ದೇವರು ನೀಡಿದ ಕಲೆ ಗುರುತಿಸುವನೇ ಶಿಕ್ಷಕ:ಸಿದ್ದಲಿಂಗಶ್ರೀ
ತಾಳಿಕೋಟೆ:ಜೂ.28: ದೇವರು ಪ್ರತಿಯೊಬ್ಬರಿಗೂ ಪ್ರೀತಿ ವಿಸ್ವಾಸ ಅಲ್ಲದೇ ಸಾಧನೆಯನ್ನು ಸಾದಿಸಲು ಕೊಡುಗೆ ನೀಡಿದ್ದಾನೆ ಆತ ಕೊಟ್ಟಿರುವ ಕಲೆ ಗುರುತಿಸುವವನೇ ಶಿಕ್ಷಕನಾಗಿದ್ದಾನೆಂದು ಶ್ರೀ ಖಾಸ್ಗತೇಶ್ವರ ಮಠದ ಬಾಲ ಶಿವಯೋಗಿ ಶ್ರೀ ಸಿದ್ದಲಿಂಗ ದೇವರು ನುಡಿದರು.
ಗುರುವಾರರಂದು ಪಟ್ಟಣದ ಎಸ್.ಎಸ್.ವಿದ್ಯಾ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ 2024-25ನೇ ಸಾಲಿನ ವಿದ್ಯಾರ್ಥಿಗಳಿಗೆ ಸ್ವಾಗತ ಕೊರುವ ಹಾಗೂ ಎಚ್.ಎಸ್.ಪಾಟೀಲ ಆಂಗ್ಲ ಮಾಧ್ಯಮ ಶಾಲೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ದಿವ್ಯ ಸಾನಿದ್ಯ ವಹಿಸಿ ಮಾತನಾಡುತ್ತಿದ್ದ ಶ್ರೀಗಳು ಸಿನಿಮಾದಲ್ಲಿ ಪಾರ್ಟ ಮಾಡುವವನು ಹಿರೋ ಆಗಿದ್ದರೇ ನಿಜವಾದ ಹಿರೋಗಳು ಹರಕು ಬಟ್ಟೆ ತೊಟ್ಟುಕೊಂಡು ಮೈಮುರಿದು ದುಡಿಯುತ್ತಾ ಸಾಗಿದ ತಂದೆ ನಿಜವಾದ ಹಿರೋ ಆಗಿದ್ದಾನೆ ಅದರಂತೆ ಅನ್ಯರ ಮನೆಯಲ್ಲಿ ಬಾಂಡೆ ತೊಳೆಯುವ ಕಾಯಕ ಮಾಡಿಕೊಂಡು ನನ್ನ ಮಕ್ಕಳು ಕಲಿತು ದೊಡ್ಡ ಸ್ಥಾನ ಮಾನ ಹೊಂದಲಿ ಎಂಬ ಅಪೇಕ್ಷೆಯಿಂದ ಹೊರಟ ತಾಯಿಯೂ ಕೂಡಾ ಹಿರೋಯಿನಿಯಾಗಿದ್ದಾಳೆಂದರು. ಕಾರಣ ತಂದೆ ತಾಯಿ ಅಣ್ಣ ತಮ್ಮಂದಿರರು ಬಂದು ಬಳಗದವರು ಸುಖಃ ಪಡಬೇಕೆಂಬ ಛಲ ವಿದ್ಯಾರ್ಥಿಯಾದವನಲ್ಲಿ ಬರಬೇಕೆಂದು ಹೇಳಿದ ಶ್ರೀಗಳು ಇಟಲಿ ಕವಿ ಹೇಳಿದ್ದನ್ನು ಪ್ರಸ್ಥಾಪಿಸಿ ನಿಜವಾದ ಗೆಳೆಯ ಎಂದರೆ ತಪ್ಪು ಮಾಡಿದಾಗ ಹೊಡೆದು ಬುದ್ದಿ ಹೇಳುವವನು ಹಾಗೂ ಕಷ್ಟಗಳಿಗೆ ಸ್ಪಂದಿಸಿ ಸರಿ ದಾರಿಗೆ ಒಯುವವನೇ ನಿಜವಾದ ಗೆಳೆಯನಾಗುತ್ತಾನೆ ಅಂತವರ ಗೆಳೆತನ ಮಾಡಿರಿ ಎಂದು ಸಲಹೆ ನೀಡಿದ ಶ್ರೀಗಳು ದುಶ್ಚಟಗಳಿಗೆ ದಾಸರಾಗಬೇಡಿ ಈ ನಿಜ ಜೀವನ ಮರಳಿ ದೊರೆಯಲಾರದೆಂದ ಶ್ರೀಗಳು ಶಾಲೆಯ ಜೀವನವೆಂಬುದು ಬಂಗಾರದ ಜೀವನವಾಗಿದೆ ಈ ಭಾಗದಲ್ಲಿ ಶಿಕ್ಷಣದ ಕ್ರಾಂತಿ ಎಬ್ಬಿಸಿದ ಎಚ್.ಎಸ್.ಪಾಟೀಲ ಅವರ ಸೇವಾ ಕಾರ್ಯ ಅತೀವ ಮಹತ್ವದ್ದಾಗಿದೆ ಎಂದರು.
ಇನ್ನೋರ್ವ ದಿವ್ಯ ಸಾನಿದ್ಯ ವಹಿಸಿದ ಹಿರೂರ ಶ್ರೀ ಅನ್ನದಾನೇಶ್ವರ ಹಿರೇಮಠದ ಪ.ಪೂ.ಷ.ಬ್ರ.ಶ್ರೀ ಜಯಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಕಳೆದ 20, 30 ವರ್ಷಗಳಿಂದ ಈ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ಎಚ್.ಎಸ್.ಪಾಟೀಲ ಅವರನ್ನು ನಾನು ಬಲ್ಲೆ ಅವರು ವಿಶೇಷ ವ್ಯಕ್ತಿತ್ವ ಹೊಂದಿದವರಾಗಿದ್ದಾರೆ ಚಿಂತಕರೂ ಆಗಿದ್ದಾರೆ ಅವರು ಜನ್ಮ ಕೊಟ್ಟ ತಂದೆ ತಾಯಿಯವರ ಫಲದಿಂದ ದೊಡ್ಡ ವ್ಯಕ್ತಿತ್ವ ಒಂದಿದ್ದಾರೆಂದರು. ಪರಿಶ್ರಮದಿಂದ ಕಟ್ಟಿದ ಸಂಸ್ಥೆಗಳಿದ್ದರೂ ಪರಿಶ್ರಮದಿಂದ ಗಳಿಕೆಗಾಗಿ ಉಳಿಕೆಗಾಗಿ ಅಲ್ಲಾ ಹಣಕ್ಕಾಗಿ ಅಲ್ಲಾ ಮಕ್ಕಳಿಗೆ ಜ್ಞಾನಕ್ಕಾಗಿ ಕಟ್ಟಿದ ಈ ಸಂಸ್ಥೆ ಎಸ್.ಎಸ್.ವಿದ್ಯಾ ಸಂಸ್ಥೆಯಾಗಿದ್ದು ಈ ಸಂಸ್ಥೆ ಬೆಳೆಯಲು ಪರಿಶ್ರಮದ ಶಕ್ತಿಯೇ ಎಚ್.ಎಸ್.ಪಾಟೀಲ ಅವರದ್ದಾಗಿದೆ ಎಂದರು.
ಇನ್ನೋರ್ವ ಕಾರ್ಯಕ್ರಮ ಉದ್ಘಾಟಿಸಿದ ಇಂಡಿಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವ ವಿದ್ಯಾಲಯದ ಮುಖ್ಯ ಸಂಚಾಲಕಿಯಾದ ರಾಜಯೋಗಿನಿ ಬ್ರಹ್ಮಕುಮಾರಿ ಯಮನಾಜಿ ಅಕ್ಕನವರು ಮಾತನಾಡಿ ಬಾಲ್ಯವಸ್ತೆಯಲ್ಲಿಯ ಶಿಕ್ಷಣವು ಜೀವನ ಪರ್ಯಂತ ಆಸರೆಯಾಗಲಿದೆ ಅಂತಹ ಒಳ್ಳೆಯ ಶಿಕ್ಷಣಕ್ಕೆ ಮುಂದಾಗಿ ಶಿಕ್ಷಣ ನೀಡುತ್ತಾ ಸಾಗಿದ ಎಚ್.ಎಸ್.ಪಾಟೀಲ ಅವರ ಸೇವೆ ಗುಣಗಾನಮಯವಾಗಿದೆ ಎಂದರು. ವ್ಯಕ್ತಿಯ ಜೀವನದಲ್ಲಿ ಉನ್ನತ ಸಾಧನೆ ಮಾಡಬೇಕೆಂಬ ಇಚ್ಚೆ ಎಂಬುದು ಇರುತ್ತದೆ ಅಂತಹ ಸಂಕಲ್ಪವನ್ನು ಇಡೇರಿಸಿಕೊಂಡಿದ್ದಾರೆಂದರು. ಇಡೀ ಜೀವನವನ್ನೇ ರೂಪಿಸುವಂತಹ ಶಾಲೆ ಇದಾಗಿದೆ ಅದುವೇ ಜೀವನೋಪಾಯಕ್ಕೆ ಆಧಾರವಾಗಿದೆ ಎಂದರು. ಪ್ರತಿಯೊಬ್ಬರಿಗೂ ಅರಿವು ಎಂಬುದು ಬೇಕು ಜ್ಞಾನಕ್ಕೆ ಬೆಳಕಿಗೆ ಜೀವನ ನಡೆಸುವ ಕಲೆ ಉಳ್ಳವ ಎಲ್ಲರಿಗಿಂತ ಸಾಧನೆ ಮಾಡುತ್ತಾನೆಂದ ಅವರು ಆದರ್ಶವೆಂಬುದು ಬರಬೇಕಾದರೆ ಮೌಲ್ಯವಾದ ಜೀವನ ನಡೆಸಬೇಕು ಮೌಲ್ಯ ಶಿಕ್ಷಣ ಪಡೆದರೆ ಜೀವನಕ್ಕೆ ಆದಾರವಾಗುತ್ತದೆ ಎಂದರು. ಮಕ್ಕಳಿಗೆ ನೈತಿಕತೆ ಕಲಿಸಬೇಕು ಸತ್ಯ ಅಹಿಂಸೆ ಎಂಬ ಮೌಲ್ಯ ಅಳವಡಿಸಿಕೊಂಡವರು ರಾಷ್ಟ್ರಕ್ಕೆ ಪಿತ ಆದರೆ ವ್ಯಕ್ತಿಯ ಚರಿರೆಯನ್ನು ಬೆಳೆಸುವ ಗುಣಬೇಕೆಂದರು.
ಉಪನ್ಯಾಸಕರಾಗಿ ಆಗಮಿಸಿದ ವಿಜಯಪುರ ಎಸ್.ಬಿ.ವಿಸ್ಡಮ್‍ಮ್ ಕರಿಯರ್ ಅಕಾಡೆಮಿಯ ಉಪನ್ಯಾಸಕರು ಹಾಗೂ ಆಡಳಿತಾಧಿಕಾರಿಗಳಾದ ಭಾಗೇಶ ಬಿ ಮುರಡಿ ಅವರು ಮಾತನಾಡಿ ಸಾಧನೆಯತ್ತ ಸಾಗುವವರು ವೆಸನಗಳಿಂದ ದೂರವಿರಬೇಕು ವೆಸನಗಳಂದರೆ ವಿಪರೀತ ಮೊಬೈಲ ಇಂದಿನ ದಿನಮಾನದಲ್ಲಿಯಾಗಿದೆ ಕಾರಣ ಸಕ್ರೀಯವಾಗಿ ಜಾಲ ತಾಣಗಳನ್ನು ಬಳಿಸಿಕೊಳ್ಳಬೇಕೆಂದು ಹೇಳಿದ ಮುರಡಿ ಅವರು ತಮಿಳನಾಡಿನ ಪೊಲೀಸ್ ಪೆಧೆಯೊಬ್ಬನ ಕಥೆಯೊಂದನ್ನು ವಿದ್ಯಾರ್ಥಿಗಳಿಗೆ ವಿವರಿಸಿ ಅಲ್ಪ ಶಾಲೆ ಕಲಿತ ಆತನ ಪತ್ನಿ ಆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಯಂತೆ ನಾನೇಕೆ ಆಗಬಾರದೆಂಬ ಛಲ ಹೊಂದಿ ಪತಿಗೆ ತಿಳಿ ಹೇಳಿ ತಾನೂ ಕೂಡಾ ಆಯ್‍ಪಿಎಸ್ ವರೆಗೆ ಶಿಕ್ಷಣ ಪಡೆದು ಹಿರಿಯ ಅಧಿಕಾರಿಯ ಸ್ಥಾನಮಾನ ಗಿಟ್ಟಿಸಿಕೊಂಡ ಆ ಮಹಿಳೆಯ ದಿಟ್ಟತನ ಆಕೆ ಮಾಡಿದ ಸಾಧನೆ ಕುರಿತು ವಿವರಿಸಿದಲ್ಲದೇ ಗುರು ಹಿರಿಯರು ತಂದೆ ತಾಯಿಗಳನ್ನು ಮುಂದಿಟ್ಟು ನಡೆಯಬೇಕೆಂದ ಅವರು ಕೆಲವು ನಗೆಯ ಚಟಾಕೆಗಳನ್ನು ಹಾರಿಸಿ ಕನ್ನಡ ಭಾಷೆಯ ಬಗ್ಗೆ ತಿಳಿ ಹೇಳಿ ಕನ್ನಡದ ಬರವಣಿಗೆಯಲ್ಲಿ ಆಗತಕ್ಕಂತಹ ತಪ್ಪು ತಡೆಗಳ ಕುರಿತು ವಿದ್ಯಾರ್ಥಿಗಳ ಮುಂದೆ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಅಧ್ಯಕ್ಷ ಎಚ್.ಎಸ್.ಪಾಟೀಲ ಅವರು ಮಾತನಾಡಿ ಸಮಯ ಪ್ರಜ್ಞೆ, ಸಾಮಾನ್ಯ ಜ್ಞಾನ ಜೊತೆಯಲ್ಲಿ ಗುರಿಯೊಂದನ್ನು ಇಟ್ಟುಕೊಂಡು ವಿದ್ಯಾರ್ಥಿಗಳು ನಡೆಯಬೇಕು ಮಾತಾಪಿತರ ಆಸೆಯನ್ನು ಇಡೇರಿಸಿ ಅವರ ಅಪೇಕ್ಷೆಯಂತೆ ವಿದ್ಯಾರ್ಥಿಯಾದವನು ಆದರ್ಶ ವಿದ್ಯಾರ್ಥಿಯಾಗಿ ಬಾಳಿ ಬೆಳಗಬೇಕೆಂದು ಶುಭಕೋರಿದರು.
ಇದೇ ಸಮಯದಲ್ಲಿ ಈ ಸಂಸ್ಥೆಯ ಅಧ್ಯಕ್ಷ ಎಚ್.ಎಸ್.ಪಾಟೀಲ ಅವರ 63ನೇ ಜನ್ಮದಿನದ ನಿಮಿತ್ಯ ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕ ವೃಂದದವರು ಕೇಕ್ ಕತ್ತರಿಸುವ ಕಾರ್ಯಕ್ಕೆ ಮುಂದಾಗಿ ಪಾಟೀಲ ಅವರಿಗೆ ಹಾಗೂ ಅವರ ಧರ್ಮ ಪತ್ನಿ ಶ್ರೀಮತಿ ಶಾಂತಾಬಾಯಿ ಎಚ್ ಪಾಟೀಲ ಅವರಿಗೂ ಉಡುಗೊರೆ ನೀಡಿ ಗೌರವಿಸಿದರು.
ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಗುರುಗಳಾದ ಶ್ರೀಮತಿ ಮೀರಾ ದೇಶಪಾಂಡೆ ಪ್ರಾಸ್ಥಾವಿಕವಾಗಿ ಮಾತನಾಡಿದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ದೇವರಾಜ ಬಾಗೇವಾಡಿ, ಹಿರಿಯ ಪತ್ರಕರ್ತರಾದ ಜಿ.ಟಿ.ಘೋರ್ಪಡೆ, ದಾವಣಗೇರಿ ಪ್ರಗ್ಯಾ ನೀಟ್ ಆಯ್‍ಆಯ್‍ಟಿ, ನೀಟ್ ಅಕಾಡೆಮಿಯ ನಿರ್ದೇಶಕ ಸಾಗರ ನಯ್ಯಮ ಅವರು ಸಂಸ್ಥೆಯ ಕಾರ್ಯ ಚಟುವಟಿಕೆಗಳ ಕುರಿತು ಗುಣಗಾನ ಮಾಡಿದರು.
ವೇದಿಕೆಯ ಮೇಲೆ ಅಫರಾದ ವಿಭಾಗ ಪಿಎಸ್‍ಐ ಆರ್.ಎಸ್.ಭಂಗಿ, ಶಿಕ್ಷಣ ಸಂಯೋಜಕ ಸುರೇಶ ಹಿರೇಮಠ, ಬಿಆರ್‍ಪಿ ಕಾಶಿನಾಥ ಸಜ್ಜನ, ಸಿಆರ್‍ಪಿ ರಾಜು ವಿಜಾಪೂರ, ಪ್ರಾಂಶುಪಾಲರಾದ ಮಲ್ಲಮ್ಮ ಬಿರಾದಾರ, ಸಂಸ್ಥೆಯ ಕಾರ್ಯದರ್ಶಿ ಸಚೀನ ಪಾಟೀಲ, ಸದಸ್ಯರಾದ ಕಿರಣ ಪಾಟೀಲ, ಮೊದಲಾದವರು ಉಪಸ್ಥಿತರಿದ್ದರು.
ಶಿಕ್ಷಕ ಸಂತೋಷ ಜಾಮಗೊಂಡಿ ಸ್ವಾಗತಿಸಿದರು. ಹಿರಿಯ ಶಿಕ್ಷಕ ಬಿ.ಆಯ್.ಹಿರೇಹೊಳಿ ನಿರೂಪಿಸಿದರು. ಪ್ರಕಾಶ ವಾಲಿಕಾರ ವಂದಿಸಿದರು.