ನನ್ನ ಭೇಟಿಗೆ ಬರಬೇಡಿ ದರ್ಶನ್ ಮನವಿ
ಬೆಂಗಳೂರು, ಜೂ. ೨೮- ಪರಪ್ಪನ ಅಗ್ರಹಾರದಲ್ಲಿ ತಮ್ಮನ್ನು ಭೇಟಿಯಾಗಲು ಬರುವುದು ಬೇಡ ಎಂದು ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಮನವಿ ಮಾಡಿದ್ದಾರೆ.
ಜೈಲಿನ ಅಧಿಕಾರಿಗಳ ಮೂಲಕ ಅಭಿಮಾನಿಗಳಿಗೆ ಅವರು ಈ ಸಂದೇಶ ರವಾನಿಸಿದ್ದಾರೆ. ನಿಯಮಗಳ ಅನುಸಾರ ತಮ್ಮನ್ನು ಭೇಟಿ ಮಾಡುವುದು ಆಗುವುದಿಲ್ಲ. ಆದ್ದರಿಂದ ಯಾರು ಕೂಡ ಜೈಲಿನ ಬಳಿ ಬರಬೇಡಿ ಎಂದು ಮನವಿ ಮಾಡಿದ್ದಾರೆ.
ತಮ್ಮ ಭೇಟಿಗಾಗಿ ಜೈಲಿನ ಬಳಿ ಬಂದು ಕಾಯುವುದು. ಆದರೆ ನನ್ನ ಭೇಟಿಗೆ ಅವಕಾಶ ಸಿಗದೆ ನಿರಾಶೆಯಿಂದ ವಾಪಸ್ಸು ತೆರಳುವುದು ಬೇಡ. ನಿನ್ನೆ ವಿಶೇಷಚೇತನ ಯುವತಿ ಸೌಮ್ಯ ಭೇಟಿಗೆ ಆಗಮಿಸಿರುವ ಬಗ್ಗೆ ದರ್ಶನ ಬೇಸರ ವ್ಯಕ್ತಪಡಿಸಿದ್ದಾರೆ.
ಪರಪ್ಪನ ಆಗ್ರಹಾರ ಬಳಿ ಬಂದು ದರ್ಶನ್ ಭೇಟಿಗೆ ಸೌಮ್ಯ ಹಠ ಮಾಡಿದ್ದಾರೆ. ಅನ್ನ, ಆಹಾರ ಸೇವಿಸದೆ ಹಠ ಹಿಡಿದಿದ್ದರು. ನಟ ದರ್ಶನ್ ಕೊಡಿಸಿದ್ದ ಆಟೋದಲ್ಲಿ ಪೋಷಕರ ಜೊತೆ ಆಗಮಿಸಿದರು. ಇದರ ಬೆನ್ನಲ್ಲೇ ಯಾರು ಕೂಡ ಜೈಲಿನ ಬಳಿ ಬರದಂತೆ ನಟ ದರ್ಶನ್ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣ ದರ್ಶನ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪರಪ್ಪನ ಅಗ್ರಹಾರದಲ್ಲಿ ಅವರನ್ನು ಇರಿಸಲಾಗಿದ್ದು ಅವರ ಸೆರೆವಾಸ ೭ ದಿನಕ್ಕೆ ಕಾಲಿಟ್ಟಿದೆ.