ಹೊಸ ಟವರಗಳಿಂದ ತಾಂಡಾಗಳ ಅಭಿವೃದ್ದಿ: ಭಗವಂತ ಖೂಬಾ
ಬೀದರ :ಜೂ.28:ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಒಟ್ಟು 19 ಗ್ರಾಮ ಮತ್ತು ತಾಂಡಾಗಳಲ್ಲಿ ಬಿ.ಎಸ್.ಎನ್.ಎಲ್. 4-ಜಿ ಮೋಬೈಲ್ ಟವರ್ ಅಳವಡಿಸಿ, ಜನತೆಗೆ ದೂರವಾಣಿ ಸಂಪರ್ಕ ವ್ಯವಸ್ಥೆಯ ಅನುಕೂಲ ಮಾಡಿಕೊಡಲು ಕೇಂದ್ರ ಸರ್ಕಾರದ ದೂರಸಂಪರ್ಕ ಸಚಿವಾಲಯ ಒಪ್ಪಿಗೆ ಸೂಚಿಸಿದೆ ಎಂದು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಮಾಹಿತಿ ನೀಡಿದ್ದಾರೆ.
ಅಭಿವೃದ್ದಿ ವಿಷಯದಲ್ಲಿ ಕಳೆದ 10 ವರ್ಷಗಳಲ್ಲಿ ನಾನು ತಾಂಡಾ ಮತ್ತು ಗ್ರಾಮಗಳ ಅಭಿವೃದ್ದಿಗೆ ಕಾಳಜಿ ವಹಿಸಿದ್ದೇನೆ, ವಿಶೇಷವಾಗಿ ತಾಂಡಾಗಳಲ್ಲಿ ನೆಲೆಸಿರುವ ಜನರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಈ ಹೊಸ ಟವರಗಳು ಸಹಾಯವಾಗಲಿವೆ ಅವುಗಳಿಗೆ ಎಂದು ತಿಳಿಸಿದ್ದಾರೆ. ತದನಂತರ ಅಧಿಕಾರಿಗಳಿಂದ ಪರಿಶೀಲನೆ ಮಾಡಿಸಿ, ವರದಿಗಳು ಸರ್ಕಾರಕ್ಕೆ ಸಲ್ಲಿಸಿ, ಸರ್ಕಾರದ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಈ 19 ಟಾವರ್‍ಗಳು ಮಂಜೂರಿ ಮಾಡಿಸಿಕೊಂಡಿದ್ದೇನೆ.
ಕಮಲನಗರ ತಾಲೂಕಿನ ಚಿಕ್ಲಿ (ಯು) ಪಂಚಾಯತಿಯ ವಾಸಂ ತಾಂಡಾ, ಕಮಲನಗರ ಪಂಚಾಯತಿಯ ಮುಖೇಡ್ ಮತ್ತು ದಾಬಕಾ (ಸಿಎಚ್) ಪಂಚಾಯತಿಯ ರಾಮಸಿಂಗ್ ಥಾಂಡಾಗಳಲ್ಲಿ ಹೊಸ ಟಾವರ್ ಅಳವಡಿಸಲಾಗುತ್ತಿದೆ.