ಚಿಕ್ಲಿ (ಜೆ)ದಲ್ಲಿ ಹಾಲು ಖರೀದಿ ಕೇಂದ್ರಕ್ಕೆ ಚಾಲನೆ
ಔರಾದ : ಜೂ.28:ಡಾ. ವೀರೇಂದ್ರ ಹೆಗ್ಗಡೆಯವರು ಈ ಭಾಗದಲ್ಲಿ ಹಾಲಿನ ಉತ್ಪನ್ನ ಮತ್ತು ಹೈನೊಧ್ಯಮಕ್ಕೆ ಉತ್ತೇಜನ ನೀಡಲು ತಮ್ಮ ಸಂಸದೀಯ ನಿಧಿಯಿಂದ ಎರಡು ವರ್ಷದಲ್ಲಿ 5 ಕೋಟಿಗಿಂತಲೂ ಹೆಚ್ಚಿನ ಅನುದಾನ ನೀಡಿರುವುದು ಅತ್ಯಂತ ಅಮೋಘಕಾರ್ಯವಾಗಿದೆ. ಈ ಭಾಗದ ರೈತರು ಇದರ ಸದುಪಯೋಜನೆ ಪಡೆದುಕೊಳ್ಳಬೇಕು ಎಂದು ಹೈನು ಅಭಿವೃದ್ಧಿ ಜಿಲ್ಲಾ ನಿರ್ದೇಶಕ ಡಾ. ಎಸ್.ಎಸ್ ಹಿರೇಮಠ ಹೇಳಿದರು.
ಗುರುವಾರ ತಾಲುಕಿನ ಚಿಕ್ಲಿ(ಜೆ)ದಲ್ಲಿ ಸಂಸದರ ನಿಧಿಯಲ್ಲಿ ನಿರ್ಮಿಸಿದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಹಾಲು ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬೀದರ್ ಜಿಲ್ಲೆಯಲ್ಲಿ ಹಾಲಿನ ಉತ್ಪನ್ನಕ್ಕೆ ವಿಫುಲ ಅವಕಾಶಗಳಿವೆ. ರೈತರು ಉತ್ತಮ ರೀತಿಯ ತಳಿಗಳ ರಾಸುಗಳನ್ನು ಸಾಕಿ, ಅವುಗಳಿಂದ ಹಾಲಿನ ಉತ್ಪನ್ನಗಳನ್ನು ಪಡೆದು ಹೆಚ್ಚಿನ ಆದಾಯ ಪಡೆಯಬೇಕು ಎಂದರು.
ಎಸ್ ಕೆ ಡಿ ಆರ್ ಡಿಪಿ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರವೀಣಕುಮಾರ ಮಾತನಾಡಿ, ಯೋಜನೆಯಲ್ಲಿ ಹತ್ತು ಹಲವಾರು ಮಹತ್ವಕಾಂಕ್ಷೆ ಜನಪರ ಯೋಜನೆಗಳು ಗ್ರಾಮೀಣ ಭಾಗದ ಜನರ ಮನೆ ಬಾಗಿಲಿಗೆ ಮುಟ್ಟಿಸುವ ಮಹತ್ತರ ಕಾರ್ಯವನ್ನು ಪೂಜ್ಯರ ಗರಡಿಯಲ್ಲಿ ಜರುಗುತ್ತಿದೆ. ಈ ಭಾಗದಲ್ಲಿ ಹಾಲಿನ ಉತ್ಪನ್ನಕ್ಕೆ ಬೇಡಿಕೆ ಹಾಗೂ ಉತ್ತಮ ವಾತವರಣ ಇರುವುದರಿಂದ ಜನರು ವಲಸೆ ಹೋಗದೇ ತಮ್ಮೂರಿನಲ್ಲಿಯೇ ಜಾನುವಾರುಗಳನ್ನು ಸಾಕಿ ಅದರಿಂದ ಬರುವ ಹಾಲನ್ನು ಮಾರಾಟ ಮಾಡಿ ಉತ್ತಮ ಆದಾಯ ಗಳಿಸಬಹುದೆಂದರು.
ಜಿಲ್ಲಾ ಜನಜಾಗೃತಿ ಸದಸ್ಯ ಮಲ್ಲಪ್ಪ ಗೌಡಾ ಮಾತನಾಡಿ, ಎಸ್ ಕೆ ಡಿ ಆರ್ ಡಿಪಿಯ ಯೋಜನೆಗಳು ದೂರದ ಧರ್ಮಸ್ಳಳದಿಂದ ರಾಜ್ಯದ ಉತ್ತರದ ತುತ್ತತುದಿಯ ಬೀದರ್ ಜಿಲ್ಲೆಯ ಎಲ್ಲ ತಾಲುಕುಗಳಲ್ಲಿ ಸಿಗುತ್ತಿರುವುದು ಎಲ್ಲರ ಪುಣ್ಯವಾಗಿದೆ. ಯೋಜನೆಯಲ್ಲಿ ಬರುವ ಸೌಲಭ್ಯಗಳನ್ನು ಎಲ್ಲರು ಪಡೆದುಕೊಂಡು ಸಮೃದ್ಧ ಜೀವನಕ್ಕೆ ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಸೌಕತ್ ಅಲಿ, ಗ್ರಾಪಂ ಅಧ್ಯಕ್ಷೆ ಈಶ್ವರಮ್ಮ, ರಾಘವೇಂದ್ರಗೌಡಾ, ಕೃಷಿ ಮೇಲ್ವಿಚಾರಕ ಬಸವರಾಜ್, ಹೈನುಗಾರಿಕೆ ಸಹಾಯಕ ಪ್ರಬಂಧಕ ನಿತೀಶ ಕುಮಾರ್, ಕೆ ಎಂ ಎಫ್ ವಿಸ್ತಿರ್ಣಾಧಿಕಾರಿ ಸೋಮಶೇಖರ್, ದೀಪಕ್ ಸಜ್ಜನಶೆಟ್ಟಿ, , ಸುಭಾಸ ಪಾಟೀಲ್, ಕಿಶೋರ್ ಪಾಟೀಲ್ , ಯೂನುಸ್ ಮಿಯಾ,ಭಾನುದಾಸ್ ರೆಡ್ಡಿ, ಪಿಲ್ಲೂ ಜಾಗೀರದಾರ್, ಬಂಡಯ್ಯ ಸ್ವಾಮಿ ಇತರರಿದ್ದರು.