ರೋಗ ನಿಯಂತ್ರಣಕ್ಕೆ ಜನರ ಸಹಕಾರ ಅಗತ್ಯ:ಶಿವಯೋಗಿ ಸಕ್ಪಾಲ್
ಸೇಡಂ, ಜೂ, 28: ಡೆಂಗ್ಯೂ ಮಹಾಮಾರಿ ರೋಗವು ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿದ್ದು ರೋಗ ನಿಯಂತ್ರಣಕ್ಕೆ ಜನರ ಸಹಕಾರ ಅಗತ್ಯ ಎಂದು ತಾಲೂಕ ಹಿರಿಯ ಆರೋಗ್ಯ ನಿರೀಕ್ಷಣ ಅಧಿಕಾರಿ ಶಿವಯೋಗಿ ಸಕ್ಪಾಲ್ ಹೇಳಿದರು. ಪಟ್ಟಣದ ಅಗ್ಗಿಬಸವೇಶ್ವರ ಕಾಲೊನಿ ಗೆ ಬೇಟಿ ಕೊಟ್ಟು ಜನರು ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಮತ್ತು ಡ್ರಮ್ ನೀರಿನ ತೊಟ್ಟಿಗಳು ವಾರದಲ್ಲಿ ಎರಡು ಬಾರಿ ಸ್ವಚ್ಛಗೊಳಿಸಿ ರೋಗ ಹರಡದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲೇ ಇದ್ದ ಆಶಾ ಕಾರ್ಯಕರ್ತೆಯರಿಗೆ ಸೂಚಿಸಿದರು, ಹಾಗೂ ಆಶಾ ಕಾರ್ಯಕರ್ತೆಯರು ನಗರದ ಎಲ್ಲಾ ಬ್ಲಾಕ್ ಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಿ ವರದಿಯನ್ನು ಸಲ್ಲಿಸಲು ತಿಳಿಸಿದರು. ಈ ವೇಳೆಯಲ್ಲಿ ವೈದ್ಯಾಧಿಕಾರಿಗಳ ಡಾ. ವೆಂಕಟೇಶ್ ಜೋಶಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಪ್ರೀತಿ ಮೇಲ್ವಿಚಾರಕರಾದ ಸಯ್ಯದ್ ಮಶಾಕ್ ಹಾಗು ಶಿವಪುತ್ರ ಮತ್ತು ಆಶಾ ಕಾರ್ಯಕರ್ತೆಯರಾದ ಶ್ರೀಮತಿ ಕಾವೇರಿ ಇದ್ದರು.