ಜಯಂತಿಗಳ ಸರ್ಕಾರಿ ರಜೆ ರದ್ದುಗೊಳಿಸಬೇಕು
ಸಂಜೆವಾಣಿ ನ್ಯೂಸ್
ಮೈಸೂರು: ಜೂ.28:- ಎಲ್ಲಾ ಮಹನೀಯರ ಜಯಂತಿಗಳಿಗೆ ನೀಡಿರುವ ಸಾರ್ವತ್ರಿಕ ರಜೆ ರದ್ದುಗೊಳಿಸಬೇಕು ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಹೇಳಿದರು.
ನಗರದ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಮೈಸೂರು-ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘ, ನಾಡಪ್ರಭು ಕೆಂಪೇಗೌಡ ಜಯಂತ್ಯುತ್ಸವ ಸಮಿತಿ ಸಹಯೋಗದಲ್ಲಿ ನಡೆದ ಕೆಂಪೇಗೌಡ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಾಗಲೇ ಸರ್ಕಾರಿ ಕಚೇರಿಗಳಲ್ಲಿ ಕೆಲಸದ ದಿನಗಳು ಕಡಿಮೆಯಾಗಿವೆ. ಎರಡನೇ ಶನಿವಾರ, ನಾಲ್ಕನೇ ಶನಿವಾರ, ಜಯಂತಿ ಆಚರಣೆಯ ನೆಪದಲ್ಲಿ ಸಾಲು ಸಾಲು ರಜೆಗಳು ಬರುತ್ತಿದ್ದು, ಇದರಿಂದ ವಾರದಲ್ಲಿ ಎರಡ್ಮೂರು ದಿನ ಮಾತ್ರ ಸರ್ಕಾರಿ ಅಧಿಕಾರಿಗಳು ಕೆಲಸ ಮಾಡುವಂತಾಗಿದೆ. ಈಗಾದರೆ ಜನರ ಸಮಸ್ಯೆಗಳನ್ನು ಆಲಿಸುವುದು ಯಾವಾಗ? ಬಗೆಹರಿಯುವುದು ಹೇಗೆ? ಮೊದಲು ಸರ್ಕಾರಿ ರಜೆಗಳನ್ನು ರದ್ದುಗೊಳಿಸಬೇಕು ಎಂದರು.
ಜಯಂತಿ ಆಚರಣೆ ದಿನಗಳಂದು ಸರ್ಕಾರಿ ಕಚೇರಿಗಳಲ್ಲಿ ಮಧ್ಯಾಹ್ನದವರೆಗೂ ಜಯಂತಿ ಆಚರಿಸಿ ನಂತರ ಕೆಲಸ ಮಾಡಬೇಕು. ರಾಜಕೀಯ ನಾಯಕರು, ಮುಖಂಡರು ತಮ್ಮ ಪಕ್ಷದ ಕಚೇರಿಗಳಲ್ಲಿ ಜಯಂತಿ ಆಚರಿಸಲಿ ಎಂದು ಕೆಂಪೇಗೌಡ ಜಯಂತಿಗೆ ಸಾರ್ವತ್ರಿಕ ರಜೆ ಘೋಷಿಸುವ ಕುರಿತ ಮನವಿಗೆ ಜಿ.ಟಿ.ದೇವೇಗೌಡ ಪ್ರತಿಕ್ರಿಯಿಸಿದರು.
ಬೆಂಗಳೂರಿನ ನಿರ್ಮಾತೃ ಕೆಂಪೇಗೌಡ ಅವರು 55 ಪೇಟೆಗಳನ್ನು ರಚಿಸಿ ಎಲ್ಲ ಸಮುದಾಯಗಳು ಬದುಕು ಕಟ್ಟಿಕೊಳ್ಳಲು ರೂಪರೇಷೆ ಹಾಕಿದರು. ಕೆಂಪೇಗೌಡ ಅವರ ಕೊಡುಗೆ ಇತಿಹಾಸವನ್ನು ಸಮುದಾಯಕ್ಕೆ ತಿಳಿಸುವ ಕಾರ್ಯಗಳು ಹೆಚ್ಚಾಗಬೇಕು. 16ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದಲ್ಲಿ ಆಡಳಿತ ನಡೆಸಿದ ಕೆಂಪೇಗೌಡ ಸೇರಿದಂತೆ ವಂಶಸ್ಥರ ಕುರಿತು ಸಂಶೋಧನೆಗಳ ಅಗತ್ಯವಿದೆ. ತಜ್ಞರು ಈ ಬಗ್ಗೆ ಸಂಶೋಧನೆ, ಅಧ್ಯಯನ ನಡೆಸಬೇಕು. ಯುವ ಪೀಳಿಗೆಗೆ ಕೆಂಪೇಗೌಡರನ್ನು ಪರಿಚಯಿಸಬೇಕು ಎಂದು ಹೇಳಿದರು.
ಬಾಲಗಂಗಧರನಾಥ ಸ್ವಾಮೀಜಿ ಸ್ಮಾರಕ ನಿರ್ಮಾಣ, ಅಭಿವೃದ್ಧಿ ನಿಗಮಕ್ಕೆ ಅನುದಾನ ಇತರೆ ಸಮುದಾಯದ ಬೇಡಿಕೆಗಳನ್ನು ನಿರ್ಮಲಾನಂದನಾಥ ಸ್ವಾಮೀಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದಾರೆ. ಸ್ಮಾರಕ ನಿರ್ಮಾಣದ ಕೆಲಸ ಆರಂಭವಾಗಿದೆ. ಆದರೆ, ಅಭಿವೃದ್ಧಿ ನಿಗಮಕ್ಕೆ ಅನುದಾನದಲ್ಲಿ ಸಂಪೂರ್ಣ ಬಂದಿಲ್ಲ ಎಂದರು.
ಪ್ರತಿಮೆ ನಿರ್ಮಾಣಕ್ಕೆ ತಡೆ
ಸಿದ್ಧಾರ್ಥ ಬಡಾವಣೆಯ ಸಂಗೀತ ಕಾರ್ನರ್ ಜಂP್ಷÀನ್‍ನಲ್ಲಿ ಕೆಂಪೇಗೌಡ ಪ್ರತಿಮೆ ನಿರ್ಮಾಣಕ್ಕೆ ಪೆÇಲೀಸರು ತಡೆಯೊಡ್ಡಿದರು.
ನಾಡಪ್ರಭು ಕೆಂಪೇಗೌಡರ 515ನೇ ಜಯಂತಿ ಹಿನ್ನೆಲೆ ಸಿದ್ಧಾರ್ಥ ಬಡಾವಣೆಯ ಸಂಗೀತ ಕಾರ್ನರ್ ಜಂP್ಷÀನ್‍ನಲ್ಲಿ ಗುರುವಾರ ಬೆಳಗ್ಗೆ ಶಾಸಕ ಕೆ.ಹರೀಶ್‍ಗೌಡ, ಜಿ.ಪಂ ಮಾಜಿ ಸದಸ್ಯ ಮಾದೇಗೌಡ ಸೇರಿದಂತೆ ಸಮುದಾಯದ ಅನೇಕರು ಕೆಂಪೇಗೌಡರ ನೂತನ ಪ್ರತಿಮೆ ಸ್ಥಾಪನೆಗೆ ಮುಂದಾದರು. ಸ್ಥಳದಲ್ಲಿ ಮುಂಚೆಯೇ ಹಾಜರಿದ್ದ ಪೆÇಲೀಸರು ಅನುಮತಿ ಇಲ್ಲದೇ ಯಾವುದೇ ಪ್ರತಿಮೆ ಸ್ಥಾಪನೆಗೆ ಅವಕಾಶ ನೀಡಲಾಗುವುದಿಲ್ಲ ಎಂದರು.
ಇದಕ್ಕೆ ಶಾಸಕರು ಸೇರಿದಂತೆ ಎಲ್ಲರೂ ವಿರೋಧÀ ವ್ಯಕ್ತಪಡಿಸಿದರು. ಬಳಿಕ ನಗರ ಪೆÇಲೀಸ್ ಆಯುಕ್ತ ರಮೇಶ್ ಬಾನೋತ್ ಸ್ಥಳದಲ್ಲಿ ನಿರ್ಮಾಣವಾಗಿದ್ದ ಗೊಂದಲ ತಿಳಿಗೊಳಿಸಿ, ಪ್ರತಿಮೆ ಸ್ಥಾಪನೆಗೆ ಪಾಲಿಕೆಯಿಂದ ಅನುಮತಿ ತಂದರೆ ಅವಕಾಶ ಕಲ್ಪಿಸಲಾಗುವುದು. ಅನಗತ್ಯವಾಗಿ ಯಾವುದೇ ಗೊಂದಲ ಉಂಟು ಮಾಡದಿರಿ ಎಂದು ಹೇಳಿದರು. ಬಳಿಕ ಸಮುದಾಯದ ಮುಖಂಡರು ಪ್ರತಿಮೆ ಸ್ಥಾಪನೆಯ ಉz್ದÉೀಶಿತ ಸ್ಥಳದಲ್ಲಿ ಕೆಂಪೇಗೌಡ ಫ್ಲೆಕ್ಸ್ ಹಾಕಿ ಪೂಜೆ ಸಲ್ಲಿಸಿ, ಸ್ಥಳದಿಂದ ತೆರಳಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಸಿ.ಎನ್.ಮಂಜೇಗೌಡ, ವಿವೇಕಾನಂದ, ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಆದಿಚುಂದನಗಿರಿ ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ ಸೇರಿದಂತೆ ಹಲವರು ಭಾಗವಹಿಸಿದ್ದರು.