ಬಳ್ಳಾರಿ ಶಾಖೋತ್ಪನ್ನ ಕೇಂದ್ರ ಕುಡುತಿನಿಯಲ್ಲಿ ಬಸವೇಶ್ವರರ ಜಯಂತೋತ್ಸವ ..
ಸಂಜೆವಾಣಿ ವಾರ್ತೆ
 ಬಳ್ಳಾರಿ. ಜೂ.28-  ಬಳ್ಳಾರಿ ಶಾಖೋತ್ಪನ್ನ ಕೇಂದ್ರ ಕುಡುತಿನಿಯಲ್ಲಿ  ವಿಶ್ವ ಗುರು ಜಗಜ್ಯೋತಿ  ಬಸವೇಶ್ವರರ 891 ನೇ ಜಯಂತೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅಥಿಯಾಗಿ ಪಾಲ್ಗೊಂಡ  ಕನ್ನಡ ಉಪನ್ಯಾಸಕರಾದ ಎ.ಎಂ.ಪಿ ವೀರೇಶಸ್ವಾಮಿಯವರು ” ಬಸವಣ್ಣನ ವಚನಗಳಲ್ಲಿ ಜೀವನ ಮೌಲ್ಯಗಳು” ಈ ವಿಷಯ ಕುರಿತು ಮಾತನಾಡುತ್ತಾ ಶರಣರ ವಚನಗಳು ಮಾನವನ ಬದುಕಿನ ಸಂಜೀವಿನಿಯಂತಿವೆ ,ಬಸವಣ್ಣನ ವಚನಗಳಲ್ಲಿ ಬದುಕಿನ ಮೌಲ್ಯಗಳ ಭಂಡಾರವೇ ಅಡಗಿದೆ,  ಮೊಗೆದಷ್ಷು ಒಂದೊಂದು  ವಚನಗಳು ಮುತ್ತು ರತ್ನಗಳಂತೆ ಗೋಚರಿಸುತ್ತವೆ . ಕಾಯಕ ದಾಸೋಹದ ಪರಿಕಲ್ಪನೆಯನ್ನು ಜಗತ್ತಿಗೆ ನೀಡಿದವರು ಶರಣರು. ಅವರ ವಚನಗಳ ಸಾರವನ್ನು ನಾವು ಬರಿ ಓದಿದರೆ ಸಾಲದು ಅವುಗಳನ್ನು ನಮ್ಮ ನಿತ್ಯದ ಬದುಕಿನಲ್ಲಿ ಅಳವಡಿಸಿ ಕೊಂಡಾಗ ಶರಣರ ವಚನಗಳಿಗೆ ಅರ್ಥ ಬರುತ್ತದೆ ಎಂದರು.  ಈ ಕಾರ್ಯಕ್ರಮದಲ್ಲಿ ಅಥಿತಿಗಳಾಗಿ  ಬಿ ಟಿ ಪಿ ಎಸ್ ಮುಖ್ಯ ಅಭಿಯಂತರರುಗಳಾದ ಮೋಹನ್ ರಾಜು ಜಿ, ಆಸೋಕ ಕುಮಾರ್ ಹೆಚ್  ಉಪ ಪ್ರದಾನ ಪ್ರಬಂಧಕರಾದ ಶಿವಲಾಲ್ ಜಿ ನಾಯಕ್, ವೈ ಬಿ ಹಾಲಬಾವಿ ,ಬಸವ ಬಳಗದ ಅಧ್ಯಕ್ಷರಾದ ಕರಿ ಬಸಪ್ಪ ಜಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಈ ಕೇಂದ್ರದ ಕಾರ್ಯ ನಿರ್ವಾಹಕ ನಿರ್ದೇಶಕರಾದ ರಾಜು ಬಿ ಟಿ ವಹಿಸಿಕೊಂಡಿದ್ದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಬಸವ ಬಳಗದ  ಅದ್ಯಕ್ಷರಾದ ಕರಿಬಸಪ್ಪ  ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು ಕಾರ್ಯಕ್ರಮದ ಕೊನೆಯಲ್ಲಿ ಮುಖ್ಯ ಅಥಿತಿಗಳನ್ನು ಬಸವ ಬಳಗದ  ಪದಾಧಿಕಾರಿಗಳು ಸನ್ಮಾನಿಸಿದರು.