ಸಿಎಂ.ರಾಜೀನಾಮೆಗೆ ಆಗ್ರಹಿಸಿ ಹೊಸಪೇಟೆ ಡಿಸಿ ಕಛೇರಿಗೆ ಬಿಜೆಪಿ ಮುತ್ತಿಗೆ ಯತ್ನ
ಸಂಜೆವಾಣಿ ವಾರ್ತೆ
ಹೊಸಪೇಟೆ ಜೂ28: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ 187ಕೋಟಿ ಅವ್ಯವಹಾರದ ಜೊತೆ ಕೇಂದ್ರ ಪುರಸ್ಕೃತ ಯೋಜನೆಯ ಅನುದಾನ 83ಕೋಟಿ ಅವ್ಯವಹಾರಕ್ಕೆ ಸಂಬಂದಿಸಿದಂತೆ  ಮುಖ್ಯಮಂತ್ರಿಗಳು ರಾಜಿನಾಮೆ ನೀಡುವಂತೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಇಂದು ಜಿಲ್ಲಾಧಿಕಾರಿಗಳ ಕಛೇರಿ ಮುತ್ತಿಗೆಗೆ ಯತ್ನಿಸಿದರು.
ಹೊಸಪೇಟೆಯ ಸಾಯಿ ಬಾಬಾ ವೃತ್ತದಿಂದ ಆರಂಭವಾದ ಮೆರವಣಿಗೆ ಜಿಲ್ಲಾಧಿಕಾರಿಗಳ ಕಛೇರಿದೆ ಬಂದ ನಂತರ ನಡೆದ ಪ್ರತಿಭಟನಾ ಸಭೆಯಲ್ಲಿ ಜಿಲ್ಲಾ ಬಿಜೆಪಿ ಕಾರ್ಯಕರ್ತರನ್ನು ಉದ್ಧೇಶಿಸಿ ಮಾತನಾಡಿದ ಹಡಗಲಿ ಶಾಸಕ ಕೃಷ್ಣಾನಾಯ್ಕ್, ರಾಜ್ಯದ ಎಲ್ಲಾ ಅಭಿವೃದ್ಧಿ ಅನುದಾನ ನಿಗಮ ಮಂಡಳಿಯ ಅನುದಾನ ಸಚಿವರ, ಅಧಿಕಾರಿಗಳ ಖಾತೆಗೆ ಹಾಗೂ ವೃಯುಕ್ತಿಕ ಖಾತೆಗೆ ಜಮಾ ಆಗುತ್ತದೆ, ಕೂಡಲೆ ಮುಖ್ಯಮಂತ್ರಿ ಗಳು ತನಿಖೆಗೆ ಒಳಪಡಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರಹೋರಾಟ ಮಾಡುವುದಾಗಿ ತಿಳಿಸಿದರು.
ಪಕ್ಷ ಜಿಲ್ಲಾಧ್ಯಕ್ಷ ಚೆನ್ನಬಸವನಗೌಡ, ಜಂಬಯ್ಯನಾಯಕ, ರಾಜ್ಯ ಯುವ ಮೋರ್ಚಾ ನಾಯಕ ಸಿಧಾರ್ಥಸಿಂಗ್  ಮುಖಂಡರು ಮಾತನಾಡಿ ಅಧಿಕಾರಿಯ ಆತ್ಮಹತ್ಯೆ ಈ ಎಲ್ಲಾ ಹಂತದ ಅವ್ಯವಹಾರ ಬಯಲಾಗುವಂತೆ ಮಾಡಿದೆ, ಈ ಹಣದ ರೂವಾರಿ ಯಾರು?, ಅಧಿಕಾರಿಯ ಆತ್ಮಹತ್ಯೆಗೆ ಹೊಣೆ ಯಾರು? ಆರ್ಥಿಕವಾಗಿ ದುರ್ಬಲರಾಗಿರುವ ಎಸ್.ಟಿ.ಸಮುದಾಯಕ್ಕೆ ನ್ಯಾಯ ಒದಗಿಸುವವರು ಯಾರು ಎಂದು ಪ್ರಶ್ನಿಸಿದ ಅವರು ಇದರ ಜೊತೆ ಕೇಂದ್ರ ಪುರಸ್ಕೃತ ಯೋಜನೆಗಳ ಅನುದಾನ 83 ಕೋಟಿ ಸಹ ದುರ್ಬಳಿಕೆಯಾಗಿದೆ  ಎಲ್ಲವೂ ಸಹ ಮಾರ್ಚ್ ಕೊನೆಯವಾರದಲ್ಲಿಯೇ ನಡೆದಿರುವುದು ವಿಶೇಷವಾಗಿದೆ  ಇಷ್ಟೊಂದು ದೊಡ್ಡ ಮಟ್ಟದ ಆರ್ಥಿಕ ಅವ್ಯವಹಾರ ಮುಖ್ಯಮಂತ್ರಿಗಳ ಗಮನಕ್ಕೆ ಇಲ್ಲದಂತೆ ಆಗಿದೆ ಎನ್ನುವುದು ಹೇಗೆ ?,  ಇದರ ಹೊರತಾಗಿ ಎಸ್ಟಿ ಅಭಿವೃದ್ಧಿ ನಿಗಮದಲ್ಲಿ ಯಾವುದೆ ಚಟುವಟಿಕೆಗಳು ನಡೆಯುತ್ತಿಲ್ಲಾ ಬದಲಾಗಿ ಎಲ್ಲಾ ಹಣ ಚುನಾವಣೆಗೆ ಬಳಕೆ ಯಾಗಿದೆ ಎಂದುಬಲವಾಗಿ ಖಂಡಿಸಿದರು.
ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು, ಆರ್ಥಿಕ ವ್ಯವಹಾರ ಸಿಬಿಐ ತನಿಖೆಯಾಗಬೇಕು ಎಂದು ಒತ್ತಾಯಿಸಿದರು ಕಿವಿಗೊಡದ ಹಿನ್ನೆಲೆಯಲ್ಲಿ ಮುತ್ತಿಗೆಗೆ ಮುಂದಾಗಲಾಗಿದೆ ಮುತ್ತಿಗೆ ಕಾರ್ಯಕ್ರದಲ್ಲಿ ಅಶೋಕ ಜೀರೆ, ಅಯ್ಯಾಳಿ ತಿಮ್ಮಪ್ಪ, ಕಿಚಡಿ ಕೊಟ್ರೇಶ, ಶಂಕರ ಮೇಟಿ. ಜಗದೀಶ ಕಮಟಗಿ, ಬಲಗುಣಸಿ ರಾಮಣ್ಣ,  ಗುಜ್ಜಲ ಕಿರಣ್,‌ದ್ವಾರಕೇಶ್, ರೂಪೇಶ ಕುಮಾರ, ಸಾಲಿ ಸಿದ್ಧಯ್ಯಸ್ವಾಮಿ, ತಾರಿಹಳ್ಳಿ ಜಂಬೂನಾಥ, ಶ್ರೀನಿವಾಸ ಬಂಗಾತಿ, ಕಸಾಟಿ ಉಮಾಪತಿ,   ಜಗನ್ನಾಥ, ರೇಖಾರಾಣಿ, ಕವಿತಾ, ಭಾರತಿ ಪಾಟೀಲ್,  ಅನುರಾಧ, ಚಂದ್ರು ದೇವಲಾಪುರ, ರೇವಣಸಿದ್ಧಪ್ಪ ಸೇರಿದಂತೆ ನೂರಾರು ಸಂಖ್ಯೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.