ಹಬೋಹಳ್ಳಿ :ಮಾದಕ ವಸ್ತುಗಳ ವಿರೋಧಿ ದಿನಾಚರಣೆ
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ: ಜೂ.28  ವಿಶ್ವ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಅಂಗವಾಗಿ ವಿಜಯನಗರ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ ಮಾನ್ಯ ಜಿಲ್ಲಾ ಸರ್ವೇಕ್ಷಣ ಅಧಿಕಾರಿಗಳ ಮಾರ್ಗದರ್ಶನದಲ್ಲಿ  ತಾಲೂಕಿನ ತಂಬ್ರಹಳ್ಳಿ ಕಿಪೊಗು.ಪ್ರೌಢಶಾಲೆ, ಚಿಲುಗೋಡು ಸರ್ಕಾರಿ ಪ್ರೌಢಶಾಲೆ  ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಮರಬಿಹಾಳು ಶಾಲೆಯ  ವಿದ್ಯಾರ್ಥಿಗಳು  ಹಾಗೂ ಶಿಕ್ಷಕರುಗಳಿಗೆ ತಂಬಾಕು ಉತ್ಪನ್ನಗಳ ಬಳಕೆಯಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳು ಹಾಗೂ ತಂಬಾಕು ವ್ಯಸನ ಮುಕ್ತ ಕೇಂದ್ರದಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ಗ್ರಾಮಗಳಲ್ಲಿ ಜಾಥಾ ನೆಡೆಸಿ  ಜಾಗೃತಿ ಮೂಡಿಸಲಾಯಿತು.
ತಂಬಾಕು ನಿಯಂತ್ರಣ ಕೋಶದ ಸಮಾಜ ಕಾರ್ಯಕರ್ತ ಬೋಜರಾಜ್ ಎಸ್. ಮಾತನಾಡಿ ತಂಬಾಕು ಸೇವನೆಯಿಂದ ಆಗುತ್ತಿರುವ ಸಮಸ್ಯೆಗಳನ್ನು ಪರಿಗಣಿಸಿ ತಂಬಾಕು ಉತ್ಪನ್ನಗಳ ಉತ್ಪಾದನೆ, ಸರಬರಾಜು  ಮತ್ತು ಮಾರಾಟದ ಮೇಲೆ ನಿಯಂತ್ರಣ ಸರ್ಕಾರ 2003ರಲ್ಲಿ ಕೊಟ್ಪಾ ಕಾಯ್ದೆ ಜಾರಿಗೆ ತಂದಿದೆ. ನಿಯಮಗಳನ್ನು ಉಲ್ಲಂಘನೆ ಮಾಡಿದಲ್ಲಿ ಸೆಕ್ಷನ್ 4,5,6ಎ,6ಬಿ,7,8,9 ಅಡಿಯಲ್ಲಿ ಪ್ರಕರಣ ದಾಖಲಿಸಿ ದಂಡ ಅಥವಾ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದರು.
ತಂಬ್ರಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ   ಜಿಲ್ಲಾ ಸರ್ವೇಕ್ಷಣ ಅಧಿಕಾರಿಗಳ ಮಾರ್ಗದರ್ಶನದಲ್ಲಿ  ಜಿಲ್ಲಾ ತಂಬಾಕು ನಿಯಂತ್ರಣ ಕೋಶ , ಜಿಲ್ಲಾ ಮಟ್ಟದ ತಂಬಾಕು ತನಿಖಾ ದಳದ  ಅಧಿಕಾರಿಗಳ ತಂಡ ಕಾರ್ಯಚರಣೆ ನಡೆಸಿ COTPA-2003 ಕಾಯ್ದೆಯ ಉಲ್ಲಂಘನೆಯ ಅಡಿಯಲ್ಲಿ ಸೆಕ್ಷನ್ 4, ರಅಡಿಯಲ್ಲಿ 4 ಪ್ರಕರಣ 800 ರೂಪಾಯಿ ದಂಡವನ್ನುವಿಧಿಸಲಾಯಿತು  ಹಾಗೂ ಸೆಕ್ಷನ್ ಅಡಿಯಲ್ಲಿ 02 ಪ್ರಕರಣ  400 ದಂಡವನ್ನು ವಿಧಿಸಲಾಯಿತು ಒಟ್ಟು06 ಪ್ರಕರಣಗಳನ್ನು ದಾಖಲಿಸಿ ಸ್ಥಳದಲ್ಲಿಯೇ ರೂ.1200/- ದಂಡವನ್ನುಸಂಗ್ರಹಿಲಾಯಿತು. ಪೊಲೀಸ್ ಇಲಾಖೆಯಿಂದ ಸೆಕ್ಷನ್ 4 ರ ಅಡಿಯಲ್ಲಿ 6 ಪ್ರಕರಣಗಳನ್ನು ದಾಖಲಿಸಿ 600 ಸ್ಥಳದಲ್ಲಿಯೇ  ದಂಡವನ್ನು ವಿಧಿಸಲಾಯಿತು ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಪೊಲೀಸ್ ಇಲಾಖೆಯ ಸಹಭಾಗಿತ್ವದಲ್ಲಿ 12 ಪ್ರಕರಣ 1800 ದಂಡವನ್ನು ವಿಧಿಸಲಾಯಿತು
ಈ ಸಂದರ್ಭದಲ್ಲಿ ತಂಬ್ರಹಳ್ಳಿ ಪಿಎಸ್ಐ ಸುವರ್ಥಾ, ಪೋಲಿಸ್ ಸಿಬ್ಬಂದಿ  ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳು ಇತರರು ಇದ್ದರು.