ವಿಶ್ವ ಮಾದಕ ದ್ರವ್ಯಗಳ ವಿರೋಧಿ ದಿನ
ಬೀದರ : ಜೂ.28: ನಗರದ ಪ್ರತಿಷ್ಠಿತ ಬಿ.ವಿ. ಭೂಮರಡ್ಡಿ ಮಹಾವಿದ್ಯಾಲಯದಲ್ಲಿ ವಿಶ್ವ ಮಾದಕ
ದ್ರವ್ಯಗಳ ವಿರೋಧಿ ದಿನವನ್ನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಪಿ. ವಿಠ್ಠಲ ರಡ್ಡಿ ಹಾಗೂ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿಯಾದ ಶ್ರೀ ಚಂದ್ರಕಾಂತ ಪೂಜಾರಿ ಇವರ ಅಮೃತ ಹಸ್ತದಿಂದ ಸಸಿಗೆ ನೀರೆಯುವುದರ ಮುಖಾಂತರ ಉದ್ಘಾಟಿಸಲಾಯಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ಚಂದ್ರಕಾಂತ ಪೂಜಾರಿ ಮಾತನಾಡುತ್ತಾ ಮಾದಕ ದ್ರವ್ಯ ಸೇವನೆಯಿಂದ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತಿದೆ. ಮಕ್ಕಳ ಮೇಲೆ ತಂದೆ ತಾಯಿಗಳು ವಿಶ್ವಾಸವಿಟ್ಟು ನಿಮಗೆ ಮಹಾವಿದ್ಯಾಲಯಕ್ಕೆ ಕಳುಹಿಸಿ ಉನ್ನತ ಅಂಕಗಳು ಪಡೆದು ಉನ್ನತ ಹುದ್ದೆ ಪಡೆಯುತ್ತಾನೆಂದು ಕನಸಿನಿಂದ ಕೂಡಿರುತ್ತಾನೆ. ಅವರ ಕನಸನ್ನು ನೀವು ದುಶ್ಚಟಕ್ಕೆ ಬಲಿಯಾಗದೆ ನಿಮ್ಮ ಭವಿಷ್ಯ ನಿಮ್ಮ ಕುಟುಂಬದವರನ್ನು ನೆನಸಿಕೊಂಡು ನಿಮ್ಮ ಭವಿಷ್ಯ ನಿರ್ಮಾಣ ಮಾಡಿಕೊಳ್ಳಿರೆಂದು ನುಡಿದರು.
ಈ ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಪಿ. ವಿಠ್ಠಲ ರಡ್ಡಿಯವರು ಮಾತನಾಡುತ್ತಾ ಮಾದಕ ದ್ರವ್ಯದ ಚಟದಿಂದ ವಿದ್ಯಾರ್ಥಿಗಳ ಭವಿಷ್ಯ ಹಾಗೂ ಹಣದ ಅಪಮೌಲ್ಯವಾಗುತ್ತದೆ. ಸಜ್ಜನರಸಂಗ ಲೇಸೆಂದು ಹೇಳಿದ 12ನೇ ಶತಮಾನದ ಶಿವಶರಣರ ಮಾತನ್ನು ನಾವು ಯಾವಾಗಲು ಚಾಚುತಪ್ಪದೇ ಪಾಲಿಸಬೇಕು. ಇಂದಿನ ಹೊಸ ಚಲನ ಚಿತ್ರಗಳ ಪ್ರಭಾವದಿಂದಲೂ ಸಹ ವಿದ್ಯಾರ್ಥಿಗಳ ಹವ್ಯಾಸಗಳು ಬದಲಾಗುತ್ತಿವೆ. ಚಲನಚಿತ್ರ ಮಂಡಳಿಯವರು ಮಾದಕ ದ್ರವ್ಯ ಸೇವೆನೆಯಂತಹ ದೃಶ್ಯಗಳನ್ನು ತಡೆಹಿಡಯಬೇಕು ಹಾಗೂ ಸರ್ಕಾರದವರು ಇದರ ಬಗ್ಗೆ ಸಾಕ್ಷ್ಯ ಚಿತ್ರಗಳನ್ನು ಪ್ರದರ್ಶಸಿಸಬೇಕು ಹಾಗೂ ಗ್ರಾಮಗಳಲ್ಲಿ ಅನಕ್ಷರಕ್ಷಸ್ಥ ಜನರನ್ನು ನಾಟಕಗಳ ಮುಖಾಂತರ ಅವರಿಗೆ ಮಾದಕ ದ್ರವ್ಯ ಸೇವನೆಯ ದುಷ್ಪ್ಪರಿಣಾಮ ಕುರಿತು ಅವರಿಗೆ ಮನವರಿ ಮಾಡಿಕೊಡಬೇಕು ಎನ್.ಸಿ.ಸಿ. ಎನ್.ಎಸ್.ಎಸ್. ವಿದ್ಯಾರ್ಥಿಗಳು ತಮ್ಮ ಗ್ರಾಮಗಳಲ್ಲಿ ಸ್ವ ಇಚ್ಛೆಯಿಂದ ಜಾಗ್ರತಿ ಮೂಡಿಸಬೇಕೆಂದು ಮಾರ್ಮಿಕವಾಗಿ ನುಡಿದರು.
ಕಾರ್ಯಕ್ರಮದ ವೇದಿಕೆ ಮೇಲೆ ಗಾಂಧಿಗಂಜ ಪೋಲಿಸ್ ಠಾಣೆಯ ಪಿ.ಎಸ್.ಐ. ಅಧಿಕಾರಿಗಳಾದ ಶ್ರೀ ಹಣಮರಡ್ಡಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲರಾದ ಶ್ರೀ ಅನೀಲಕುಮಾರ ಅಣದೂರೆಯವರು ಮಾದಕ ದ್ರವ್ಯ ವಿರೋಧಿ ದಿನದ ಅಂಗವಾಗಿ ಎಲ್ಲರಿಗೂ ಪ್ರತಿಜ್ಞಾ ವಿಧಿ ಬೋಧಿಸಿದರು.
ಕಾರ್ಯಕ್ರಮ ಮೊದಲಿಗೆ ಕರ್ನಾಟಕ ಪ್ರೌಢ ಶಾಲೆ ಎನ್.ಸಿ.ಸಿ. ಅಧಿಕಾರಿಯಾದ ಶ್ರೀ ಮಹಮ್ಮದ್ ರಫೀ ತಾಳಿಕೋಟೆ ಸ್ವಾಗತಿಸಿದರೆ, ಎನ್.ಸಿ.ಸಿ. ಅಧಿಕಾರಿಯಾದ ಶ್ರೀ ಮಾರುತಿ ಭೀಮಣ್ಣಾ ಸಂಚಾಲನೆ ಮಾಡಿದರು ವಿದ್ಯಾರ್ಥಿ ಕಲ್ಯಾಣಾಧಿಕಾರಿಗಳಾದ ಡಾ. ಮಲ್ಲಿಕಾರ್ಜುನ ಕೋಟೆ ವಂದಿಸಿದರು
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಪ್ರಾಧ್ಯಾಪಕರು ಹಾಗೂ ಬೋಧಕೇತರ ಸಿಬ್ಬಂದಿಗಳು ಹಾಜರಿದ್ದರು.