ಶಾಲಾಪೂರ್ವ ಶಿಕ್ಷಣ ಕುರಿತು ರಾಜಸ್ಥಾನ ತಂಡದಿಂದ ಬಿ ಬಿ ತಾಂಡಾ ಅಂಗನವಾಡಿಯಲ್ಲಿ ಅವಲೋಕನ.
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜೂ.28 :- ಅಂಗನವಾಡಿ ಶಾಲೆಗಳಲ್ಲಿ ಶಾಲಾ ಪೂರ್ವ ಶಿಕ್ಷಣ ಕುರಿತಾಗಿ ರಾಜಸ್ಥಾನದ ಸಿಎಂಎಫ್ ಸಂಸ್ಥೆಯಿಂದ ಕೂಡ್ಲಿಗಿ ತಾಲೂಕಿನ ಬಂಡೇ ಬಸಾಪುರ ತಾಂಡಾದ ಅಂಗನವಾಡಿ ಡಿ ಕೇಂದ್ರದಲ್ಲಿ ಶಾಲಾ ವಾತಾವರಣ, ಅಲ್ಲಿನ ಕಲಿಕೆ, ಮಕ್ಕಳ ಪೋಷಕರ ಪ್ರೋತ್ಸಾಹ, ಪಾಲಕರ  ಸಭೆ ನಡೆಸಿ ಅವರಿಂದ ವಿಷಯ ಸಂಗ್ರಹ ಕುರಿತಾಗಿ ಚರ್ಚೆ ನಡೆಸಿ ಅವಲೋಕನ ನಡೆಸಲಾಯಿತು.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಪಂಚಾಯತ್ ವಿಜಯನಗರ ಕಲಿಕೆ ಟಾಟಾ ಟ್ರಸ್ಟ್ ಇವರ ಸಹಯೋಗದಲ್ಲಿ ಅನುಷ್ಠಾನವಾಗುತ್ತಿರುವ ಶಾಲಾ ಪೂರ್ವ ಶಿಕ್ಷಣ ಬಲವರ್ಧನೆ ಕಾರ್ಯಕ್ರಮದಡಿ ಅಂಗನವಾಡಿ ಕೇಂದ್ರಗಳಲ್ಲಿ ನಡೆಯುತ್ತಿರುವ ಶಾಲಾ ಪೂರ್ವ ಶಿಕ್ಷಣ ಚಟುವಟಿಕೆಗಳ ಕುರಿತಂತೆ ಅವಲೋಕನ ಮಾಡಲು ರಾಜಸ್ಥಾನದ ಸಿ ಎಮ್ ಎಫ್ ಸಂಸ್ಥೆಯಿಂದ ಶ್ರೀ ರಾಜೇಶ ಸಿಂಗ್ ತಂಡದವರು ಜಿಲ್ಲೆಯ ಕೂಡ್ಲಿಗಿ‌ ಯೋಜನೆಯ ತಿಮಲಾಪುರ ಬಿ  ವಲಯದ ಬಂಡೇಬಸಾಪುರ ತಾಂಡದ  ಅಂಗನವಾಡಿ ಕೇಂದ್ರಗಳಲ್ಲಿ ಶಾಲಾಪೂರ್ವ ಶಿಕ್ಷಣವನ್ನು ಅವಲೋಕಿಸಿದರು ಮತ್ತು ಶಾಲಾಪೂರ್ವ ಶಿಕ್ಷಣ ಚಟುವಟಿಕೆಗಳ ಕುರಿತು ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಹಾಗೂ ಮೇಲ್ವಿಚಾರಕರೊಂದಿಗೆ ಚರ್ಚಿಸಿದರು, ನಂತರ ವಲಯದ ಬಂಡೇಬಸಾಪುರ ತಾಂಡದ ಅಂಗನವಾಡಿ -ಡಿ ಕೇಂದ್ರ ದಲ್ಲಿ ” ಅಂಗನವಾಡಿಯತ್ತ ಸಮುದಾಯ ” ಪಾಲಕ – ಪೋಷಕರ ಸಭೆಯನ್ನು ಭಾಗವಹಿಸಿ ಸಭೆಯಲ್ಲಿ ನಡೆಯುವ ವಿಷಯಗಳ ಬಗ್ಗೆ ಅವಲೋಕಿಸಿದರು ತಂಡವನ್ನು ಯೋಜನೆಯ ಹಿರಿಯ ಮೇಲ್ವಿಚಾರಕರಾದ  ವಿಜಯಲಕ್ಷ್ಮೀ, ವಲಯ ಮೇಲ್ವಿಚಾರಕಿ ಅನ್ನಪೂರ್ಣ ಹಾಗೂ  ರುತಿಯಾ ಬೇಗಮ್ ಸಹಕರಿಸಿದರು ಹಾಗೂ ಕಲಿಕೆ-ಟಾಟಾ ಟ್ರಸ್ಟ್ ಸಂಸ್ಥೆಯ  ಗರೀಶ ಮತ್ತು  ಜಗನ್ನಾಥ  ಇದ್ದರು.
ವೇಳಾಪಟ್ಟಿ ಅನುಸಾರವಾಗಿ ನಡೆದ ಚಟುವಟಿಕೆಗಳನ್ನು ಅವಲೋಕಿಸಿ ಶಿಕ್ಷಕಿ ಮೀನಾಕ್ಷಿ  ಮತ್ತು ಸಹಾಯಕಿ ಸದರಿ ಕಾರ್ಯದಲ್ಲಿ ಭಾಗವಹಿಸುವುದನ್ನು ಮತ್ತು ಮಕ್ಕಳ ಋಣಾತ್ಮಕ ಶಾಲಾ ಪೂರ್ವ ಶಿಕ್ಷಣ ನೀಡಲು ತರಬೇತಿ ಅನುಸಾರವಾಗಿ ಸಿದ್ಧಪಡಿಸಿಕೊಂಡ ಸಾಮಗ್ರಿಗಳ ಶಿಕ್ಷಕಿ ಸಿದ್ಧಪಡಿಸಿಕೊಂಡ ಕಲಿಕೆ ಸಾಮಗ್ರಿಗಳನ್ನು ಅವಲೋಕಿಸಿ ಮಾಹಿತಿ ಪಡೆದರು ನಂತರದಲ್ಲಿ ಕೂಡ್ಲಿಗಿ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ವಿಜಯಲಕ್ಷ್ಮೀ  ವಲಯದ ಮೇಲ್ವಿಚಾರಕಿ  ಅನ್ನಪೂರ್ಣ ಮತ್ತು ರುತಿಯಾ ಬೇಗಮ್  ಹಾಗೂ ಅಂಗನವಾಡಿ ಶಿಕ್ಷಕಿ ಮೀನಾಕ್ಷಿ ರೊಂದಿಗೆ ತರಬೇತಿ ಅನುಸಾರವಾಗಿ ತಮ್ಮ ಅನುಭವಗಳನ್ನು ಮತ್ತು ಮಕ್ಕಳ ಪೋಷಕರ ಬಗ್ಗೆ ಸದರಿ ವಿಷಯಗಳನ್ನು ಅನುಷ್ಠಾನಗೊಳಿಸುವಲ್ಲಿ ಕೈಗೊಂಡ ಬೆಳವಣಿಗೆ ಕುರಿತಂತೆ ಚರ್ಚಿಸಿದರು.