ಕೆಂಪೇಗೌಡ ಜಗತ್ತಿನ ಜ್ಞಾನದ ಬೆಳಕು
ಕನಕಪುರ.ಜೂ.೨೮-ಕೆಂಪೇಗೌಡ ಒಂದು ಸಮುದಾಯಕ್ಕೆ ಸೇರಿದವರಲ್ಲ, ಹಾಗೆಯೇ ಕೇವಲ ಬೆಂಗಳೂರಿಗೆ ಸೀಮಿತರಾದವರಲ್ಲ ಜಗತ್ತಿನ ಜ್ಞಾನದ ಬೆಳಕಾಗಿದ್ದಾರೆ ಎಂದು ಆದಿ ಚಂಚನಗಿರಿ ರಾಮನಗರ ಶಾಖಾ ಮಠದ ಅನ್ನದನೇಶ್ವರನಾಥಸ್ವಾಮಿಗಳು ಹೇಳಿದ್ದಾರೆ.
ಕನಕಪುರ ನಗರದ ಅಂಬೇಡ್ಕರ್ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯವತಿಯಿಂದ ಹಮ್ಮಿಕೊಳ್ಳಲಾಗಿದ್ದ ನಾಡಪ್ರಭು ಕೆಂಪೇಗೌಡರ ೫೧೫ನೇ ಜಯಂತಿಯ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದರು.
ವಿಶ್ವವೇ ತಿರುಗಿ ನೋಡುವ ನಿಟ್ಟಿನಲ್ಲಿ ಬೆಳೆದಿರುವ ಬೆಂಗಳೂರಿಗೆ ಕೆಂಪೇಗೌಡರ ಕುಟುಂಬ ಬಹಳಷ್ಟ ತ್ಯಾಗ ಬಲಿದಾನವನ್ನು ಮಾಡಿದೆ, ಹಾಗೆಯೇ ಇತಿಹಾಸದಲ್ಲಿ ಅಚ್ಚಳಿಯದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಇಂದಿಗೆ ಅವರು ಹಜರಾಮರಾಗಲು ಬೆಂಗಳೂರು ನಿರ್ಮಿಸಿದ ಸಂದರ್ಭದಲ್ಲಿ ಅವರು ಜಾತಿ ಆದಾರಿತ ಕಸುಬಗಳಿಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿ ಆ ಜನಾಂಗದ ಏಳಿಗೆಗೆ ಕಾರಣವಾಗಿರುವುದು ಇಂದಿಗೂ ನೋಡಬಹುದಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ತಾಲೂಕು ಪಂಚಾಯತಿ ಇ.ಒ. ಬೈರಪ್ಪ, ಬಿಇಒ ಜಿ.ರಾಮಪ್ಪ, ರೇಷ್ಮೆ ಇಲಾಖೆ ಮುತ್ತುರಾಜು, ಕೃಷಿ ಇಲಾಖೆ ರಾಧಕೃಷ್ಣ,
ಡಾ. ಯು.ಸಿ. ಕುಮಾರ್,ಬಿ.ಎಸ್. ಸತೀಶ್, ರಕ್ಷಣಾ ವೇದಿಕೆಯ ಕಬ್ಬಾಳೇಗೌಡ, ಕುಮಾರಸ್ವಾಮಿ, ಜಯರಾಮೇಗೌಡ, ಗಬ್ಬಾಡಿ ಕಾಡೇಗೌಡ, ಚಿಕ್ಕಕೆಂಪೇಗೌಡ, ಕೆ.ಬಿ.ಎಸ್ ಸಿದ್ದರಾಜು,ಮುನಿಲಿಂಗೇಗೌಡ, ಹರೀಶ್, ಚೀರಣಕುಪ್ಪೆ ರಾಜೇಶ್, ಸ್ಟುಡಿಯೋ ಚಂದ್ರು, ಕುಮಾರಸ್ವಾಮಿ, ಸೀರೆಗೌಡ, ಸುಧಾ, ದೊಡ್ಡಿಬೀದಿ ನಾಗೇಶ್,ರಾಮದಾಸ್, ಕಾಂತರಾಜ್, ಬಿಎಸ್.ಗೌಡ, ಯು.ವಿ.ಸ್ವಾಮಿಗೌಡ, ಕೊತ್ತನೂರು ಕುಮಾರ್, ಸೇರಿದಂತೆ ಅನೇಕ ಒಕ್ಕಲಿಗ ಮುಖಂಡರು ಉಪಸ್ಥಿತರಿದ್ದರು..