ಯೋಗಾಸನದಲ್ಲಿ ಪ್ರಾಣಾಯಾಮ ಮುಖ್ಯ ಆಸನ
ಕನಕಪುರ.ಜೂ.೨೮-ಯೋಗಾಸನದಲ್ಲಿ ಪ್ರಾಣಾಯಾಮ ಅತ್ಯಂತ ಮುಖ್ಯವಾದ ಒಂದು ಆಸನವಾಗಿದೆ. ಪ್ರತಿನಿತ್ಯ ಪ್ರಾಣಾಯಾಮವನ್ನು ಕ್ರಮಬದ್ಧವಾಗಿ ಮಾಡುವಂತೆ ಪ್ರಕೃತಿ ಚಿಕಿತ್ಸಕರು ಹಾಗೂ ಆಯುರ್ವೇದ ತಜ್ಞರಾದ ಡಾ. ಭಾನು ತಿಳಿಸಿದರು.
ಕನಕಪುರ ನಗರದ ಮೇಗಳ ಬೀದಿಯಲ್ಲಿ ಇರುವ ಜಿಹ್ವೇಶ್ವರ ಮಂದಿರದಲ್ಲಿ ವಿಶ್ವಯೋಗದಿನಾಚಣೆಯ ಅಂಗವಾಗಿ ತರಬೇತಿ ನೀಡಿ ಮಾತನಾಡಿದರು.
ಯೋಗಾಸನವನ್ನು ಮಾಡುವ ಸಂದರ್ಭದಲ್ಲಿ ಪ್ರಾಣಾಯಾಮ ಅತಿಮುಖ್ಯವಾದ ಒಂದು ಆಸನವಾಗಿದೆ ಇದನ್ನು ಮಾಡುವಾಗ ಮನುಷ್ಯನ ದೇಹದಲ್ಲಿ ಶಾಖ ಉತ್ಪತ್ತಿಯಾಗುತ್ತದೆ ಆ ನಂತರ ಕೊನೆಯಲ್ಲಿ ಶಾSವನ್ನು ಶಮನಮಾಡಿಕೊಳ್ಳಬೇಕಾಗಿದೆ ಈ ರೀತಿ ಕ್ರಮವರಿತು ಯೋಗವನ್ನು ಮಾಡುವುದರಿಂದ ಒಳ್ಳೆಯ ಲಾಭವನ್ನು ಯೋಗ ಪಟುಗಳು ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಯೋಗ ತರಬೇತುದಾರರಾದ ದಯಾನಂದ್‌ರವರು ಮಾತನಾಡಿ, ಈ ದಿನ ಯೋಗವನ್ನು ಮಾಡಿ ನಾಳೆಯಿಂದ ಬಿಟ್ಟು ಬಿಡುವುದಲ್ಲ ಪ್ರತಿನಿತ್ಯ ನಿಮ್ಮ ಜೀವನದ ಒಂದು ಅಂಗವಾಗಿ ಅಳವಡಿಸಿಕೊಂಡಾಗ ಮಾತ್ರ ಈ ದಿನದ ಕಾರ್‍ಯಕ್ರಮಕ್ಕೆ ಒಂದು ಅರ್ಥ ಬರುತ್ತದೆ ಎಂದು ಹೇಳಿದರು. ಈ ಭಾರಿ ಡಾ. ಭಾನುರವರು ಪ್ರಕೃತಿ ಚಿಕಿತ್ಸಾ ತಜ್ಞರು ವಿಶ್ವ;ಯೋಗ ದಿನಾಚರಣೆಯ ಆಂಗವಾಗಿ ಯಾವ ರೀತಿ ಪ್ರತಿನಿತ್ಯ ಯೋUವನ್ನು ಮಾಡಬೇಕೆಂಬುದರ ಬಗ್ಗೆ ತಿಳಿಸಿಕೊಟ್ಟರು. ಈ ಸಂದರ್ಭದಲ್ಲಿ ಯೋಗ ಪಟುಗಲಾದ ಬಾಲರಾಜ್, ಚನ್ನಕೇಶವ ಡಾ. ವೆಂಕಟೇಶ್, ರಾಜು, ಮಂಜು, ಸೇರಿದಂತೆ ೪೦ಕ್ಕೂ ಹೆಚ್ಚು ಯೋಗಪಟುಗಳು ಹಜರಿದ್ದರು.