ಮಕ್ಕಳಿಗೆ ಹೋಳಿಗೆ ಊಟ ಮಾಡಿ ಉಣಬಡಿಸಿದ ಸಹ ಶಿಕ್ಷಕಿಯರು
ಇಲಕಲ್ಲ :ಜೂ.28: ಶಿಕ್ಷಕರು ತಾನು ಕಲಿಸುವ ಮಕ್ಕಳಿಗೆ ಶಿಕ್ಷಣದ ದಾರಿಯ ಜೊತೆಗೆ ಊಟದ ಸವಿರುಚಿಯನ್ನು ಬಡಿಸುವ ಮೂಲಕ ಎಲ್ಲರಿಗೂ ಮಾದರಿಯಾಗುವಂತೆ ಶಿಕ್ಷಕಿಯರು ಇತರರಿಗೆ ಮಾದರಿಯಾಗಿದ್ದಾರೆ.
ಹೌದು ಇಳಕಲ್ ತಾಲೂಕಿನ ಹಿರೇ ಓತಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿಯರು ತಾವು ಹೊಸದಾಗಿ ನೇಮಕಾತಿ ಹೊಂದಿ ಇದೇ ಶಾಲೆಗೆ ಬಂದ ನಂತರ ತಮ್ಮ ಮೊದಲ ಸಂಬಳದಲ್ಲಿ ಶಾಲೆಯ ಎಲ್ಲ ಮಕ್ಕಳಿಗೆ ಹೋಳಿಗೆ ಊಟ ಮಾಡಿ ಉಣಬಡಿಸುವ ಮೂಲಕ ಸಾರ್ಥಕತೆ ಮೆರೆದರು.
ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕರು,ಸಿಆರ್ ಪಿ ಯವರು ಹಾಗೂ ಎಸ್ ಡಿ ಎಮ್ ಸಿ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಮುಖ್ಯ ಗುರುಗಳು ಸಹ ಶಿಕ್ಷಕರು ಉಪಸ್ಥಿತರಿದ್ದರು.