ಪುಣ್ಯಸ್ಮರಣೋತ್ಸವ
ಮುನವಳ್ಳಿ,ಜೂ.28: ಪಟ್ಟಣದ ಮುರುಘರಾಜೇಂದ್ರ ಯೋಗ ವಿದ್ಯಾ ಕೇಂದ್ರ ಸಂಚಾಲಿತ ಅನ್ನದಾನೇಶ್ವರ ಸ್ವತಂತ್ರ ಪದವಿಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ಸೋಮಶೇಖರ ಮಠದ ಹಿಂದಿನ ಫೀಠಾಧಿಪತಿ ಸ್ವಾತಂತ್ರ್ಯ ಹೋರಾಟಗಾರ ಲಿಂ|| ಶ್ರೀ ಚನ್ನಬಸವ ಶ್ರೀಗಳ 23 ನೇ ಪುಣ್ಯ ಸ್ಮರಣೋತ್ಸವ ಜರಗಿತು.
ಸಾನಿಧ್ಯವಹಿಸಿದ ಮುರುಘೇಂದ್ರ ಶ್ರೀಗಳು ಮಾತನಾಡಿ ಮಠಮಾನ್ಯಗಳು ಹಾಗೂ ಮಠಾಧಿಶರು ಕೇವಲ ಧಾರ್ಮಿಕ ಜಾಗೃತಿಗೆ ಸೀಮಿತರಾಗದೇ ಸಮಾಜ ಮುಖಿಯಾಗಿ ಕೆಲಸ ಮಾಡುವುದರ ಜೊತೆಗೆ ಸ್ವಾತಂತ್ರ್ಯ ಹೋರಾಟದಲ್ಲೂ ಪಾಲ್ಗೊಂಡು ತಮ್ಮದೇ ಆದ ಕೊಡುಗೆ ಶ್ರೀಗಳು ನೀಡಿವೆ. ಸೋಮಶೇಖರ ಮಠದ ಹಿಂದಿನ ಪೂಜ್ಯರಾದ ಲಿಂ|| ಚನ್ನಬಸವ ಶ್ರೀಗಳ ಅಗ್ರಗಣ್ಯರು ಎಂದರು. ದೇಶಕ್ಕಾಗಿ ತ್ಯಾಗ ಮಾಡುವಲ್ಲಿ ಶ್ರೀಗಳ ಪಾತ್ರ ಮಹತ್ವದ್ದಾಗಿತ್ತು ಎಂದರು.
ಅರುಣಗೌಡ ಪಾಟೀಲ, ಮಲ್ಲಿಕಾರ್ಜುನ ಜಮಖಂಡಿ, ಶಂಕರ ಗಯ್ಯಾಳಿ, ಸಂಜು ಕಾಮಣ್ಣವರ, ವಿಜಯಲಕ್ಷ್ಮೀ ಗೊರಾಬಾಳ, ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.