ಬ್ಯಾಸಿಗಿದೇರಿ ಗ್ರಾಮ ಪಂಚಾಯತಿ  ಅದ್ಯಕ್ಷರಾಗಿ ಎಂ.ಡಿ ಬಸವನಗೌಡ ಆಯ್ಕೆ
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ:ಜೂ.28  ತಾಲೂಕಿನ ಬ್ಯಾಸಿಗಿ ದೇರಿ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ  ಎಂ.ಡಿ.ಬಸವನಗೌಡ ಅವಿರೋಧವಾಗಿ ಆಯ್ಕೆಯಾದರು.
ಚುನಾವಣಾಧಿಕಾರಿಗಳಾಗಿ  ಚಂದ್ರಶೇಖರ್  ಶಂಬಣ್ಣಗಾಳಿ ಕಾರ್ಯನಿರ್ವಹಿಸಿದರು. ಈ ವೇಳೆ ಮಾತನಾಡಿ  ಗ್ರಾ.ಪಂ. ಅಧ್ಯಕ್ಷ ಸ್ಥಾನಕ್ಕೆ   ನಂದಿಪುರದ ಎಂ.ಡಿ.ಬಸವನಗೌಡ ಮಾತ್ರ ನಾಮ ಪತ್ರ ಸಲ್ಲಿಸಿದ್ದರಿಂದ ಅವರ ಅಯ್ಕೆ ಅವಿರೋಧವಾಗಿ ನಡೆಯಿತು ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಭಾಗ್ಯಮ್ಮ ನಿಂಗಪ್ಪ, ಸದಸ್ಯರಾದ ಆರ್.ಶ್ರೀಕಾಂತ್, ಮೂಗಮ್ಮ, ಗೌಡ್ರು ಭರಮಗೌಡ್ರು, ಚೌಟಿಗಿ ಆನಂದ್, ಹೆಚ್.ಎಂ. ವೀರಯ್ಯ, ವೀರಮ್ಮ, ನಾಗೇಂದ್ರಮ್ಮ, ಈರಪ್ಪ, ರೇಖಾ, ವಿರುಪಾಕ್ಷಪ್ಪ, ಎಂ.ಕರಿಬಸಮ್ಮ, ಹೆಚ್.ಗಂಗಮ್ಮ, ವಿ.ದ್ರಾಕ್ಷಾಯಿಣಿ, ಮೋನಿಕಾ ಎಸ್.ಎಂ.ಹೆಚ್.ಕರಿಯಮ್ಮ, ಇಟಿಗಿ ಗುರುಬಸವರಾಜ್, ಕೆ.ಬಸಮ್ಮ, ಮರಿಸ್ವಾಮಿ, ಕೆ.ಕರಿಯಪ್ಪ ಮುಖಂಡ ಗ್ರಾಪಂ. ಮಾಜಿ ಅಧ್ಯಕ್ಷ ಮುಟುಗನಹಳ್ಳಿ ಕೊಟ್ರೇಶ್, ಅರ್.ಹುಮೇಶ್, ನರೇಗಲ್ ಮಲ್ಲಿಕಾರ್ಜುನ, ಶಿರೂರು ಮಂಜುನಾಥ್, ನೇತ್ರಾನಂದಪ್ಪ, ಬಿ.ದೇವರೆಡ್ಡಿ, ಟಿಸಿ.ದೊಡ್ಡಬಸಪ್ಪ, ಕೊಟ್ರರೆಡ್ಡಿ, ಶಂಕ್ರಯ್ಯ, ರಾಮಪ್ಪ, ಪಂಪಾಪತಿ, ಜಿ.ಮಂಜುನಾಥ, ಹನ್ಮಂತಪ್ಪ, ಎಂ.ಬಸವರಾಜ್, ಸೊಬಟಿ ರಾಮಣ್ಣ,ಬಿ.ಮಲ್ಲಿಕಾರ್ಜುನ ಪಂಚಾಯತಿ ಅಭಿವೃದ್ಧಿ ಅಧಿಕಾರಿ  ಶಾಂತನಗೌಡ್ರು ಹಾಗೂ ಸಿಬ್ಬಂದಿ ವರ್ಗದವರು ಇತರರು ಉಪಸ್ಥಿತಿ ಇದ್ದರು.