ರಸ್ತೆ ಅಗಲೀಕರಣಕ್ಕೆ ಸಾರ್ವಜನಿಕರ ಸಹಕಾರ ಅವಶ್ಯ
ಚನ್ನಮ್ಮನ ಕಿತ್ತೂರು,ಜೂ.28: ಬೆಳೆಯುತ್ತಿರುವ ಜನಸಂಖ್ಯೆಯಿಂದ ವಿಶಾಲವಾದ ಪ್ರದೇಶ ಅಗಲೀಕರಣದ ರಸ್ತೆಗಳು ಅಷ್ಟೇ ಅವಶ್ಯ. ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಪಪಂ ಅವರಣದಲ್ಲಿಯ ಅಂಬೇಡ್ಕರ ಭವನದಲ್ಲಿ ನಡೆದ ಸಾರ್ವಜನಿಕರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು. ರಾಷ್ಟ್ರೀಯ ಹೆದ್ದಾರಿ 4ರ ಪಕ್ಕದ ಚನ್ನಮ್ಮಾಜೀ ವರ್ತುಳದಿಂದ ಗುರುವಾರ ಪೇಟೆ ಮಾರ್ಗದಿಂದ ಅರಳೀಕಟ್ಟಿ ವೃತ್ತದ ವರೆಗೆ ಡಬಲ್ ರಸ್ತೆ ಅಗಲೀಕರಣ ಆಗಬೇಕಿದೆ. ಈ ಯೋಜನೆ ಮೂರು ವರ್ಷದ ಹಿಂದೇಯೇ ಜಾರಿಯಲ್ಲಿದ್ದು ಈಗ ಕಾಲಾವಕಾಶ ಒದಗಿಬಂದಿದೆ. ಈ ಯೋಜನೆಯಿಂದ ಪಟ್ಟಣ ಅಂದವಾಗಿ ಕಾಣುವುದರ ಜೊತೆಗೆ ವ್ಯಾಪಾರವೂ ಹೆಚ್ಚುತ್ತದೆ. ಆದ್ದರಿಂದ ಈ ಕಾಮಗಾರಿ ವಿಳಂಬವಾಗುವುದು ಬೇಡ ಇದನ್ನು ಪೂರ್ಣಗೊಳಿಸಲು ಸಾರ್ವಜನಿಕರು ಸಹಕಾರ ನೀಡಬೇಕು. ಈ ಕಾರ್ಯ ಕೈಗೊಳ್ಳುವುದರಿಂದ ರಸ್ತೆ ವಿಸ್ತರಣೆ, ಗಟಾರ ನಿರ್ಮಾಣ, ಅಂಡರ್ ಗ್ರೌಂಡ ಮಾಡಲಾಗುವುದು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪಪಂ ಮುಖ್ಯಾಧಿಕಾರಿ ಮಲ್ಲಯ್ಯಾ ಹಿರೇಮಠ ರಸ್ತೆ ಅಗಲೀಕರಣ ಕಿತ್ತೂರು ಅಭಿವೃದ್ಧಿ ಕುರಿತು ಸಾರ್ವಜನಿಕರಿಗೆ ತಿಳಿಹೇಳುವುದರ ಜೊತೆಗೆ ಅರಿವು ಮೂಡಿಸಿದರು.
ಸಾರ್ವಜನಿಕರ ಪರವಾಗಿ ಎಲ್ಲಪ್ಪ ಒಕ್ಕುಂದ, ಚಂದ್ರಗೌಡ ಪಾಟೀಲ, ಸಂದೀಪ ದೇಶಪಾಂಡೆ, ದಿನೇಶ ಒಳಸಂಗ, ಪ್ರವೀಣ ಗಿರ, ವಿಠ್ಠಲ ಮಿರಜಕರ, ಸೋಮಶೇಖರ ಕುಪ್ಪಸಗೌಡರ, ಉಮೇಶ ಎಮ್ಮಿ, ಸೇರಿದಂತೆ ಇನ್ನೂ ಹಲವರು ಮಾತನಾಡಿ ರಸ್ತೆ ಅಗೆಯುವ ಮೊದಲು ಸಾರ್ವಜನಿಕರಿಗೆ ತಿಳಿಹೇಳಬೇಕು. ಹೆಚ್ಚು ಮನೆಯ ಜಾಗ ಕಳೆದುಕೊಳ್ಳುವ ಕುಂಟುಬಗಳ ಮುಂದಿನ ವ್ಯವಸ್ಥೆ ಏನು ಎಂದು ತಿಳಿಸಬೇಕೆಂದರು.
ಈ ವೇಳೆ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಇಂಜೀನಿಯರ್ ಸಂಜೀವ ಮಿರಜಕರ, ಪಿಎಸ್‍ಐ ಪ್ರವೀಣ ಗಂಗೋಳ, ಪಪಂ ಕಿರಿಯ ಇಂಜೀನಿಯರ್ ವೆಂಕಟೇಶ ಕಾಮಣ್ಣನವರ, ಪ್ರಭಾರಿ ತಾಪಂ ಇಓ ಕಿರಣ ಗೋರ್ಪಡೆ, ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಅಜ್ಜನವರ, ಪಪಂ ಸರ್ವಸದಸ್ಯರು, ಎಸ್‍ಡಿಎಂಸಿ, ಗ್ರಾಪಂ ಅಧ್ಯಕ್ಷ-ಸದಸ್ಯರು, ಸಾರ್ವಜನಿಕರಿದ್ದರು.