ನಾಡಪ್ರಭು ಕೆಂಪೆಗೌಡರ ಜಯಂತಿ ಆಚರಣೆ
ಕೊಲ್ಹಾರ:ಜೂ.28:ಕೆಂಪೇಗೌಡ ಅವರ ಕೊಡುಗೆ ಮಾನವ ಕುಲಕ್ಕೆ ಆದರ್ಶ. ಅವರ ತತ್ವಾದರ್ಶ ಅಳವಡಿಸಿಕೊಂಡು ಮುಂದಿನ ಸಮಾಜಕ್ಕೆ ಕೊಡುಗೆ ನೀಡೋಣ ಆಮೂಲಕ ಅವರ ತತ್ವ ಸಿದ್ದಾಂತಗಳಿಗೆ ಗೌರವ ನೀಡೋಣ ಎಂದು ತಹಶೀಲ್ದಾರ್ ಎಸ್.ಎಸ್ ನಾಯಕಲಮಠ ಅವರು ಅಭಿಪ್ರಾಯಪಟ್ಟರು.
ಪಟ್ಟಣದ ಸಭಾಭವನದಲ್ಲಿ ತಾಲೂಕು ಆಡಳಿತ ವತಿಯಿಂದ ನಡೆದ ನಾಡಪ್ರಭು ಕೆಂಪೆಗೌಡರ 515 ನೇ ಜಯಂತಿ ಕಾರ್ಯಕ್ರಮದ ನಿಮಿತ್ಯ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು ಕಠಿಣ ಮತ್ತು ಅವಿರತ ಪ್ರಯತ್ನದ ಮೂಲಕ ಜೀವನದಲ್ಲಿ ಉತ್ತಮ ಗುರಿ ಹೊಂದಲು ಸಾಧ್ಯ ನಿರಂತರ ಅಭ್ಯಾಸ ಮಕ್ಕಳನ್ನು ಯಶಸ್ವಿಯಾಗಲು ಸಹಕರಿಸುತ್ತವೆ ಎಂದರು
ಶಿಕ್ಷಕ ಹಾಗೂ ಕನ್ನಡ ಪಂಡಿತರಾದ ರಾಜಶೇಖರ ಉಮರಾಣಿ ಮಾತನಾಡಿ, ಕೆಂಪೇಗೌಡರು ಅನೇಕ ಕೆರೆ ಕಾಲುವೆ ದೇವಸ್ಥಾನ ಕಟ್ಟಿಸಿ ಆಧುನಿಕ ಬೆಂಗಳೂರಿನ ನಿರ್ಮಾತೃವಾಗಿದ್ದರೆ ಅವರು ರಾಜಧಾನಿ ಕಟ್ಟಿದ ನಂತರ ಅಲ್ಲಿ ನಾಲ್ಕು ಮಹಾದ್ವಾರಗಳನ್ನು ರಚಿಸಿದರು. ವ್ಯಾಪಾರಿಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟು ಅವರ ವೃತ್ತಿಗಳಿಗನುಸಾರವಾಗಿ ಅಕ್ಕಿಪೇಟೆ, ರಾಗಿ ಪೇಟೆ, ಕುಂಬಾರ ಪೇಟೆ, ಉಪ್ಪಾರ ಪೇಟೆ, ಬಳೆ ಪೇಟೆ ಹೀಗೆ ಅನೇಕ ಪೇಟೆಗಳನ್ನು ನಿರ್ಮಿಸಿಕೊಟ್ಟರು ಎಂದು ತಿಳಿಸಿದರು.
ಈ ವೇಳೆಯಲ್ಲಿ ಶಾಲೆಗಳಿಂದ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ತಾ ಪಂ ಕಾರ್ಯನಿರ್ವಾಹಕ ಅಧಿಕಾರಿ ಸುನೀಲ ಮದ್ದಿನ್, ಪಪಂ ಮುಖ್ಯಾಧಿಕಾರಿ ಉಮೇಶ ಚಲವಾದಿ, ಕೃಷಿ ಅಧಿಕಾರಿ ಎಂ.ಕೆ ಪುರೋಹಿತ, ಜಿ.ಎಸ್.ಗಣಿಯವರ ಶಿರಸ್ತೆದಾರ ಕೃಷ್ಣ ಗುಡೂರ,
ಪ.ಪಂ ಸದಸ್ಯ ಬಾಬು ಬಜಂತ್ರಿ, ಶ್ರೀಶೈಲ ಮುಳವಾಡ ಅಪ್ಪಾಸಿ ಮಟ್ಟಿಹಾಳ ವಿಜಯ ಮಹಾಂತೇಶ್ ಗಿಡ್ಡಪ್ಪಗೋಳ ಬನಪ್ಪ ಬಾಲಗೊಂಡ ತೌಶಿಪ ಗಿರಗಾಂವಿ,ಮಲ್ಲು ಹೆರಕಲ್,ರವಿ ಗೊಳಸಂಗಿ,ಹಾಗೂ ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಸಹಿತ ಅನೇಕರು ಉಪಸ್ಥಿತರಿದ್ದರು,