ಶ್ರೇಷ್ಟ ವ್ಯಕ್ತಿತ್ವದಿಂದ ಸಮಾಜಕ್ಕೆ ದೊಡ್ಡ ಆಸ್ತಿಯಾಗಲು ಸಾಧ್ಯ
ಕಲಬುರಗಿ: ಜೂ.28:ಅಹಂಕಾರ, ಕೋಪ, ಅಸೂಯೆರಹಿತ, ಜಾತಿ, ವರ್ಗಗಳಿಗೆ ಆದ್ಯತೆಯನ್ನು ನೀಡದೆ, ಮಾನವೀಯತೆಯ ಅಳವಡಿಕೆ, ಸದಾ ಪ್ರಜ್ಞಾಪೂರ್ವಕ ವರ್ತನೆ, ಸುಖ-ದುಖಃಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ, ಗುರು-ಹಿರಿಯರನ್ನುಗೌರವಿಸುವ, ಪರಸ್ಪರ ಪ್ರೀತಿ,ಸ್ನೇಹ,ಸಹಬಾಳ್ವೆಯಿಂದ ಜೀವನ ಸಾಗಿಸುವ, ಸಕಾರಾತ್ಮಕವಾದಚಿಂತನೆ, ಸಮಾಜ ಸೇವೆ ಅಂತಹ ಮುಂತಾದ ಗುಣಗಳು ಶ್ರೇಷ್ಟ ವ್ಯಕ್ತಿಯ ಲಕ್ಷಣಗಳಾಗಿದ್ದು, ಇಂಥ ವ್ಯಕ್ತಿಗಳು ಸಮಾಜದ ದೊಡ್ಡ ಆಸ್ತಿಯಾಗಿದ್ದಾರೆ ಎಂದುಉಪನ್ಯಾಸಎಚ್.ಬಿ.ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯಖಾದ್ರಿಚೌಕ್‍ನಲ್ಲಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದಶುಕ್ರವಾರಜರುಗಿದ’ವ್ಯಕ್ತಿತ್ವ ವಿಕಸನ ಕಾರ್ಯಕ್ರಮ’ವನ್ನುಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಉನ್ನತಅಧಿಕಾರ, ಸ್ಥಾನಮಾನ, ಹೆಚ್ಚಿನ ಹಣ, ಸಂಪತ್ತು, ಆಸ್ತಿ ಹೊಂದಿದವರುದೊಡ್ಡವರಾಗುವುದಿಲ್ಲ. ಬದಲಿಗೆ ಸಮಾಜದಲ್ಲಿರುವ ಬಡವರು, ಅಸಹಾಯರು, ಅನಾಥರು, ತುಳಿತಕ್ಕೆ ಒಳಗಾದವರು, ನಿರ್ಗತಿಕರಿಗೆ ಸಹಾಯ ಮಾಡಿ, ಅವರದುಃಖವನ್ನು ಕಳೆಯುವ, ಕಣ್ಣೀರನ್ನುಒರೆಸುವ ವ್ಯಕ್ತಿ ನಿಜವಾಗಿಯೂದೊಡ್ಡವರಾಗುತ್ತಾರೆ. ಮಹಾತ್ಮಗೌತಮ ಬುದ್ಧ, ವಿಶ್ವಗುರು ಬಸವಣ್ಣ, ಡಾ.ಬಾಬಾಸಾಹೇಬ್‍ಅಂಬೇಡ್ಕರ್‍ಅವರು ಈ ಸಾಲಿನಲ್ಲಿಅಗ್ರಗಣ್ಯರಾಗುತ್ತಾರೆಎಂದರು.
ಶ್ರೇಷ್ಟ ವ್ಯಕ್ತಿತ್ವ ಹೊಂದಬೇಕಾದರೆ, ಅಹಂಕಾರ, ಕೋಪ, ಅಸೂಯೆರಹಿತ, ಜಾತಿ, ವರ್ಗಗಳಿಗೆ ಆದ್ಯತೆಯನ್ನು ನೀಡದೆ, ಮಾನವೀಯತೆಯ ಅಳವಡಿಕೆ, ಸದಾ ಪ್ರಜ್ಞಾಪೂರ್ವಕ ವರ್ತನೆ, ಸುಖ-ದುಖಃಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ, ಗುರು-ಹಿರಿಯರನ್ನುಗೌರವಿಸುವ, ಪರಸ್ಪರ ಪ್ರೀತಿ,ಸ್ನೇಹ,ಸಹಬಾಳ್ವೆಯಿಂದ ಜೀವನ ಸಾಗಿಸುವ,ಸಕಾರಾತ್ಮಕವಾದಚಿಂತನೆ, ಸಮಾಜಸೇವೆ, ಸೃಜನಶೀಲತೆ, ಸಮತೋಲನವಾದಆಹಾರ, ವ್ಯಾಯಾಮ,ಯೋಗ,ಧ್ಯಾನ,ಪ್ರಾರ್ಥನೆ, ಹೊಂದಾಣಿಕೆ ಸ್ವಭಾವ, ವಾಸ್ತವವಾದಿಯಾಗಿರುವದು, ನೈತಿಕ ಮೌಲ್ಯಗಳ ಅಳವಡಿಕೆ, ಟೆನ್ಷನ ಮುಕ್ತ ಜೀವನ, ಸದಾಉತ್ಸಾಹ, ಉತ್ತಮ ನಡವಳಿಕೆ, ಆತ್ಮ ವಿಶ್ವಾಸ, ಕೀಳರಿಮೆಯನ್ನು ತ್ಯಜಿಸುವದು ಸೇರಿದಂತೆ ಮುಂತಾದ ಗುಣಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ ಎಂದರು.
ಸಂಸ್ಥೆಯಅಧ್ಯಕ್ಷಅಸ್ಲಾಂ ಶೇಖ್ ಮಾತನಾಡಿ, ಉತ್ತಮ ವ್ಯಕ್ತಿತ್ವ,ವ್ಯಕ್ತಿಯನ್ನು ಶಕ್ತಿಯನ್ನಾಗಿಸುತ್ತದೆ.ಇಂತಹ ವ್ಯಕ್ತಿಗಳು ಸಮಾಜದ ಬಹು ದೊಡ್ಡ ಆಸ್ತಿಯಾಗಿದ್ದಾರೆ. ವಿದ್ಯಾರ್ಥಿಗಳು ಬಾಲ್ಯದಿಂದಲೇ ಶ್ರೇಷ್ಟ ವ್ಯಕ್ತಿಗಳ ಸಾಧನೆಯ ಬಗ್ಗೆ ತಿಳಿದುಕೊಂಡು,ತಮ್ಮಜೀವನದಲ್ಲಿಅವರ ತತ್ವಗಳನ್ನು ಅಳವಡಿಸಿಕೊಂಡರೆ ನೀವುಕೂಡಾ ಶ್ರೇಷ್ಠ ವ್ಯಕ್ತಿಗಳಾಗಲು ಸಾಧ್ಯವಿದೆಎಂದು ನುಡಿದರು.
ಕಾರ್ಯಕ್ರಮದಲ್ಲಿಕಂಪ್ಯೂಟರ ಶಿಕ್ಷಕರಾದ ಪ್ರಿಯಾಂಕಾ ಉಜಳಂಬಿ, ನಿಲೊಫರ್ ಶೇಖ್, ಐಶ್ವರ್ಯ ಬಿರಾದಾರ, ಪೂಜಾಜಮಾದಾರ, ಪೂಜಾ ಹೂಗಾರ, ಸಾನಿಯಾ ಶೇಖ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.