ಆಟೋ ಚಾಲಕರು ಕಾನೂನು ಪಾಲನೆ ಮಾಡಿ : ಸಿಪಿಐ ಠಾಕೂರ
ಔರಾದ : ಜೂ.28:ಪಟ್ಟಣದ ಔರಾದ ಪೆÇಲೀಸ್ ಠಾಣೆ ಆವರಣದಲ್ಲಿ ಆಟೊ ಚಾಲಕರ ಸಭೆ ನಡೆಸಿದ ಪಿಎಸ್‍ಐ ಉಪೇಂದ್ರ ಹಾಗೂ ಸಿಪಿಐ ರಘುವೀರಸಿಂಗ್ ಠಾಕೂರ ಅವರು ಆಟೋ ಚಾಲಕರಿಗೆ ಕಾನೂನಾತ್ಮಕವಾಗಿ ಆಟೋ ಚಾಲನೆ ಬಗ್ಗೆ ತಿಳುವಳಿಕೆ ನೀಡಿದರು.
ಕಡ್ಡಾಯವಾಗಿ ಚಾಲನ ಪರವಾನಿಗೆ ಮತ್ತು ಅಗತ್ಯ ದಾಖಲೆಗಳನ್ನು ಹೊಂದಿರಬೇಕು. ಸಮವಸ್ತ್ರ ಕಡ್ಡಾಯವಾಗಿ ಧರಿಸಬೇಕು. ಕುಡಿದು ಆಟೋ ಚಾಲನೆಗೆ ಕಾನೂನು ಕ್ರಮ. ಅನುಮಾನಾಸ್ಪಾದಕ ವೃತ್ತಿಗಳು ಕಂಡು ಬಂದಲ್ಲಿ ಪೆÇೀಲೀಸರಿಗೆ ಮಾಹಿತಿ ನೀಡಬೇಕು. ರಸ್ತೆಗಳ ಬದಿಯಲ್ಲಿ ಅಡ್ಡಾದಿಡ್ಡಿ ವಾಹನಗಳನ್ನು ನಿಲ್ಲಿಸಬಾರದು. ಪ್ರಯಾಣಿಕರ ಜೊತೆಗೆ ಸೌಜನ್ಯದಿಂದ ವರ್ತಿಸಿ. ಪೆÇೀಲೀಸ್ ಇಲಾಖೆಯೊಂದಿಗೆ ಅಪಘಾತ ಅಪರಾಧ ಚಟುವಟಿಕೆಗಳ ತಡೆಗೆ ಸಹಕಾರ ನೀಡಬೇಕು. ಅನಗತ್ಯ ದಂಡ ವಿಧಿಸದಂತೆ ಚಾಲನೆ ಮಾಡಿ. ಮಹಿಳೆಯರು, ವೃದ್ಧರು, ವಿದ್ಯಾರ್ಥಿನಿಯರ ಜೊತೆ ಭ್ರಾತೃತ್ವದಿಂದ ನಡೆದುಕೊಳ್ಳಿ. ಆಟೋ ಚಾಲಕರು ಸಮಾಜಕ್ಕೆ ಮಾದರಿಯಾಗಬೇಕು ಎಂದು ತಿಳಿಸಿದರು.