ದೃಶ್ಯಕಲಾ ಮಹಾವಿದ್ಯಾಲಯಕ್ಕೆ ವಜ್ರ ಮಹೋತ್ಸವದ ಸಂಭ್ರಮ
ಸಂಜೆವಾಣಿ ವಾರ್ತೆ
ದಾವಣಗೆರೆ. ಜೂ.೨೭; ದಾವಣಗೆರೆಯ ದೃಶ್ಯಕಲಾ ಮಹಾವಿದ್ಯಾಲಯ ವಜ್ರಮಹೋತ್ಸವವದ ಸಂಭ್ರಮದಲ್ಲಿದ್ದು ಈ ಸಮಾರಂಭವನ್ನು ಅವಿಸ್ಮರಣೀಯವಾಗಿ ಆಯೋಜಿಸುವ ಚಿಂತನೆ ಇದೆ. ಜುಲೈ ತಿಂಗಳಿನಲ್ಲಿ ವಜ್ರ ಮಹೋತ್ಸವ ಆಯೋಜಿಸಲಾಗಿದೆ ಹಾಗೂ ವರ್ಷವಿಡೀ ಸರಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಬಿ.ಡಿ.ಕುಂಬಾರ ಮಾಹಿತಿ ನೀಡಿದರು.ನಗರದ ದೃಶ್ಯಕಲಾ ಮಹಾವಿದ್ಯಾಲಯದ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವಜ್ರ ಮಹೋತ್ಸವದ ಮಹತ್ವದ ಮೈಲಿಗಲ್ಲನ್ನು ಸ್ಮರಿಸಲು, ಕಾಲೇಜಿನಲ್ಲಿ ವರ್ಷವಿಡೀ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.ಜುಲೈ ತಿಂಗಳಲ್ಲಿ 1964- 2000 ರ ಹಿರಿಯ ವಿದ್ಯಾರ್ಥಿಗಳ ಸಭೆ ಕರೆಯಲಾಗಿದೆ.ಅದೇ ರೀತಿ ಹಳೆ ವಿದ್ಯಾರ್ಥಿಗಳ ಸಭೆ 2001 ರಿಂದ 2023 ರ ಹಿರಿಯ ವಿದ್ಯಾರ್ಥಿಗಳ ಸಭೆ.ನಂತರ  ನಿವೃತ್ತ ಅಧ್ಯಾಪಕರ ಸಭೆ ಕರೆಯಲಾಗುವುದು. ಜುಲೈ ತಿಂಗಳ ೩೧ ರೊಳಗೆ  2024 ರ ವಜ್ರ ಮಹೋತ್ಸವ ಕಾರ್ಯಕ್ರಮದ ಉದ್ಘಾಟನೆ ಹಮ್ಮಿಕೊಳ್ಳ ಲಾಗುವುದು.ವಿದ್ಯಾರ್ಥಿಗಳಿಗೆ ಪರೀಕ್ಷೆಯಿರುವುದರಿಂದ ಯಾವುದೇ ರೀತಿಯ ತೊಂದರೆಯಾಗದಂತೆ ದಿನಾಂಕ ನಿಗಧಿ ಮಾಡಲಾಗುವುದು ಎಂದರು.ಆಗಸ್ಟ್ ನಲ್ಲಿ ಒಂದು ದಿನ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಚಿತ್ರಕಲೆ ಸ್ಪರ್ಧೆ ಆಯೋಜನೆ. ಸೆಪ್ಟೆಂಬರ್ ನಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದ ಕಾರ್ಯಕ್ರಮ, ಏಳು‌ದಿನಗಳ ಕಾಲ ಕಲಾ ಪ್ರದರ್ಶನ ಮತ್ತು ಸೆಮಿನಾರ್ , ಅಕ್ಟೋಬರ್ ನಲ್ಲಿ ವಿದ್ಯಾರ್ಥಿಗಳಿಗಾಗಿ ಮೂರು ದಿನ ಟೆರಾಕೋಟಾ ಕಾರ್ಯಾಗಾರ ಆಯೋಜನೆ ಮಾಡುವ ಚಿಂತನೆಯಿದೆ.ನವೆಂಬರ್ ನಲ್ಲಿ ಲಲಿತಕಲಾ ಅಕಾಡೆಮಿ ಕಲಾ ಶಿಬಿರ ಹಾಗೂ ಡಿಸೆಂಬರ್ ತಿಂಗಳಲ್ಲಿ ಮೂರು ದಿನ ಡಿಜಿಟಲ್ ಕಲಾ ಕಾರ್ಯಾಗಾರ. ಜನವರಿಯಲ್ಲಿ ಎರಡು‌ದಿನ ವಿಷುಯಲ್ ಆರ್ಟ್ಸ್ ನ ಬಗ್ಗೆ ಸೆಮಿನಾರ್, ಫೆಬ್ರವರಿಯಲ್ಲಿ ೧೫ ದಿನ ಶಿಲ್ಪಕಲಾ ಅಕಾಡೆಮಿಯಿಂದ ಕಲಾ ಶಿಬಿರ. ಮಾರ್ಚ್ ನಲ್ಲಿ ಮೂರುದಿನ ಹೊಸ ಮಾಧ್ಯಮ ಕಾರ್ಯಾಗಾರ ಹಾಗೆಯೇ ಏಪ್ರಿಲ್ ನಲ್ಲಿ ರಾಜ್ಯ ಮಟ್ಟದ ಕಲಾ ಶಿಕ್ಷಕರು,ಅಧ್ಯಾಪಕರಿಗೆ ತರಬೇತಿ ಕಾರ್ಯಾಗಾರ, ಮೇನಲ್ಲಿ ಸ್ಮರಣ ಸಂಚಿಕೆ ಬಿಡುಗಡೆ, ಹಿರಿಯ ಕಲಾವಿದರ ಸನ್ಮಾನ, ರಾಷ್ಟ್ರೀಯ ಮಟ್ಟದ ಸೆಮಿನಾರ್ ಮತ್ತು ಸಮಾರೋಪ ಸಮಾರಂಭ ಈ ರೀತಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಯೂನಿವರ್ಸಿಟಿ ಕಾಲೇಜ್ ಆಫ್ ವಿಷುಯಲ್ ಆರ್ಟ್ಸ್ನ ಶ್ರೀಮಂತ ಪರಂಪರೆ ಮತ್ತು ಭವಿಷ್ಯ ರೂಪಿಸುವ, ಹಿಂದಿನ ಹಾಗೂ ಪ್ರಸ್ತುತ ಇರುವ ವಿದ್ಯಾರ್ಥಿಗಳು, ಅಧ್ಯಾಪಕರು, ಕಲಾವಿದರನ್ನು ಒಟ್ಟುಗೂಡಿಸುವ ಗುರಿ ಹೊಂದಿದೆ ಎಂದರು.ರಾಜ್ಯದ ಮೊಟ್ಟ ಮೊದಲ ಸರ್ಕಾರದ ಚಿತ್ರಕಲಾ ಶಾಲೆಯ 60ರ ಸಂಭ್ರಮೋತ್ಸವವನ್ನು ಅದ್ಧೂರಿಯಾಗಿ, ಐತಿಹಾಸಿಕ ದಾಖಲೆಯಾಗಿ ಉಳಿಯುವಂತೆ ಮಾಡುವ ಉದ್ದೇಶದಿಂದ ದಾವಣಗೆರೆ ವಿಶ್ವವಿದ್ಯಾನಿಲಯ ಹಲವಾರುವ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ರೂಪಿಸಿದೆ. ಅಲ್ಲದೆ ಪ್ರಸ್ತುತ ಕಾಲೇಜು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮತ್ತು ಇಲ್ಲಿಯ ವಿದ್ಯಾರ್ಥಿಗಳು ಉನ್ನತ ಭವಿಷ್ಯದೊಂದಿಗೆ ಬದುಕು ರೂಪಿಸಿಕೊಳ್ಳುವ ಹಾಗೂ ಹೆಗ್ಗುರುತನ್ನು ರೂಪಿಸುವಂತೆ ಮಾಡುವ ಆಶಯವನ್ನೂ ಹೊಂದಿದೆ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ದಾವಣಗೆರೆ ವಿಶ್ವವಿದ್ಯಾಲಯದ ಮಹಾಬಲೇಶ್ವರ, ಕಾಲೇಜಿನ ಡಾ.ಜೈರಾಜ್ ಚಿಕ್ಕ ಪಾಟೀಲ್, ಡಾ.ಸತೀಶ್ ಕುಮಾರ್ ವಲ್ಲೇಪುರೆ ಇದ್ದರು.