ನ್ಯಾಯಾಧೀಶರ ಮಾತಿಗಾದರೂ ಬೆಲೆಕೊಟ್ಟು ಟೀಚರ್ಸ್ ಕಾಲೋನಿಯ ರಸ್ತೆ ದುರಸ್ತಿಪಡಿಸಿ

ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಜೂ.೨೮: ನ್ಯಾಯಾಧೀಶರು ವಾಸಿಸುವಂತಹ ನಿವಾಸಗಳಿರುವ ಏರಿಯಾದಲ್ಲಿ, ಅವರ ಮನೆಗಳ ಮುಂದೆ ಹಾದುಹೋಗುವ ಟೀಚರ್ಸ್ ಕಾಲೋನಿಯ, ವಿಜ್ಞಾನ ಕಾಲೇಜ್‌ನಿಂದ ಟೀಚರ್ಸ್ ಕಾಲೋನಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಗೆ ಡಾಂಬರೀಕರಣ ಆಗಬೇಕೆಂದು ಕಾನೂನು ಸೇವಾ ಪ್ರಾಧಿಕಾರದ ಗೌರವಾನ್ವಿತ ನ್ಯಾಯಾಧೀಶರಿಗೆ ಮನವಿ ಸಲ್ಲಿಸಿ, ಅವರಿಂದ ನಗರ ಸಭೆಗೆ ಪತ್ರ ಬರೆಸಿದ್ದರು ಸಹ ರಸ್ತೆಗೆ ಬರೀ ಮಣ್ಣು ಸುರಿದು ಗುಂಡಿ ಮುಚ್ಚಲು ಪ್ರಯತ್ನಿಸುತ್ತಿರುವುದು ನ್ಯಾಯವಾದದ್ದಲ್ಲ, ನಾವು ಜೆಲ್ಲಿ ಮತ್ತು ಡಾಂಬಾರ್ ಹಾಕಿ, ಕನಿಷ್ಟ ಪಕ್ಷ ಗುಂಡಿ ಮುಉಚ್ಚಿ, ನಂತರ ಹಣ ಬಂದಾಗ ಹೊಸ ರಸ್ತೆಯನ್ನೆ ಮಾಡಿ ಎಂದು ಮನವಿಮಾಡಿಕೊಂಡಿದ್ದೇವು ಎಂದು ಕರ್ನಾಟಕ ಜ್ಞಾನ-ವಿಜ್ಞಾನ ಸಮಿತಿ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಚಿತ್ರದುರ್ಗ ಜಿಲ್ಲಾಧ್ಯಕ್ಷರಾದ ಡಾ. ಎಚ್. ಕೆ. ಎಸ್. ಸ್ವಾಮಿಯವರು ಪ್ರತಿಕೆಯ ಮುಖಾಂತರ ದೂರಿದ್ದಾರೆ..ನ್ಯಾಯಾಧೀಶರುಗಳು ವಾಸಿಸುವ ವಸತಿಗುಚ್ಛದ ಮುಂಭಾಗದ ರಸ್ತೆಗೆ ಡಾಂಬರೀಕರಣ ಮಾಡಲು ಬಹಳಷ್ಟು ಬಾರಿ ಮನವಿ ಮಾಡಲಾಗಿದೆ, ರಸ್ತೆ ತುಂಬಾ ಗುಂಡಿಗಳಿದ್ದು, ಎರಡು ಕಿಲೋಮೀಟರ್ ಉದ್ದದ ರಸ್ತೆಗೆ ಡಾಂಬರೀಕರಣ ಇಲ್ಲದೆ, ರಸ್ತೆಗಳು ಗುಂಡಿಯಿAದ ತುಂಬಿ ಹೋಗಿದ್ದು, ಗಾಡಿ ಚಲಾಯಿಸುವವರಿಗೆ, ಎತ್ತ ಕಡೆ ಗಾಡಿ ಚಲಾಯಿಸುವುದು ಎಂಬ ಚಂಚಾಟದಲ್ಲಿ ಅಪಘಾತಗಳಿಗೆ ಆಸ್ಪದ ನೀಡುವಂತಿದೆ, ನಾಲ್ಕರಿಂದ ಐದು ಕಾಲೇಜಿನ ವಿದ್ಯಾರ್ಥಿಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಪಕ್ಕದಲ್ಲಿ ಒಂದು ದೊಡ್ಡ ಸ್ಮಶಾನವಿದ್ದು, ರಸ್ತೆ ಗುಂಡಿಗಳನ್ನ ಸರಿಪಡಿಸಲು ಇನ್ನೂ ನಗರ ಸಭೆಯವರು ಹಿಂದೆ ಮುಂದೆ ನೋಡುತ್ತಿರುವುದು ವಿಷಾದನೀಯ ಎಂದಿದ್ದಾರೆ.ರಸ್ತೆ ಅಪಘಾತಗಳ ಆದರೆ ಪಕ್ಕದಲ್ಲಿ ಸ್ಮಶಾನವಿದೆ ಎಂಬ ಸಾಂಕೇತಿಕ ಭಯವನ್ನಾದರೂ ನಾವು ಮನಸ್ಸಿನಲ್ಲಿ ಇಟ್ಟುಕೊಂಡು, ಈ ರಸ್ತೆಯಲ್ಲಿರುವ ಗುಂಡಿಗಳನ್ನ ಮಣ್ಣಿನಿಂದ ಮುಚ್ಚುವುದಕ್ಕಿಂತ, ಜಲ್ಲಿ ಮತ್ತು ಸಿಮೆಂಟ್ ಅಥವÀ ಡಾಂಬರೀಕರಣದಿAದ ಮುಚ್ಚಿದ್ದರೆ ಅದು ಸ್ವಲ್ಪ ಬಲಿಷ್ಠವಾಗಿರುತ್ತಿತ್ತು. ಈಗ ಬರೀ ಮಣ್ಣಿನಿಂದ ಮುಚ್ಚುವುದು ಸರಿಯಲ್ಲ, ಬರಿ ಮಣ್ಣಿನಿಂದ ಗುಂಡಿಗಳನ್ನ ಮುಚ್ಚಿ ಹೋದರೆ, ಮಳೆಗಾಲದಲ್ಲಿ ಇನ್ನೊಂದಿಷ್ಟು ತೊಂದರೆಗಳಾಗಿ, ಗಾಡಿ ಚಲಾಯಿಸುವವರಿಗೆ ಅನಾನುಕೂಲವೇ ಹೆಚ್ಚಾಗುತ್ತದೆ ಎಂದು ವಿನಂತಿಸಿಕೊAಡಿದ್ದಾರೆ.