ಜನತಾ ಬಜಾರ್ ಸದಸ್ಯರಾಗಿ ಶ್ರೀನಿವಾಸ್  ಮೋತ್ಕರ್
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ.28: ಇಲ್ಲಿನ ಜನತಾ ಬಜಾರ್ ನ ಸದಸ್ಯರಾಗಿ ನಿನ್ನೆ ಪಾಲಿಕೆ ಸದಸ್ಯರೂ ಆಗಿರುವ ಶ್ರೀನಿವಾಸ್ ಮೋತ್ಕರ್ ನೇಮಕಗೊಂಡಿದ್ದಾರೆ. ನಗರದ 10 ನೇ ವಾರ್ಡಿನ ಸಹಕಾರ ಸಂಘದಿಂದ ಸದಸ್ಯತ್ವ ಖಾಲಿಯಾಗಿತ್ತು. ಅದಕ್ಕಾಗಿ  ಮೋತ್ಕರ್ ಅವರನ್ನು ಕೋ ಆಪ್ಟ್ ಸದಸ್ಯರನ್ನಾಗಿ  ನೇಮಕಗೊಂಡಿದ್ದಾರೆ.
ಈ‌ ಮೊದಲು ಈ ಸ್ಥಾನದಲ್ಲಿ ಪಿ.ಗಾದೆಪ್ಪ ಅವರ ಪತ್ನಿ ಇದ್ದರು. ಅವರು ಸಂಘದ ನಿರ್ದೇಶಕರಾಗಿ ಪುನರಾಯ್ಕೆ ಯಾಗದ ಕಾರಣ ತೆರವಾಗಿತ್ತು. ನೂತನವಾಗಿ ಜನತಾ ಬಜಾರ್ ಸದಸ್ಯರಾದ ಮೋತ್ಕರ್ ಅವರನ್ನು ಜನತಾ ಬಜಾರ್ ಅಧ್ಯಕ್ಷ ಜಿ.ನೀಲಕಂಠಪ್ಪ ಸ್ವಾಗಿತಿಸಿ ಅಭಿನಂದಿಸಿದರು.