ನಾಡಪ್ರಭು ಕೆಂಪೇಗೌಡರ ಬಗ್ಗೆ ವಿದ್ಯಾರ್ಥಿಗಳಿಂದ ಭಾಷಣ
ಸಂಜೆವಾಣಿ ವಾರ್ತೆ
ಹಿರಿಯೂರು ಜೂ. 28 –  ತಾಲ್ಲೂಕಿನ ಐಮಂಗಲ ಗ್ರಾಮದಲ್ಲಿ ಶ್ರೀಮಹಾ ಶಿವಶರಣ ಹರಳಯ್ಯ ಗುರುಪೀಠ, ಶ್ರೀ ಮಹಾಶಿವಶರಣ ಹರಳಯ್ಯ ಶಿಕ್ಷಣ ಸಂಸ್ಥೆ. ಹಾಗೂ  ಶ್ರೀ ಮಹಾಶಿವಶರಣ  ಹರಳಯ್ಯ ಆಂಗ್ಲ ಮಾದ್ಯಮ ಕಿರಿಯ ಪ್ರಾಥಮಿಕ ಶಾಲೆ. ವತಿಯಿಂದ ನಾಡಪ್ರಭು ಕೆಂಪೇಗೌಡರವರ ಜಯಂತಿಯ ಅಂಗವಾಗಿ ಮಕ್ಕಳಿಗೆ ನಾಡಪ್ರಭು ಕೆಂಪೇಗೌಡರ  ಸಾಧನೆಗಳ ಕುರಿತ ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದ ಪ್ರಥಮ  ಬಹುಮಾನ  ವಫಿಕ  ಎಮ್ ವಿ.ದ್ವಿತೀಯ ಪೃಥ್ವಿ. ತೃತೀಯ ಶ್ರೀ ಲಕ್ಷ್ಮಿ ಎಚ್ ಎಸ್ ಸಮಾಧಾನಕರ ಉದಯ  ಟಿ ರವರು ಪಡೆದರು. ಬಹುಮಾನ  ವಿತರಣೆಯನ್ನು ಶ್ರೀ ಬಸವ ಹರಳಯ್ಯ ಮಹಾಸ್ವಾಮಿಜಿ ರವರು   ನೀಡಿದರು. ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಮುಖ್ಯ ಶಿಕ್ಷಕರಾದ ಹರೀಶ್ ರವರು ಆಧುನಿಕ ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರು  ಮತ್ತು ಬೆಂಗಳೂರಿನ ಇತಿಹಾಸವನ್ನು ನಿರ್ಮಿಸಿದ ಶಿಲ್ಪಿ ಎಂದು ಹೇಳಿದರು. ಅಧ್ಯಕ್ಷತೆಯನ್ನು  ಚಿಂತಕ ರಾದ  ಬುಡೇನ್ ಸಾಬ್, ವಹಿಸಿದ್ದರು .ವೇದಿಕೆಯಲ್ಲಿ‌ ಸಂಸ್ಥೆಯ ವ್ಯವಸ್ಥಾಪಕರಾದ ಡಿ.ನಾಗಾರ್ಜುನ್, ಕಾರ್ಯಕ್ರಮ ಸಂಯೋಜಕರಾದ ಕೆ ಪವಿತ್ರ.ಶಿಕ್ಷಕಿ ರಕ್ಷಿತಾ, ಚಿರು, ಪಾವ೯ತಮ್ಮ ಉಪಸ್ಥಿತರಿದ್ದರು ಕಾರ್ಯಕ್ರಮದ ನಿರೂಪಣೆ ಕುಮಾರಿ ಛಾಯ ನೆರಿವೇರಿಸಿದರು.