ತೃತೀಯ ಲಿಂಗಿಗಳಿಗೆ ಸಮಾಜದಲ್ಲಿ ಎಲ್ಲರಂತೆ ಬಾಳಲು ಸಮಾನ ಹಕ್ಕಿದೆ – ವಿ.ಕೆ ಪ್ರಶಾಂತ್‌
ಸಂಜೆವಾಣಿ ವಾರ್ತೆ
ದಾವಣಗೆರೆ.ಜೂ.೨೮;  ಮಹಾನಗರ ಪಾಲಿಕೆ, ಕೆ.ಯು.ಐ.ಡಿ.ಎಫ್.ಸಿ, ಸುಯೆಜ್‌ ಹಾಗೂ ಅಭಯ ಸ್ಫಂದನಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಎಲ್.ಜಿ.ಬಿ.ಟಿ.ಕ್ಯೂ.ಎ.ಐ + ಸಮುದಾಯ ಗುಂಪುಗಳಿಗೆ ಸಮಾನ ಹಕ್ಕನ್ನು ನೀಡುವ ಹಾಗೂ ಅವರನ್ನು ಮುಖ್ಯವಾಹಿನಿಗೆ ತರುವ ಸಲುವಾಗಿ ಆಚರಿಸುವ “ಜೂನ್-‌ಹೆಮ್ಮೆಯ ತಿಂಗಳು” ಕಾರ್ಯಕ್ರಮವನ್ನು ನಗರದ ಸುಯೆಜ್‌ ಸಂಸ್ಥೆಯಲ್ಲಿ ಹಮ್ಮಿಕೊಳ್ಳ ಲಾಗಿತ್ತು. ಕಾರ್ಯಕ್ರಮದ ಉಧ್ಘಾಟನೆಯನ್ನು ಸಂಸ್ಥೆಯ ಅಧ್ಯಕ್ಷೆ ಚೈತ್ರಾ, ನೇರವೇರಿಸಿದರು ನಂತರ ಮಾತನಾಡಿದ ಅವರು “ ತಮ್ಮ ಜೀವನದಲ್ಲಿ ತೃತೀಯ ಲಿಂಗಿಯಾಗಿ ಎದುರಿಸಿದ ಹೋರಾಟಗಳ ಬಗ್ಗೆ ಹಂಚಿಕೊಂಡು, ತಾವು ಅಭಯ ಸ್ಪಂದನಾ ಸಂಸ್ಥೆಯನ್ನು ಕಟ್ಟಿ ಬೆಳಸಿದ ಬಗ್ಗೆ ತಿಳಿಸುತ್ತಾ ಪ್ರಸ್ತುತ ತೃತೀಯ ಲಿಂಗಿಗಳ ಬದುಕು ಹಾಗೂ ಬವಣೆಗಳ ಬಗ್ಗೆ ಸಂರ್ಪೂಣಾ ಮಾಹಿತಿ ನೀಡಿದರು. ಸರ್ಕಾರ ಹಾಗೂ ಸುಯೆಜ್‌ ನಂತಹ ಸಂಸ್ಥೆಗಳ ಸಾಮಾಜಿಕ ಕಾಳಜಿಯನ್ನು ಶ್ಲಾಘಿಸಿ ಸುಯೆಜ್‌ ಸಿಬ್ಬಂದಿಗಳೊಡನೆ ಅರ್ಥಪೂರ್ಣ ಸಂವಾದವನ್ನು ನಡೆಸಿಕೊಟ್ಟರು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ವಿ.ಕೆ ಪ್ರಶಾಂತ್‌, ಯೋಜನಾ ವ್ಯವಸ್ಥಾಪಕರು, ಸುಯೆಜ್‌  ಮಾತನಾಡುತ್ತಾ ನಮ್ಮ ಸಮಾಜದಲ್ಲಿ ತೃತೀಯ ಲಿಂಗಿಗಳಿಗೆ ಎಲ್ಲರಂತೆ ಬಾಳಲು ಸಮಾನ ಹಕ್ಕಿದೆ ಹಾಗೂ ಅವರನ್ನು ಮಖ್ಯವಾಹಿನಿಗೆ ತರುವ ಬಗ್ಗೆ ಜಾಗತಿಕವಾಗಿ ನಡೆಯುತ್ತಿರುವ ತಾರತಮ್ಯ ನಿವಾರಣೆ ಹಾಗೂ ಬೆಂಬಲ ಕಾರ್ಯಕ್ರಮಗಳ ಬಗ್ಗೆ ವಿವರಣೆ ನೀಡಿದರು. ತೃತೀಯ ಲಿಂಗಿಗಳ ಅಭ್ಯುದ್ಯಯಕ್ಕಾಗಿ ರೂಪಗೊಂಡಿರುವ ವಿವಿಧ ಬಣ್ಣಗಳ ಧ್ವಜದ ಬಗ್ಗೆ ಉತ್ತಮ ಮಾಹಿತಿ ನೀಡಿ ಸಮಾಜದಲ್ಲಿ ಎಲ್ಲರೂ ಸಮಾನರು ಎಂಬ ಅಂಶದ ಬಗ್ಗೆ ನಾವೆಲ್ಲರೂ ಅರಿತಿಕೊಳ್ಳಬೇಕಿದೆ ಎಂದರು. ಕಾರ್ಯಕ್ರಮದಲ್ಲಿ ಸುಯೆಜ್‌ನ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತಿರಿದ್ದರು. ಸಾರ್ವಜನಿಕ ಸಂಪರ್ಕಾಧಿಕಾರಿ ವಿಕೆಎನ್‌ ಮೂರ್ತಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.