ಕೆಂಪೇಗೌಡರ ಜನಪರ ಮತ್ತು ಸಾಮಾಜಿಕ ಆಡಳಿತ ಅಮರ
ಬೇಲೂರು.ಜೂ.೨೭-ಕೆಲವು ಮಹಾನ್ ವ್ಯಕ್ತಿಗಳನ್ನು ಎಂದಿಗೂ ಮರೆಯಲು ಸಾಧ್ಯವಾಗುವುದಿಲ್ಲ. ಅವರು ನಮ್ಮೊಂದಿಗೆ ಇಲ್ಲದಿದ್ದರೂ ಸಾಧನೆಗಳು ಅಮರವಾಗಿರುತ್ತವೆ. ಇವರ ಸಾಲಿನಲ್ಲಿ ನಾಡಪ್ರಭು ಕೆಂಪೇಗೌಡ ಸೇರುತ್ತಾರೆ ಎಂದು ನಿವೃತ್ತ ಪ್ರಾಂಶುಪಾಲ ಎನ್.ಪುಟ್ಟರಾಜು ಹೇಳಿದರು.
ತಾಲ್ಲೂಕಿನ ಹಳೇಬೀಡು ಸರ್ಕಾರಿ ಪದವಿ ಪೂರ್ವ ಕಾಲೇಜು ಅವರಣದಲ್ಲಿ ತಾಲ್ಲೂಕು ಜಾನಪದ ಪರಿಷತ್ ವತಿಯಿಂದ ನಡೆದ ಕೆಂಪೇಗೌಡರ ಜನ್ಮ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮ ಉದ್ಘಾಟನೆ ನಡೆಸಿ ಮಾತನಾಡಿದ ಅವರು ಕರ್ನಾಟಕಕ್ಕೆ ಬೆಂಗಳೂರು ಕಾಮಧೇನು ವಿನಂತಿದೆ. ಇಂತಹ ಮಹಾನ್ ವ್ಯಕ್ತಿಗಳ ಕೊಡುಗೆಗಳ ಬಗ್ಗೆ ಧನ್ಯತಾಭಾವ ಮನಸ್ಸಿನಲ್ಲಿರಬೇಕು. ಕಾರಣ ಇಂತಹ ಬೆಂಗಳೂರು ಕಟ್ಟಿದ ಮಾಹನ್ ವ್ಯಕ್ತಿ ಕೆಂಪೇಗೌಡರನ್ನು ನಾವುಗಳು ಎಂದಿಗೂ ಮರೆಯಲು ಸಾದ್ಯವಿಲ್ಲ,ಒಂದು ನಗರ ಹೇಗಿರಬೇಕೆಂಬ ಸ್ಪಷ್ಟ ಕಲ್ಪನೆ ಕೆಂಪೇಗೌಡರಿಗೆ ಇತ್ತು. ಇಂತಹ ದೂರದೃಷ್ಟಿಯಿಂದ ನದಿಮೂಲ ಇಲ್ಲದ ಒಂದು ನಗರ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದ್ದು ಆ ಮೂಲಕ ಕೆಂಪೇಗೌಡರು ಇಂದಿಗೂ ಅವರ ಆಡಳಿತ, ನಗರ ನಿರ್ಮಾಣದ ಯೋಜನೆಯ ಬಗ್ಗೆ ಅವರ ದೂರದೃಷ್ಟಿ ಹಲವಾರು ಅಂಶಗಳನ್ನು ಇಂದಿನ ಸರಕಾರಗಳು ಅವಳವಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಒಂದು ನಗರ ಹೇಗಿರಬೇಕು ಅಲ್ಲಿನ ಕಸುಬುಗಳು ಹಾಗು ಜನಗಳ ಬದುಕಿನ ರೀತಿಗೆ ಹೊಂದಿಕೊಳ್ಳವ ರೀತಿ ಅರಿವಿದ್ದ ಕೆಂಪೇಡಗೌಡರು ಬೆಂಗಳೂರನ್ನು ಅಚ್ಚುಕಟ್ಟಾಗಿ ನಿರ್ಮಾಣ ಮಾಡುತ್ತಾರೆ ಇಂತಹ ನಾಯಕನ ಗುಣಗಳನ್ನು ಆದರ್ಶಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕಿದೆ ಎಂದು ಕರೆ ನೀಡಿದರು.
ಬೇಲೂರು ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷರು ಹಾಗೂ ಪತ್ರಕರ್ತರಾದ ಹೆಬ್ಬಾಳು ಹಾಲಪ್ಪ ಮಾತನಾಡಿ, ಕೆಂಪೇಗೌಡರು ನೀರಾವರಿ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಆದರೆ ಇಂದು ಅಧುನಿಕತೆ ನೆಪದಲ್ಲಿ ಕೆರೆ ಕಟ್ಟೆಗಳನ್ನು ಒತ್ತುವರಿ ನಡೆಸಿ ಮನೆ ಕೈಗಾರಿಕಾ ನಿರ್ಮಸಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಳೇಬೀಡು ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ವಿನುತ,ಹಾಸನ ಪದವಿ ಪೂರ್ವ ಶಿಕ್ಷಣ ಸಂಸ್ಥೆ ನಿವೃತ್ತ ಅಧೀಕ್ಷಕರಾದ ಕಮಲಮ್ಮ, ಪತ್ರಕರ್ತರ ಅನಿಲ್ ಕುಮಾರ್, ಸಾಹಿತಿ ಇಂದಿರಮ್ಮ, ಉಪನ್ಯಾಸಕರಾದ ಧನಂಜಯ, ಧರ್ಮೇಗೌಡ, ಬಸವರಾಜು, ರಾಘವೇಂದ್ರ, ರಮೇಶ್, ಗೋಮತಿ, ನಾಗರಾಜ್, ಲೋಕೇಶ್, ಮಹೇಶ ಕುಮಾರ್, ವೆಂಕಟೇಶ್ ಹಾಜರಿದ್ದ ಸಮಾರಂಭದಲ್ಲಿ ವಿದ್ಯಾರ್ಥಿಗಳಾದ ಪ್ರಮೋದ್, ಭೂಮಿಕಾ, ಭಾವನ ಇವರಿಗೆ ಪ್ರತಿಭಾ ಪುರಸ್ಕಾರ ನಡೆಸಲಾಯಿತು.
ಕೆಂಪೇಗೌಡರ ಜನ್ಮ ದಿನ ಅರ್ಥಪೂರ್ಣ
ಬೇಲೂರು ತಾಲ್ಲೂಕು ಜಾನಪದ ಸಾಹಿತ್ಯ ಪರಿಷತ್ತು ಅಧ್ಯಕ್ಷ ವೈ.ಸಿ.ಸಿದ್ದೇಗೌಡ ಮಾತನಾಡಿ,ಕೆಂಪೇಗೌಡರ ಇತಿಹಾಸದ ಕುರಿತು ನಮಗೆ ನಿಖರವಾದ ದಾಖಲೆಗಳು ಸಿಗುವುದಿಲ್ಲ. ಮುಖ್ಯವಾಗಿ ಜನಪದ ಸಾಹಿತ್ಯದಲ್ಲಿ, ಜನಪದ ಕಥೆಗಳಲ್ಲಿ, ಕೆಲ ಕಲ್ಲಿನ ಶಾಸನಗಳಲ್ಲಿ ಇತಿಹಾಸ ಕಂಡುಬರುತ್ತದೆ. ಈ ಮೂಲಕ ಬಹುತೇಕ ಸಂಶೋಧಕರ ಸಂಶೋಧನಾ ಕೃತಿಗಳಲ್ಲಿ ಕೆಂಪೇಗೌಡರ ಜೀವನ ಕಥೆ, ಆಡಳಿತದ ಅವಧಿ ನಮೂದಾಗಿದೆ.ನಮಗೆ ಕೆಂಪೇಗೌಡರ ಇತಿಹಾಸ ೧೮ನೇ ಶತಮಾನದ ಆರಂಭದಿಂದ ಬಹುತೇಕ ನಿಖರವಾಗಿ ಸಿಗುತ್ತದೆ. ಇನ್ನು ಹಿಂದಕ್ಕೆ ಹೋದರೆ ಜನಗಳ ಬಾಯಿಯಿಂದ ಬಾಯಿಗೆ ಹರಿದ ಜನಪದ ಸಾಹಿತ್ಯ, ಕಥೆಗಳನ್ನು ಕಾಣ ಸಿಗುತ್ತಾರೆ. ೪ನೇ ಆಂಗ್ಲೋ ಮಹಾಯುದ್ಧದ ನಂತರ ಕೆಂಪೇಗೌಡರ ಕುಂಟುಂಬ ಮಾಗಡಿಗೆ ಸ್ಥಳಾಂತರ ಆಗುತ್ತಾರೆ. ಮಗ ಇಮ್ಮಡಿ ಕೆಂಪೇಗೌಡ ಆಳ್ವಿಕೆ ಮಾಡುತ್ತಾನೆ. ಕೆಂಪೇಗೌಡರ ಬಯಲು ಸೀಮೆ ಪ್ರದೇಶಗಳಾದ ತಮ್ಮಂದಿರು ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗು ದೊಡ್ಡಬಳ್ಳಾಪುರವನ್ನು ಆಳುತ್ತಾರೆ ಎಂದು ಹೇಳಲಾಗುತ್ತದೆ. ಈ ನಿಟ್ಟಿನಲ್ಲಿ ಇಂದು ನಡೆದ ಕೆಂಪೇಗೌಡರ ಜನ್ಮ ದಿನ ಅರ್ಥಪೂರ್ಣವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.