ಶಾಸಕ ಯತ್ನಾಳರಿಂದ ರೂ.50 ಸಾ. ಪರಿಹಾರ
ವಿಜಯಪುರ: ಜೂ.28:ಜಲನಗರದಲ್ಲಿರುವ ಮಹಾನಗರ ಪಾಲಿಕೆಯ ಮಳಿಗೆಯಲ್ಲಿದ್ದ ಅಂಗವಿಕಲ (ಮಾತು ಬಾರದ) ವ್ಯಕ್ತಿಯ ಟೇಲರಿಂಗ್ ಅಂಗಡಿ ಇತ್ತೀಚೆಗೆ ಆಕಸ್ಮಿಕವಾಗಿ ಸುಟ್ಟಿರುವ ಹಿನ್ನೆಲೆ, ಅಂಗಡಿ ಮಾಲೀಕ ಬಸವರಾಜ ಕೂಸೂರ ಅವರಿಗೆ ನಗರ ಶಾಸಕರಾದ ಬಸನಗೌಡ ರಾ.ಪಾಟೀಲ ಯತ್ನಾಳ ಅವರು, ವೈಯಕ್ತಿಕವಾಗಿ ರೂ.50 ಸಾವಿರ ಸಹಾಯ ಧನ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಮಹಾನಗರ ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ ಮತ್ತಿತರರು ಇದ್ದರು.