ಕೆಂಪೇಗೌಡ ಜಯಂತಿ
ಸಂಜೆವಾಣಿ ವಾರ್ತೆ
ನಂಜನಗೂಡು: ಜೂ.28:- ಬೆಂಗಳೂರನ್ನು ದೂರದೃಷ್ಠಿಯಿಂದ ಸಮಗ್ರವಾಗಿ ಕಟ್ಟಿದ ನಾಡಫ್ರಭು ಕೆಂಪೇಗೌಡ, ಎಲ್ಲ ಸಮಾಜಗಳ ಜನರ ಕಸುಬು ಹಾಗೂ ವ್ಯಾಪಾರಗಳಿಗೆ ಪೇಟೆಗಳನ್ನು ನಿರ್ಮಿಸಿ ಅನುಕೂಲ ಮಾಡಿಕೊಟ್ಟಿದ್ದರು, ಬೆಂಗಳೂರು ವಿಶ್ವದ ಭೂಪಟದಲ್ಲಿ ಸ್ಥಾನ ಗಣಿಸುವ ಹಾಗೆ ಅಭಿವೃದ್ಧಿಪಡಿಸಿದ ಅವರ ಕೊಡುಗೆ ಸ್ಮರಣೀಯ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.
ನಗರದ ಗಿರಿಜಾ ಕಲ್ಯಾಣ ಮಂಟಪದಲ್ಲಿ ಗುರುವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಯೋಜಿಸಿದ್ದ ನಾಡ ಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬೆಂಗಳೂರನ್ನು ವ್ಯವಸ್ಥಿತವಾಗಿ ಕಟ್ಟಿ ಬೆಳೆಸಿದ ಕೆಂಪೇಗೌಡರಿಂದಾಗಿ ನಮ್ಮ ರಾಜಧಾನಿಕೆರೆ,ಕಟ್ಟೆಗಳಿಂದ ಸಂವೃದ್ಧಿವಾಗಿ ತಂಪು ಹವಾಮಾನವನ್ನು ಹೊಂದಿದೆ,ರಾಜ್ಯದ ಅರ್ಧ ಭಾಗದ ತೆರಿಗೆ ವರಮಾನ ಬೆಂಗಳೂರು ಬಂದರಿಂದಲೆ ದೊರೆಯುತ್ತಿದೆ ಮಾಹಿತಿ ತಂತ್ರಜ್ಞಾನ ಸೇರಿದಂತೆ,ಸರ್ವಾಂಗೀಣವಾಗಿ ಬೆಳೆದ ನಗರ ನಿರ್ಮಾತೃ ಕೆಂಪೇಗೌಡ ಅವಸ್ಮರಣೀಯರು, ತಾಲ್ಲೂಕಿನ ದೇವರಸನಹಳ್ಳಿಯ ಕೆರೆಯನ್ನು ಅಭಿವೃದ್ಧಿಪಡಿಸುವ ಮೂಲಕ ಅವರು ತೋರಿದ ದಾರಿಯಲ್ಲಿ ಸಾಗುವ ಪ್ರಯತ್ನ ನಡೆಸಲಾಗುವುದು ಎಂದು ಹೇಳಿದರು.
ಸಾಹಿತಿ ಕಾಳೇಗೌಡ ನಾಗಾವಾರ ಮಾತನಾಡಿ 500 ವರ್ಷಗಳ ಹಿಂದೆ ತಮ್ಮ ದೂರದೃಷ್ಠಿಯ ಚಿಂತನೆಯಿಂದಾಗಿ ಕೆಂಪೇಗೌಡರಿಗೆ ಬೆಂಗಳೂರನ್ನು ವ್ಯವಸ್ಥಿತವಾಗಿ ಕಟ್ಟಲು ಸಾಧ್ಯವಾಯಿತು,ಅವರು ಏಲ್ಲ ಸಮುದಾಯಗಳ ಕಸುಬುಗಳಿಗೆ ಮಾರುಕಟ್ಟೆ ಒದಗಿಸುವ ಸಲುವಾಗಿ ನಿರ್ಮಿಸಿದ ಪೇಟೆಗಳು ಹಿಂದಿಗೂ ಜೀವಂತವಾಗಿ ಅವರ ಕೊಡುಗೆಯನ್ನು ನೆನಪಿಸುತ್ತಿವೆ,ಬೆಂಗಳೂರು ಭಅರತದ ಪ್ರಮುಖ ನಗರವಾಗಿ ಬೆಳೆಯಲು ಎಚ್.ಡಿ.ದೇವೇಗೌಡ, ಎಸ್.ಎಂ. ಕೃಷ್ಣ ಅವರುಗಳ ಕೊಡುಗೆ ಸಾಕಷ್ಟಿದೆ, ನಾಲ್ಕು ದಿಕ್ಕುಗಳಲ್ಲಿ ಗಡಿಯನ್ನು ಗುರ್ತಿಸಿ ನಿರ್ಮಿಸಿದ ನಗರ ಸುಂದರವಾಗಿ ರೂಪುಗೊಂಡಿದೆ, ಅವರ ಕೊಡುಗೆಯನ್ನು ಸ್ಮರಿಸಲು ರಾಜ್ಯ ಸರ್ಕಾರ ನಗರದ ಅಂತರಾಷ್ಠ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರನ್ನು ಇಟ್ಟು ಗೌರವ ಸಲ್ಲಿಸಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎನ್.ನರಸಿಂಹಸ್ವಾಮಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು, ನಗರಸಭೆ ಆಯುಕ್ತ ನಂಜುಂಡಸ್ವಾಮಿ,ಮುಖಂಡರಾದ ಕಳಲೆ ಕೇಶವಮೂರ್ತಿ,ಎನ್.ಆರ್.ಕೃಷ್ಣಪ್ಪಗೌಡ,ಈ.ಮಹದೇವಕುಮಾರ್,ಕೃಷ್ಣಪ್ಪ,ನಗರಸಭೆ ಸದಸ್ಯರಾದ ಶ್ವೇತಲಕ್ಷ್ಮಿ, ಸೌಭಾಗ್ಯ,ತಾಲ್ಲೂಕು ಕನ್ನಡಸಾಹಿತ್ಯ ಪರಿಷತ್ ಅಧ್ಯಕ್ಷೆ ಲತಾ ಮುದ್ದುಮೋಹನ ಉಪಸ್ಥಿತರಿದ್ದರು.