144 ಸೆಕ್ಷನ ಜಾರಿಯ ನಡುವೆ ಅರಳಗುಂಡಗಿ ಗ್ರಾ.ಪಂ ಅಧ್ಯಕ್ಷ ಚುನಾವಣೆಇಬ್ಬರು ಗ್ರಾಮ ಪಂಚಾಯತಿ ಸದಸ್ಯರ ಬಂಧನ
ಯಡ್ರಾಮಿ:ಜೂ.28:ತಾಲ್ಲೂಕಿನ ಅರಳಗುಂಡಗಿ ಗ್ರಾಮ ಪಂಚಾಯತಿನಲ್ಲಿ 144 ಸೆಕ್ಷನ್ ಜಾರಿಯ ನಡುವೆ ಅಧ್ಯಕ್ಷ ಚುನಾವಣೆ ಹಾಗೂ ಇಬ್ಬರೂ ಗ್ರಾಮ ಪಂಚಾಯತಿ ಸದಸ್ಯರ ಬಂಧನ ಮಾಡಿದ ಘಟನೆ ನಡೆದಿದೆ.
ಅರಳಗುಂಡಗಿ 25 ಸದಸ್ಯರು ಇರುವ ಗ್ರಾಮ ಪಂಚಾಯತಿ ಅಧ್ಯಕ್ಷ ಎರಡನೇ ಅವಧಿಗೆ( ಎಸ್.ಸಿ ) ಮೀಸಲಾದ ಅಧ್ಯಕ್ಷ ಸ್ಥಾನದ ಚುನಾವಣೆಗೆ ಇಬ್ಬರಿಗೂ ಪೈಪೆÇೀಟಿಯ ನಡುವೆ ಗಲಾಟೆ ಜಗಳು ಆಗಿತ್ತು.
ಈ ಕುರಿತು ಅಧ್ಯಕ್ಷ ಸ್ಥಾನ ಗೆಲವು ಸಾದಿಸಿದ ಸಪ್ನಾ ಗಂಡ ನಿಂಗರಾಜ ಕಡಿ ಅವರಿಗೆ ನಿಮ್ಮ ಹಂಡತಿಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ನಿಲ್ಲಿಸಬೇಡ ಎಂದು ಸದಸ್ಯರಾದ ಮಾಹಾಂತೇಶ ಶ್ರೀಗಿರಿ ಹಾಗೂ ರಾಜು ಗೌಂಡಿ ಬೆದರಿಕೆ ಹಾಗೂ ಜಾತಿ ನಿಂಧನೆ ಮಾಡಿದ್ದರು. ಅವರ ವಿರುದ್ಧ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲೆಯಾಗಿತ್ತು.
ಗುರುವಾರ ಪೆÇಲೀಸ್ ಸೂಕ್ತ ಭದ್ರತೆಯ ನಡುವೆ ಗ್ರಾಮ ಪಂಚಾಯತಿಯಲ್ಲಿ ಎರಡೂ ತಂಡದ ಸದಸ್ಯರಿಂದ ಚುನಾಯಿತ ಸದಸ್ಯರಿಂದ ಚುನಾವಣೆ ನಡೆಯಿತ್ತು.
ಸಪ್ನಾ ಗಂಡ ನಿಂಗರಾಜ ಕಡಿ ಅವರಿಗೆ 13 ಮತದಾನ ಪಡೆಯುವ ಮೂಲಕ ಜಯಶಾಲಿಯಾದರೆ.ಪ್ರತಿ ಸ್ಪಧಿಯಾದ ಲಕ್ಷೀಬಾಯಿ ಸುಬಣ್ಣ ಗೋಬ್ಬರವಾಡಗಿ ಅವರು 12 ಮತಗಳು ಪಡೆದು ಪರಾಜಿತರಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ತಿಳಿಸಿದ್ದಾರೆ.
ಚುನಾವಣೆಯಾದ ತಕ್ಷಣ ಮತದಾನ ಕೇಂದ್ರದಲ್ಲಿ ಬೆದರಿಕೆ ಹಾಗೂ ಜಾತಿ ನಿಂಧನೆ ಕೇಸ್ ಆರೋಪಿಗಳಾದ ಮಾಹಾಂತೇಶ ಶ್ರೀಗಿರಿ ಹಾಗೂ ರಾಜು ಗೌಂಡಿ ಗ್ರಾಮ ಪಂಚಾಯತಿ ಸದಸ್ಯರನ್ನು ಪೆÇಲೀಸರು ಅರೆಸ್ಟ್ ಮಾಡಿ ವಶಕ್ಕೆ ಪಡೆದುಕೊಳ್ಳಲಾಯಿತು.
ಗ್ರಾಮದಲ್ಲಿ 144 ಸೆಕ್ಷನ ಜಾರಿಯ ಪ್ರಯುಕ್ತ ಗ್ರಾಮದ ಯಾವುದೇ ಅಂಗಡಿ ಮುಗಟ್ಟುಗಳು ಬಂದ್ ಮಾಡಿಸಲಾಗಿತ್ತು.ಗ್ರಾಮವೇ ನೀರವ ಮೌನ ಕಂಡು ಬಂದಿತ್ತು.ಈ ಸಂದರ್ಭದಲ್ಲಿ ಪ್ರಭಾರಿ ಎಸ್.ಪಿ.ಹಾಗು ಇಬ್ಬರು ತಹಸೀಲ್ದಾರ 130 ಹೆಚ್ಚು ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು ಎಂದು ಪೆÇಲೀಸ್ ಮಾಹಿತಿ ನೀಡಿದ್ದಾರೆ.