ಶಾಲೆ ಮಕ್ಕಳಿಗೆ ನೋಟಬುಕ ವಿತರಣೆ
ಕೊಲ್ಹಾರ:ಜೂ.28: ತಾಲೂಕಿನ ಕೂಡಗಿ ಎನ್‍ಟಿಪಿಸಿ ವಿದ್ಯುತ್ ಸ್ಥಾವರದ ಪಲಾನುಭವಿ ಗ್ರಾಮಗಾದ ಕೂಡಗಿ, ಮಸೂತಿ, ತೆಲಗಿ, ಗೊಳಸಂಗಿ ಹಾಗೂ ಮುತ್ತಗಿ ಗ್ರಾಮಗಳ 44 ಶಾಲೆಗಳ ಮಕ್ಕಳಿಗೆ ನೋಟಬುಕಗಳನ್ನು ಎನ್ ಟಿಪಿಸಿ ಕೂಡಗಿ ವತಿಯಿಂದ ವಿತರಣಾ ಮಾಡಲಾಯಿತು. ಬಸವನ ಬಾಗೆವಾಡಿ ತಾಲೂಕಿನ 12 ಶಾಲೆಗಳು ಕೊಲ್ಹಾರ ತಾಲುಕದಲ್ಲಿ 23 ನಿಡಗುಂದಿ ತಾಲೂಕಿನ 09 ಶಾಲೆಯ ಮಕ್ಕಳಿಗೆ ನೋಟಬುಕ ವಿತರಣೆ ಮಾಡಿದರು,
ಈ ಕಾರ್ಯಕ್ರಮದಲ್ಲಿ ಶ್ರೀ ಬಿದ್ಯಾನಂದ .ಎನ್ ಝಾ ಸಿ.ಜಿ.ಎಮ್ ಎನ್ ಟಿಪಿಸಿ ಕೂಡಗಿ ,ಶ್ರೀ ಕಾಲಿಯಾ ಎಸ್.ಮೂರ್ತಿ ಎ.ಜಿ.ಎಮ್ ಎ???ರ್, ಶ್ರೀ ಜಯದೀಪ್ ತುಶಿರ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಅರವಿಂದ ಕೊಪ್ಪದ ಡಿ. ಜಿ. ಎಂ ಕಾನೂನು ವಿಭಾಗ ಹಾಗೂ ಸಿನಿಯರ್ ಅಧಿಕಾರಿಗಳು ಉಪಸ್ಥಿತರಿದ್ದರು,