ನಾಡಪ್ರಭು ಕೆಂಪೇಗೌಡರು ಓರ್ವ ಉತ್ತಮ ಆಡಳಿತಗಾರರಾಗಿದ್ದರು : ಮಹಾದೇವ ಮುರಗಿ
ವಿಜಯಪುರ, ಜೂ. 28: ನಾಡಪ್ರಭು ಕೆಂಪೇಗೌಡರ ದೂರದೃಷ್ಟಿವುಳ್ಳವಿಚಾರ-ಯೋಜನೆಗಳು ನಾಡಿನ ಸರ್ವೋತ್ತಮ ಬೆಳವಣಿಗೆಗೆ ಸಹಕಾರಿಯಾಗಿದ್ದು, ಅವರು ಓರ್ವ ಉತ್ತಮ ಆಡಳಿತಗಾರರಾಗಿದ್ದರು ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಹಯೋಗದಲ್ಲಿ ಗುರುವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡ ನಾಡಪ್ರಭು ಕೆಂಪೇಗೌಡರ 515 ನೇ ಜಯಂತಿ ಕಾರ್ಯಕ್ರಮವದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾಡಿಗಾಗಿ ತಮ್ಮದೇ ಆದ ವಿಶಿಷ್ಟ ಸೇವೆಗಳ ಸಲ್ಲಿಸಿದ ವ್ಯಕ್ತಿಗಳ ನೆನಪಿಡುವ ದೃಷ್ಟಿಯಲ್ಲಿ ಅಂತಹ ಮಹನೀಯರ ಜಯಂತಿಗಳನ್ನು ಆಚರಿಸಲಾಗುತ್ತಿವೆ. ಮಹಾನ್ ವ್ಯಕ್ತಿಗಳು ಯಾವುದೇ ಒಂದು ವರ್ಗಕ್ಕೆ ಸೀಮಿತವಾಗಿರುವುದಿಲ್ಲ. ಕೆಂಪೇಗೌಡರು ಎಲ್ಲ ವರ್ಗದ ಹಿತÀವನ್ನು ಬಯಸುವಂತವರಾಗಿದ್ದರು. ಹಿಂದೆ ಹಲವಾರು ರಾಜರ ಸಂಸ್ಥಾನಗಳು ಆಳ್ವಿಕೆ ಮಾಡಿವೆ ಅದರಲ್ಲಿ ಆಡಳಿತ ಒಂದು ಭಾಗವಾಗಿತ್ತು. ಆಡಳಿತ ಮೇಲೆಯೇ ರಾಜ್ಯಭಾರ ಮಾಡುತ್ತಿದ್ದರು ನಾಡ ಪ್ರಭು ಕೆಂಪೆಗೌಡರು ನಗರಗಳನ್ನು ನಿರ್ಮಾಣ ಮಾಡುವುದರಲ್ಲಿ ಹಾಗೂ ನಗರಗಳು ಸರ್ವೋತ್ತಮುಖ ಬೆಳೆವಣಿಗೆಗಾಗಿ ಅವರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.
ಒಂದು ನಗರವನ್ನು ನಿರ್ಮಿಸಲು ಮುಂದಿನ ನೂರಾರು ವರ್ಷಗಳ ಕಾಲ ಬಾಳುವ ಹಾಗೆ ಯೋಜನೆಗಳನ್ನು ರೂಪಿಸುತ್ತಿದ್ದರು ಬೆಂಗಳೂರಿನ ಸುತ್ತ ಮುತ್ತಲಿನ ಅನುಕೂಲಕರವಾಗಿರುವ ವಾತಾವರಣವನ್ನು ಗಮನಿಸಿ ಬೆಂಗಳೂರು ನಗರವನ್ನು ವ್ಯವಸ್ಥಿತವಾಗಿ ನಿರ್ಮಾಣ ಮಾಡಿರುದಕ್ಕೆ ಅವರನ್ನು ನಾಡ ಪ್ರಭು ಕೆಂಪೆಗೌಡರು ಎಂದು ಕರೆಯುತ್ತಾರೆ ಎಂದು ಹೇಳಿದರು.
ಜಿಲ್ಲಾ ಅವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲಿಕರಣ ಕಲ್ಯಾಣ ಇಲಾಖೆಯ ಅಧಿಕಾರಿ ರಾಜಶೇಖರ ದೈವಾಡಿ ಉಪನ್ಯಾಸ ನೀಡಿ, ನಾಡಿಗಾಗಿ ಸಮರ್ಪಣಾ ಭಾವದಿಂದ ಕೆಲಸ ಮಾಡಿ ಕರ್ತವ್ಯ ನಿμÉ್ಠ ಮೆರೆದು ತ್ಯಾಗ ಬಲಿದಾನ ಮಾಡಿದ ಕೆಂಪೇಗೌಡರ ಬದುಕು ನಮಗೆಲ್ಲ ಮಾದರಿಯಾಗಿದೆ. ಅವರ ಆಡಳಿತದಲ್ಲಿ ದೂರದೃಷ್ಟಿ ಯೋಜನಾ ಬದ್ದವಾಗಿ ಕಾರ್ಯಗಳನ್ನು ನಿರ್ವಹಿಸುವ ರೀತಿ ನಿಸ್ವಾರ್ಥ ಸೇವೆ ನಮಗೆಲ್ಲ ಪ್ರೇರಣೆಯಾಗಿದೆ. ಬೆಂಗಳೂರು ನಗರ ಜಗತ್ತಿನಾದ್ಯಂತ ಪ್ರಚಲಿತವಾಗಲು ಕೆಂಪೆಗೌಡರ ಯೋಜನಾ ಬದ್ದ ಕಾರ್ಯವೇ ಕಾರಣವಾಗಿದೆ ಎಂದು ಹೇಳಿದರು.
ನಾಡ ಪ್ರಭುಕೆಂಪೆಗೌಡರ ಕುರಿತು ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಭಾಷಣ ಸ್ಪರ್ದೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕನ್ನಾನ ಅಬ್ದುಲ್ ಹಮೀದ ಮುಶ್ರೀಪ್, ಉಪವಿಭಾಗಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟಿ, ತಹಶೀಲ್ಧಾರ ಕವಿತಾ, ಜಿಲ್ಲಾ ಪಂಚಾಯತ ಅಧಿಕಾರಿ ಅನುಸೂಯಾ ಚಲವಾದಿ, ಮಹಾನಗರ ಪಾಲಿಕೆ ಆಯುಕ್ತರಾದ ಬದ್ರುದ್ದೀನ ಸೌದಾಗರ, ಸಮಾಜದ ಮುಖಂಡರುಗಳಾದ ರವಿಕಾಂತ ಬಿರಾದಾರ, ಸಂಕೇತಗೌಡ ಬ್ಯಾಕೋಡ, ಸಿದ್ದು ಹೊಸಮನಿ, ವಸಂತ ಹಂಡಿ, ಕೃಷ್ಣ ಚವ್ಹಾಣ, ಸಿದ್ದು ಆಚೆಗಾವ್, ಭೀಮರಾಯ ಜಿಗಜಿಣಗಿ, ಜಿಲ್ಲಾದಿಕಾರಿಗಳ ಕಚೇರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಂತೊಷ ಬೋವಿ ಸ್ವಾಗತಿಸಿ ವಂದಿಸಿದರು.