ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಸಲಹೆ
ಸಂಜೆವಾಣಿ ವಾರ್ತೆ
ದಾವಣಗೆರೆ.ಜೂ.೨೮; ಕೆಲವು ಸುಲಭ ಸೂತ್ರಗಳನ್ನು ಪಾಲಿಸುವ ಮೂಲಕ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಜೆ.ಜೆ.ಎಂ. ವೈದ್ಯಕೀಯ ಮಹಾವಿದ್ಯಾಲಯದ ಕಣ್ಣಿನ ಪ್ಲಾಸ್ಟಿಕ್ ಸರ್ಜರಿ ಸ್ಪೆಷಲಿಸ್ಟ್ ಡಾ. ಶಿವಯೋಗಿ ಆರ್. ಕುಸಗೂರು ತಿಳಿಸಿದರು.ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದಲ್ಲಿ ವಿವೇಕ್ ಪೋಷಕರ ಆರೋಗ್ಯ ಕಾರ್ಯಾಗಾರದಡಿ ಕಣ್ಣಿನ ಆರೋಗ್ಯಕ್ಕೆ ಕೆಲವು ಸುಲಭ ಸೂತ್ರಗಳು… ವಿಷಯ ಕುರಿತು ಉಪನ್ಯಾಸ ನೀಡಿದ ಅವರು, ನೇತ್ರತಜ್ಞರು ಜನಸಾಮಾನ್ಯರಲ್ಲಿ ಕಣ್ಣಿನ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಕಣ್ಣಿನ ಆರೋಗ್ಯದ ಬಗ್ಗೆ ಇರುವಂತಹ ಅಂಧಕಾರವನ್ನ ಅಳಿಸುವ ಹಾಕುವ ಪ್ರಯತ್ನ ಮಾಡಬೇಕು ಎಂದರು.ಬೆಳಕಿನ ಜಗತ್ತನ್ನ ಅಳೆದು ನೋಡಬಲ್ಲಂತಹ ಕಣ್ಣಿನ ಬಗ್ಗೆ ನಮ್ಮಲ್ಲಿ ಅಪಾರ ಅಂಧಕಾರವೇ ಮನೆ ಮಾಡಿದೆ. ಈ ಅಂಧಕಾರದ ಬಗ್ಗೆ ತಿಳಿದುಕೊಂಡು ವಿಶೇಷ ಅಧ್ಯಯನ ನಡೆಸಿದಂತಹವರು ಜನಸಾಮಾನ್ಯರಿಗೆ ತಿಳಿ ಹೇಳ ಬೇಕಾದ ಅವಶ್ಯಕತೆ ಇದೆ. ದೇಹ ಮಾತ್ರವಲ್ಲ ಬದುಕಿನ ಅತೀ ಮುಖ್ಯವಾದ ಕಣ್ಣುಗಳ ಆರೋಗ್ಯ ಕಾಪಾಡುವ ಬಗ್ಗೆ ತಿಳಿಸಿಕೊಡಬೇಕಾಗಿದೆ ಎಂದರು.ಕಣ್ಣಿನ ಪೊರೆ ಸಮಸ್ಯೆ ಹೊಂದಿರುವಂತಹವರು ವಾರ್ಷಿಕ ಪರೀಕ್ಷೆ ಮಾಡಿಸಿಕೊಳ್ಳಬೇಕು. ಆಧುನಿಕ ಫ್ಹೇಕೋಎ ಮ್ಯುಲ್ಸಿಫ್ಲಿಕೇಶನ್ ಶಸ್ತ್ರಚಿಕಿತ್ಸೆಯಿಂದ ಕಣ್ಣಿನ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು ಎಂದು ತಿಳಿಸಿದರು.ಗ್ಲಾಕೋಮ ತೊಂದರೆಯಿಂದ ಬಳಲುತ್ತಿರುವವರು ಕಾಲ ಕಾಲಕ್ಕೆ ಕಣ್ಣಿನ ಒತ್ತಡದ ಪರೀಕ್ಷೆಯ ಜೊತೆಗೆ ಒತ್ತಡ ಮಾಡುವ ಹನಿಗಳನ್ನು ನಿರಂತರವಾಗಿ ಬಳಕೆ ಮಾಡುವ ಮೂಲಕ ಗ್ಲಾಕೋಮಾವನ್ನ ತಡೆಗಟ್ಟಬಹುದು ಎಂದು ತಿಳಿಸಿದರು.ಮಧುಮೇಹದಿಂದ ಬಳಲುತ್ತಿರುವವರು ಕಾಲ ಕಾಲಕ್ಕೆ ರೆಟಿನಾ ಪರೀಕ್ಷೆ, ಲೇಸರ್ ಮತ್ತು ರೆಟಿನಾ ಶಸ್ತ್ರಚಿಕಿತ್ಸೆಯ ಮೂಲಕ ಕಣ್ಣಿನ ಅಂಧಕಾರವನ್ನು ಅಳಿಸಿ ಹಾಕುವ ಪ್ರಯತ್ನ ಮಾಡಬಹುದು ಎಂದು ತಿಳಿಸಿದರು.ಕೇಂದ್ರದ ನಿರ್ದೇಶಕ ಡಾ.ಜಿ. ಗುರುಪ್ರಸಾದ್, ಡಾ.ಎ.ಎಸ್. ಮೃತ್ಯುಂಜಯ, ಡಾ. ರೇವಪ್ಪ, ವ್ಯವಸ್ಥಾಪಕ ಸಿದ್ದೇಶ್ವರ ಗುಬ್ಬಿ, ಮಂಜುನಾಥ್, ಅಂಜಲಿ, ನರ್ಸಿಂಗ್ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗ, ಪೋಷಕರು ಇದ್ದರು.