ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ
ಬಾಗಲಕೋಟೆ,ಜೂ28: ಬರದಿಂದ ಈಗಾಗಲೇ ಸಂಕಷ್ಟದಲ್ಲಿರುವ ರೈತರು ಟ್ರ್ಯಾಕ್ಟರ್.ಟೈಲರ್ ಯಂತ್ರಗಳಿಗೆ ಬಳಸುವ ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆಯು ಅವರನ್ನು ಅತಂತ್ರರನ್ನಾಗಿಸಿದೆ ಅಲ್ಲದೆ ಜನಸಾಮಾನ್ಯರು ವಾಹನ ಬಳಿಸುವುದು ಕಷ್ಟವಾಗಿದ್ದು ಕೂಡಲೆ ಕಾಂಗ್ರೇಸ್ಸ ಸರಕಾರ ಪೆಟ್ರೋಲ್ ಡಿಸೇಲ್ ಬೆಲೆಯನ್ನು ಕಡಿಮೆಗೊಳಿಸಬೇಕು ಇಲ್ಲವಾದಲ್ಲೆ ಜನರ ಪರವಾಗಿ ಹೋರಾಟ ಮಾಡಲಾಗುವುದು ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.
ಅವರು ಬಾಗಲಕೋಟೆ ಸಮಿಪದ ಸಂಗಮ ಕ್ರಾಸ್‍ನಲ್ಲಿ ಭಾರತೀಯ ಜನತಾ ಪಾರ್ಟಿ ಬಾಗಲಕೋಟೆ ಮತಕ್ಷೇತ್ರದ ಗ್ರಾಮೀಣ ಹಾಗೂ ನಗರ ಮಂಡಲವತಿಯಿಂದ ಬೆಲೆ ಏರಿಕೆ ಮಾಡಿದ ಕಾಂಗ್ರೆಸ್ಸ ಸರಕಾರದ ವಿರುದ್ದು ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ರಾಜ್ಯದಲ್ಲಿ ಸರಕಾರ ಬಂದು ಇವತ್ತಿಗೆ ಒಂದು ವರ್ಷ ಮೂರ ತಿಂಗಳಾದರು ಯಾವುದೆ ರೀತಿಯ ಒಂದು ರೂಪಾಯಿಯ ಅಭಿವೃದ್ಧಿ ಕಾರ್ಯ ನಡೆತಿಲ್ಲಾ, ಯಾವುದೆ ರೀತಿಯ ಸೌಲಭ್ಯಗಳಿಲ್ಲಾ ರಾಜ್ಯದಲ್ಲಿ ಪೆಟ್ರೋಲ್ ಡಿಸೇಲ್ ಬೆಲೆ ಹಾಗೂ ಹಾಲಿನ ದರ ಏರಿಕೆ, ಸ್ಟಾಂಪ್ ಡ್ಯೂಟಿ ಹೆಚ್ಚಾಯಿತು, ಆಸ್ತಿ ಕರ ಹೆಚ್ಚಾಯಿತು, ಗ್ಯಾರಂಟಿ ಹೆಸರಿನಲ್ಲಿ ಬೆಲೆ ಏರಿಕೆ ಮಾಡಿದ ಕಾಂಗ್ರೆಸ್ಸ ಸರಕಾರ ರಾಜ್ಯದ ಜನತೆಗೆ ಬರೆ ಹಾಕುತ್ತಿದೆ, ಗ್ಯಾರಂಟಿ ಎಂದು ಹೇಳುತ್ತಲೇ ಜನರ ಕಿವಿಗೆ ಹೂವು ಇಡುತ್ತಿದೆ, ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ಹಣವನ್ನು ತೆಲಂಗಾಣ ಹಾಗೂ ಬೇರೆ ರಾಜ್ಯಗಳ ಚುನಾವಣೆ ಬಳಸುವುದೆ ಮೂಲಕ ವಾಲ್ಮೀಕಿ ಜನಾಂಗಕ್ಕೆ ಈ ಕಾಂಗ್ರೆಸ್ಸ ಸರಕಾರ ಮೋಸ ಮಾಡಿದೆ, ವಾಲ್ಮೀಕಿ ನಿಗಮದಲ್ಲಿನ ಅವ್ಯವಹಾರದ ಕುರಿತು ಸರ್ಕಾರ ಎಸ್‍ಐಟಿ ಮೂಲಕ ಮುಚ್ಚಿಹಾಕಲು ಯತ್ನಿಸುತ್ತಿದೆ, ಆದಷ್ಟೂ ಬೇಗನೆ ಸರಕಾರ ಪೆಟ್ರೋಲ್ ಡಿಸೇಲ್ ಬೆಲೆ ಇಳಸಬೇಕು, ಇಲ್ಲವಾದಲ್ಲಿ ಸದನದ ಒಳಗೆ ಹಾಗೂ ಸದಸನದ ಹೊರಗೆ ಜನರ ಪರವಾಗಿ ಹೋರಾಟ ಮಾಡಲಾಗುವುದು ಎಂದರು.
ಇದಕ್ಕೂ ಮುಂಚೆ ಸಂಗಮ ಕ್ರಾಸ್ನಲ್ಲಿ ಮಾನವ ಸರಪಳಿ ನಿರ್ಮಸಿ ರಸ್ತೆ ತಡೆ ಮಾಡಿ ಪ್ರಟಿಭಟನೆ ಮಾಡಲಾಯಿತು.
ಬೆಳಗಾವಿ ಪ್ರಭಾರಿ ಬಸವರಾಜ ಯಂಕಂಚಿ ಹಾಗೂ ಶಿವಾನಂದ ಟವಳಿ ಮಾತನಾಡಿದರು, ಪ್ರತಿಭಟನೆಯಲ್ಲಿ ಬಿಟಿಡಿಎ ಮಾಜಿ ಆದ್ಯಕ್ಷ ಜಿ.ಎನ್.ಪಾಟೀಲ.ಶಿವಾನಂದ ಕೋಟಿ. ಲಕ್ಷ್ಮೀನಾರಾಯಣ ಕಾಸಟ್.ರಾಜುನಾಯ್ಕರ,ರಾಜು ಮುದೆನೂರ,ಗ್ರಾಮೀಣ ಮಂಡಲ ಅಧ್ಯಕ್ಷ ಸುರೇಶ ಕೋಣ್ಣುರು, ಮಲ್ಲೇಶ ವಿಜಾಪುರ,ಕಲ್ಲಪ್ಪ ಭಗವತಿ, ಬಸವರಾಜ ಹುನಗುಂದ, ಮುತ್ತು ಸೀಮಿಕೇರಿ,ಉಮೇಶ ಜುಮನಾಳ, ರಂಗನಗೌಡ ಗೌಡರ, ಮುತ್ತಣ್ಣ ಕೋಲ್ಹಾರ, ಮಲ್ಲಯ್ಯ ಹಿರೇಮಠ, ಸೋಮಸಿಂಗ್ ಲಮಾಣಿ, ಸಂಗಪ್ಪ ಗಾಣಿಗೇರ, ಮಂಜುನಾಥ ಗೌಡರ, ಹುಚ್ಚೇಶ ನಿಲುಗಲ್,ಕವಿ ಬೇನಕಟ್ಟಿ, ಕರಿಯಪ್ಪ ಕಟ್ಟಿಮನಿ, ಸಿದ್ದು ಲೋಕಾಪುರ,ವಾಸು ಜಾದವ ಸೇರಿದಂತೆ ಅನೇಕ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.