ಕನ್ನಡ-ಸಂಸ್ಕøತಿ ಕಾರ್ಯಕ್ರಮಗಳಿಗೆ ಅನುದಾನ ಕಡಿತ ಬೇಡ:ಹಾಸಿಂಪೀರ ವಾಲಿಕಾರ
ವಿಜಯಪುರ :ಜೂ.28: ರಾಜದಲ್ಲಿ ಕನ್ನಡ ಸಾಹಿತ್ಯ ಹಾಗು ಸಂಸ್ಕೃತಿ ಕಾರ್ಯಕ್ರಮಗಳಿಗೆ ರಾಜ್ಯ ಸರ್ಕಾರ ಅನುದಾನ ಕಡಿತ ಮಾಡಬಾರದೆಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಹಾಗು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಗಳು ಕನ್ನಡ ನಾಡು- ನುಡಿ.ನೆಲ-ಜಲ ಸಂಸ್ಕೃತಿಯ ಪ್ರತೀಕವಾಗಿ ನಿರಂತರ ಸೇವೆ ಸಲ್ಲಿಸುತ್ತಿರುವ ಈ ಸಂಸ್ಥೆಗಳ ಅನುದಾನ ಕಡಿತಗೊಳಿಸಿದರೆ ಸಾಂಸ್ಕೃತಿಕವಾಗಿ ಕನ್ನಡ ನಾಡಿಗೆ ಹಿನ್ನಡೆಯಾಗುತ್ತದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ.ಕನ್ನಡ ಸಾಹಿತ್ಯ ಪರಿಷತ್ತು. ಕನ್ನಡ ಪುಸ್ತಕ ಪ್ರಾಧಿಕಾರ. ಗಡಿನಾಡು ಕನ್ನಡ ಪ್ರಾಧಿಕಾರಕ್ಕೂ ಅನುದಾನ ಕಡಿತ ಮಾಡಿದ್ದು ಅತ್ಯಂತ ಖಂಡನೀಯ.
ವಿವಿಧ ವೈವಿಧ್ಯಮಯ ಸಾಂಸ್ಕೃತಿಕ ತಂಡಗಳನ್ನು ಕಟ್ಟಿಕೊಂಡು ಸರ್ಕಾರ ನೀಡಿರುವ ಅನುದಾನದಲ್ಲಿ ಪ್ರತಿ ಜಿಲ್ಲೆಯಲ್ಲಿ ಸಾವಿರಾರು ಕಲಾವಿದರ ಜೀವನ ಕರಾಳವಾಗಲಿದೆ. ಮಂತ್ರಿಗಳು ಹಾಗು ಶಾಸಕರು. ವಿಧಾನ ಪರಿಷತ್ತಿನ ಸದಸ್ಯರು ಈ ವಿಷಯ ಗಂಭೀರ ಸ್ವರೂಪದ್ದಾಗಿದ್ದು ಮುಖ್ಯ ಮಂತ್ರಿಗಳಿಗೆ ಅರಿವು ಮೂಡಿಸಬೇಕು. ಕನಾ9ಟಕ ಸುವರ್ಣ ಸಂಭ್ರಮ 50 ರ ನಿಮಿತ್ತ ನಾಡಿನಾದ್ಯಾಂತ ಕನ್ನಡ ಸಾಹಿತ್ಯ-ಸಂಸ್ಕೃತಿಯ ಕುರಿತು ಜಿಲ್ಲೆ,ತಾಲೂಕ, ಹಾಗು ಪ್ರತಿ ಗ್ರಾಮಗಳಲ್ಲಿ ಸಾಹಿತ್ಯ ಕಾರ್ಯಕ್ರಮ ಹಮ್ಮಿಕೊಳ್ಳುವದರಿಂದ ಹೆಚ್ಚಿನ ಅನುದಾನ ನೀಡಲೇಬೇಕು.
ಕನ್ನಡ ಉಳಿಸಿ ಬೆಳೆಸುವಲ್ಲಿ ಸರ್ಕಾರವೆ ಮಲತಾಯಿ ಧೋರಣೆ ಅನುಸರಿಸುತ್ತಿರುವದು ದುರದೃಷ್ಟಕರ .ಸರ್ಕಾರ ಕನ್ನಡ ಸಾಹಿತ್ಯ, ಸಂಗೀತ, ಸಾಂಸ್ಕೃತಿಕ ಹಿನ್ನಡೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರದ್ದಾಗಿದೆ ಎಂದು ವಿಜಯಪುರ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಸರ್ಕಾರದ ನಿರ್ಧಾರ ಬದಲಿಸಿ ಅನುದಾನ ನೀಡಬೇಕೆಂದರು.