್ಯೆ, ನೆರೆ ಹಾವಳಿ ಸಂದರ್ಭದಲ್ಲಿ ನದಿಯ ಸ್ವರೂಪ ಬದಲಾವಣೆಯಾಗಿ ತೊಂದರೆ ಅನುಭವಿಸಬೇಕಾಗುತ್ತದೆ. ಇದರ ಬಗ್ಗೆ ಅನೇಕ ದುಷ್ಪರಿಣಾಮಗಳು ಗೊತ್ತಿದ್ದರೂ ಕೂಡ ಕೆಲ ದಲ್ಲಾಳಿಗಳು, ಪ್ರಭಾವಶಾಲಿ ವ್ಯಕ್ತಿಗಳು ಇದರಲ್ಲಿ ಪರೋಕ್ಷವಾಗಿ ಭಾಗಿಯಾಗಿ ಮಣ್ಣನ್ನು ಅಧಿಕ ಬೆಲೆಗೆ ರೈತರಿಗೆ ಮತ್ತು ಇಟ್ಟಿಗೆ ತಯಾರಿಕಾ ಘಟಕಗಳಿಗೆ ಮಾರಾಟ ಮಾಡುತ್ತಿದ್ದಾರೆ.
ನೆರೆಯ ಮಹಾರಾಷ್ಟ್ರ ರಾಜ್ಯಕ್ಕೂ ನಂಟು :
ನೆರೆಯ ಮಹಾರಾಷ್ಟ್ರದಲ್ಲಿ ಇರುವ ಇಟ್ಟಿಗೆ ತಯಾರಿಕಾ ಘಟಕಗಳಿಗೆ ನದಿ ತೀರದ ಮಣ್ಣು ಬಳಕೆ ಮಾಡುವುದು ನಿಶ್ಚಿತವಾಗಿದ್ದು, ಆದ್ದರಿಂದ ಕೆಲವು ದಲ್ಲಾಳಿಗಳು ಫಲವತ್ತಾದ ಮಣ್ಣನು ನೆರೆಯ ಮಹಾರಾಷ್ಟ್ರಕ್ಕೆ ಸಾಗಿಸಿ ಮಾರಾಟ ಮಾಡುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿವೆ. ಪ್ರತಿ ಟ್ರ್ಯಾಕ್ಟರ್ ಗೆ ಒಂದು ಸಾವಿರ ರೂ. ಹಾಗೂ ಪ್ರತಿ ಟಿಪ್ಪರಗೂ ಮೂರರಿಂದ ಐದು ಸಾವಿರ ರೂ. ಬೆಲೆ ನಿಗದಿಗೊಳಿಸಿದ್ದು, ಅದನ್ನು ನಿಯಂತ್ರಿಸಲು ಪ್ರಭಾವಿ ವ್ಯಕ್ತಿಯೊಬ್ಬ ಇದ್ದು, ಒಂದು ಟಿಪ್ಪರ್ ಮಣ್ಣು ಒಯ್ದರೇ ಆತನಿಗೆ ಹಣ ನೀಡಬೇಕಾಗುತ್ತದೆ ಎಂದು ಹೆಸರು ಹೇಳಲಿಚ್ಚಿಸದ ನಾಗರಿಕರೊಬ್ಬರು ತಿಳಿಸಿದ್ದಾರೆ.
ರಾಷ್ಟ್ರೀಯ ನದಿ ನೀರು ನಿಯಮಗಳ ಪ್ರಕಾರ ಯಾವುದೇ ನದಿಯ ದಂಡೆಯಲ್ಲಿನ ಮಣ್ಣು ಮತ್ತು ಮರಳು ತೆಗೆಯುವುದು ನಿಷಿದ್ಧ. ಈ ಮಣ್ಣು ಮಾಪಿಯ ನಡೆಯುತ್ತಿರುವ ಪ್ರದೇಶವೆಲ್ಲ ಕೃಷ್ಣಾ ಭಾಗ್ಯ ಜಲ ನಿಗಮಕ್ಕೆ ಸೇರಿದೆ. ವಿಚಿತ್ರವೆಂದರೆ ಅಕ್ರಮ ಮಣ್ಣು ಸಾಗಾಣಿಕೆ ಟಿಪ್ಪರ್ ಗಳು ರಾಜಾರೋಷವಾಗಿ ಪೆÇಲೀಸ್ ಠಾಣೆಯ ಮುಂದೆ ಹಾದು ಹೋಗುತ್ತಿದ್ದರೂ ಪೆÇಲೀಸ್ ಅಧಿಕಾರಿಗಳು ಮೂಕ ಪ್ರೇಕ್ಷಕರಾಗಿರುವದು ಹಲವು ಸಂದೇಹಗಳಿಗೆ ಎಡೆ ಮಾಡಿದೆ.ನದಿ ದಂಡೆಯ ಈ ರೀತಿಯ ಮಣ್ಣು ಉತ್ಕøಷ್ಟ ಮಣ್ಣಾಗಿದ್ದು, ಅದನ್ನು ತೆಗೆದುಕೊಂಡು ಕಪ್ಪು ಮಣ್ಣಿನ ಹೊಲಗಳಿಗೆ ಮಿಶ್ರಣ ಮಾಡಲು ಮತ್ತು ಇಟ್ಟಿಗೆಗಳನ್ನು ತಯಾರಿಸುವ ಘಟಕಗಳಿಗೆ ಒಯ್ಯುತ್ತಾರೆ. ಅಥಣಿ ಮತ್ತು ಕಾಗವಾಡ ತಾಲೂಕುಗಳಲ್ಲಿ 80ಕ್ಕೂ ಅಧಿಕ ಅಕ್ರಮ ಇಟ್ಟಿಗೆ ತಯಾರಿಕಾ ಘಟಕಗಳು ಹುಟ್ಟಿಕೊಂಡಿದ್ದು, ಇಟ್ಟಿಗೆ ತಯಾರಿಸಲು ನದಿ ತೀರದ ಈ ಕೆಂಪು ಮಣ್ಣು ಅತ್ಯಧಿಕವಾಗಿ ಬೇಕಾಗುವದರಿಂದ ಈ ಮಣ್ಣಿಗೆ ಬಂಗಾರದ ಬೆಲೆ ಬಂದಿದ್ದು, ಪ್ರತಿನಿತ್ಯ 100 ಕ್ಕೂ ಅಧಿಕ ಟ್ರಿಪ್ ಫಲವತ್ತಾದ ಮಣ್ಣು ಇಲ್ಲಿಂದ ರವಾನೆಯಾಗುತ್ತಿದೆ. ಈಗ ಮಧ್ಯ ರಾತ್ರಿಯಾದರೆ ಈಗ ಪಟ್ಟಣದಲ್ಲಿ ಹಾದು ಹೋಗಿರುವ ಹೆದ್ದಾರಿಯಲ್ಲಿ
ಮಣ್ಣು ಹೊತ್ತ ಇದೇ ಟಿಪ್ಪರ್‍ಗಳ ಅಬ್ಬರ ಕೇಳಿ ಬರುತ್ತಿದೆ. ನದಿ ದಡದ ಗ್ರಾಮಗಳಲ್ಲಿ ಜೆಸಿಬಿ, ಟ್ರ್ಯಾಕ್ಟರ್, ಟಿಪ್ಪರ್ ಸಾಲುಗಟ್ಟಿ ನಿಂತಿವೆ. ಇವುಗಳ ಸದ್ದಿಗೆ ಮತ್ತು ಶರವೇಗದಲ್ಲಿ ಹೋಗುವ ವಾಹನಗಳ ರಬಸಕ್ಕೆ ಗ್ರಾಮಸ್ಥರು ಆತಂಕ ಪಡುತ್ತಿದ್ದಾರೆ. ಇಂತಹ ಅಕ್ರಮ ಮಣ್ಣು ಮಾಫಿಯಾದಲ್ಲಿ ಭಾಗಿಯಾದ ವ್ಯಕ್ತಿಗಳನ್ನು ಬಂಧಿಸಿ, ತಕ್ಷಣವೇ ಈ ಆಕ್ರಮ ದಂಧೆಯನ್ನು ನಿಲ್ಲಿಸಿ ಎಂದು ಪ್ರಜ್ಞಾವಂತ ನಾಗರಿಕರು ಆಗ್ರಹಿಸಿದ್ದಾರೆ.
ಈ ವಿಷಯ ಈಗಷ್ಟೇ ನನ್ನ ಗಮನಕ್ಕೆ ಬಂದಿದ್ದು, ನದಿಯ ಮಣ್ಣನ್ನು ಅಕ್ರಮವಾಗಿ ಸಾಗಿಸುವುದು ಅಪರಾಧ. ಕೂಡಲೇ ನಮ್ಮ ಪೆÇಲೀಸ್ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿ ಮಣ್ಣು ಮಾಫಿಯಾವನ್ನು ನಿಲ್ಲಿಸಿ, ಅಕ್ರಮ ಮಣ್ಣು ಸಾಗಾಣಿಕೆಯಲ್ಲಿ ಭಾಗಿಯಾದವರ ವಿರುದ್ಧ ಶಿಸ್ತು ಕ್ರಮಕ್ಕೆ ಸೂಚಿಸುತ್ತೇನೆ.
– ಡಾ. ಭೀಮಾಶಂಕರ ಗುಳೇದ,
ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ, ಬೆಳಗಾವಿ
” ನದಿಯ ದಡದಲ್ಲಿನ ಮಣ್ಣು ತೆಗೆದು ಬೇರೆ ಕಡೆಗೆ ಸಾಗಾಣಿಕೆ ಮಾಡುವುದು ಕಾನೂನು ಬಾಹಿರ. ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಅಕ್ರಮ ಮಣ್ಣು ಸಾಗಾಣಿಕೆಗೆ ಕಡಿವಾಣ ಹಾಕಲು ತಹಶೀಲ್ದಾರ್ ಅವರಿಗೆ ಸೂಚನೆ ನೀಡಲಾಗುವುದು.