ಸದನದಲ್ಲಿ ಗೂಂಡಾಗಿರಿ ನಡೆದರು ಅಚ್ಚರಿಯಿಲ್ಲ
ಬೆಂಗಳೂರು.ಜೂ.೨೮- ಪ್ಯಾಲೆಸ್ಟೈನ್ ಬೆಂಬಲಿಸಿದ ನಂತರ ಲೋಕಸಭೆಯಲ್ಲಿ ಗೂಂಡಾಗಿರಿ ಕಾಣಿಸಿದರೂ ಆಶ್ಚರ್ಯವಿಲ್ಲ ಎಂದು
ಎಂದು ರಕ್ಷಣಾ ತಜ್ಞ ಕರ್ನಲ್ ಆರ್.ಎಸ್.ಎನ್. ಸಿಂಗ್ ಹೇಳಿದರು.
ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ನಾಲ್ಕನೇ ದಿನದಂದು ಮಾತನಾಡಿದ ಅವರು, ಪ್ಯಾಲೆಸ್ಟೈನ್ ಅನ್ನು ಬೆಂಬಲಿಸುವ ಓವೈಸಿಯಂತಹ ಪ್ರತ್ಯೇಕತಾವಾದಿಗಳು ಸಂಸತ್ತಿನಲ್ಲಿ ಚುನಾಯಿತಗೊಂಡಿದ್ದಾರೆ. ಇದರಿಂದ ಇನ್ನು ಮುಂದಿನ ಕಾಲದಲ್ಲಿ ಲೋಕಸಭೆಯಲ್ಲಿ ಗೂಂಡಾಗಿರಿ ನಡೆದರೂ ಅಚ್ಚರಿ ಪಡಬೇಕಾಗಿಲ್ಲ. ಮುಸಲ್ಮಾನರಿಗೆಖುರಾನ್ ಮತ್ತು ಸಂವಿಧಾನ ಇವೆರಡರಲ್ಲಿ ಯಾವುದು ಶ್ರೇಷ್ಠ ಅಥವಾ ಕ್ರೈಸ್ತರಿಗೆ ಬೈಬಲ್ ಮತ್ತು ಸಂವಿಧಾನ ಇವೆರಡರಲ್ಲಿ ಯಾವುದು ಶ್ರೇಷ್ಠ ಎಂದು ಕೇಳಿದರೆ, ಅದರ ಉತ್ತರ ಏನಿರಬಹುದು ಎನ್ನುವುದು ನಮಗೆ ತಿಳಿದಿದೆ. ನಾವು ದೇಶ ಎಂದು ಯೋಚಿಸಿದಾಗ ಇದಕ್ಕಾಗಿ ರಚಿಸಲಾದ ಸಂವಿಧಾನವಿರುತ್ತದೆ. ಆದರೆ ನಾವು ‘ ರಾಷ್ಟ್ರ ಎಂದು ವಿಚಾರ ಮಾಡಿದಾಗ, ಅದಕ್ಕಾಗಿ ಲಿಖಿತ ಸಂವಿಧಾನದ ಆವಶ್ಯಕತೆಯಿರುವುದಿಲ್ಲ ಎಂದರು.
ಕರ್ನಾಟಕದ ರಿಷಿಹುಡ್ ವಿದ್ಯಾಲಯದ ಪ್ರೊಫೆಸರ್ ಕೆ. ಗೋಪಿನಾಥ್ ಅವರು ಮಾತನಾಡಿ, ಎ.ಐ.ನಿಂದ ದೊರೆಯುವ ಮಾಹಿತಿಯು ಕೇವಲ ‘ಊಹೆ ಮಾತ್ರವಾಗಿರುತ್ತದೆ. ಮೊದಲಿನಿಂದಲೂ ಯಾವ ಮಾಹಿತಿ ಲಭ್ಯವಿರುತ್ತದೆಯೋ, ಅದೇ ಮಾಹಿತಿಯನ್ನು ಕ್ರೋಢೀಕರಿಸಿ “ಎ.ಐ.” ನಲ್ಲಿ ಪ್ರಸಾರ ಮಾಡಲಾಗುತ್ತದೆ. ಎ.ಐ. ನಲ್ಲಿ ಅಳವಡಿಸಲಾಗಿರುವ ಮಾಹಿತಿಯು ಒಂದು ವೇಳೆ ಹಿಂದೂ ವಿರೋಧಿಯಾಗಿದ್ದರೆ, ನಮಗೆ ಹಿಂದೂವಿರೋಧಿ ಉತ್ತರಗಳೇ ಸಿಗುತ್ತವೆ. ಆದ್ದರಿಂದ, ’ಎ.ಐ.’ ನಂತಹ ತಂತ್ರಜ್ಞಾನವು ಸಮಸ್ಯೆಯಲ್ಲ. ಅದನ್ನು ಮುನ್ನಡೆಸುವವರು ಯಾರಾಗಿದ್ದಾರೆ ಮತ್ತು ಅದಕ್ಕಾಗಿ ಮಾಹಿತಿಯನ್ನು ಪೂರೈಸುವವರು ಯಾರು ಎನ್ನುವುದು ಆತಂಕದ ವಿಷಯವಾಗಿದೆ ಎಂದರು.