ಯಶಸ್ವಿಯಾಗಿ ಜರುಗಿದ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರ
ಚಿಟಗುಪ್ಪಾ : ಜೂ.28:ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೀದರ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.) ವಾರ್ಷಿಕ ವಿಶೇಷ ಶಿಬಿರವು ಯಶಸ್ವಿಯಾಗಿ ಮುಕ್ತಾಯಗೊಂಡಿತು. ಒಂದು ವಾರ ನಡೆದ ಶಿಬಿರದಲ್ಲಿ ್ಲ 100 ಶಿಬಿರಾರ್ಥಿಗಳು ಭಾಗವಹಿಸಿದರು, ಶಿಬಿರದಲ್ಲಿ ಶ್ರಮದಾನ, ಸಂಪನ್ಮೂಲ ತಜ್ಞರಿಂದ ವಿಶೇಷ ಉಪನ್ಯಾಸಗಳು, ಸಾಂಸ್ಕøತಿಕ ಕಾರ್ಯಕ್ರಮಗಳು, ಸಾಮಾಜಿಕ ಜಾಗೃತಿ ಮೂಡಿಸುವ ರೂಪಕಗಳು, ಚಿಟಗುಪ್ಪಾ ಸಮೂದಾಯ ಆರೋಗ್ಯ ಕೇಂದ್ರ ಹಾಗೂ ಬಸ್ ನಿಲ್ದಾಣದಲ್ಲಿ ಸ್ವಚ್ಚತಾ ಅಭಿಯಾನ, ಪ್ರತಿ ನಿತ್ಯ ಊಟದ ವ್ಯವಸ್ಥೆ, ಮನರಂಜನೆ ಕಾರ್ಯಕ್ರಮಗಳು, ಸಸಿ ನೆಡುವದು ಸೇರಿದಂತೆ ಹಲವು ಅರ್ಥಪೂರ್ಣ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯತು
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಸಾಹಿತಿ ಡಾ, ಜಯದೇವಿ ಗಾಯಕವಾಡ ಅವರು ಇಂದಿನ ಯುವಜನತೆ ವಿಜ್ಞಾನದ ಜೊತೆಗೆ ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು. ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯರಾದ ಡಾ. ಸುರೇಂದರ್ ಸಿಂಗ್ ಅವರು ಎನ್.ಎಸ್.ಎಸ್ ಶಿಬಿರದಿಂದ ಪುಸ್ತಕದ ಜ್ಞಾನದ ಜೊತೆಗೆ ಸಮಾಜದ ಬದುಕಿನ ಜ್ಞಾನ ಪಡೆಯಲು ಸಾಧ್ಯ. ವಾರ್ಷಿಕ ವಿಶೇಷ ಶಿಬಿರದಿಂದ ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತೆಯ ಮನೋಭಾವನೆ ಮೂಡುತ್ತದೆ ಹಾಗೂ ವ್ಯಕ್ತಿತ್ವ ವಿಕಸನ ವಾಗುತ್ತದೆ ಎಂದರು.
ಎನ್.ಎಸ್.ಎಸ್ ಅಧಿಕಾರಿ ಡಾ. ವೀರಶೆಟ್ಟಿ ಮೈಲೂರಕರ್ ಅವರು ಶಿಬಿರದ ವರದಿ ಮಂಡಿಸಿ ಬೀದರ ವಿಶ್ವ ವಿದ್ಯಾಲಯದ ಆಶ್ರಯದಲ್ಲಿ ನಡೆದ ಪ್ರಥಮ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರವು ‘ವಿಜ್ಞಾನ ಮತ್ತು ವೈಜ್ಞಾನಿಕ ಮನೋಭಾವನೆ ಯುವಕರ ಪಾತ್ರ’ ಸಂದೇಶದೊಂದಿಗೆ ಯಶಸ್ವಿಯಾಗಿ ನಡೆದಿದೆ ಎಂದರು. ಶಿಬಿರಾರ್ಥಿಗಳಾದ ಐಶ್ವರ್ಯ, ರಕ್ಷಿತಾ, ಅನುಭವ ಹೇಳುತ್ತಾ, ಶಿಬಿರದಿಂದ ಹಲವು ಹೊಸ ವಿಷಯಗಳ ಜ್ಞಾನ ಪಡೆದಿದ್ದೆವೆ ಎಂದರು. ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾ ಅಧ್ಯಕ್ಷ ಅನೀಲಕುಮಾರ ಸಿಂಧೆ ಮಾತನಾಡಿ ಎನ್.ಎಸ್.ಎಸ್ ಶಿಬಿರವು ಜೀವನದಲ್ಲಿ ಎಂದು ಮರೆಯದ ಅನುಭವ ನೀಡುತ್ತದೆ ಎಂದರು.
ಹಿರಿಯ ಪ್ರಾಧ್ಯಾಪಕರಾದ ಡಾ. ಕೆ.ಶಿವಕುಮಾರ, ಡಾ. ಶಿವಕುಮಾರ ಬಿರಾದರ,ಮುಖಂಡರಾದ ಡಾ. ರವೀಂದ್ರಕುಮಾರ ಟಿಳೆಕರ್, ಮೀನಾಕ್ಷಿ, ಡಾ ಸಯೀದಾ ಬಾನು, ಡಾ ಶೇಷರಾವ, ರಮೇಶಕುಮಾರ ಬಿರಾದರ, ಶಾಂತಕುಮಾರ ಪಾಟೀಲ, ಡಾ. ಚಂದ್ರಕಾಂತ, ಶಂಕ್ರೆಪ್ಪಾ ಸೇರಿದಂತೆ ಅತಿಥಿ ಉಪನ್ಯಾಸಕರು, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.