ಶೋಷಿತ ಸಮುದಾಯಕ್ಕೆ ಡಾ. ಅಂಬೇಡ್ಕರ್ ಹೋರಾಟದ ಸ್ಪೂರ್ತಿಯಾಗಬೇಕು: ನಟ ಚೇತನ್
ಜೇವರ್ಗಿ:ಸೆ.26: ಶೋಷಿತ ದಲಿತ ಹಿಂದುಳಿದ ಅಲ್ಪಸಂಖ್ಯಾತರ ಸಮುದಾಯಕ್ಕೆ ಭಾರತ ರತ್ನ ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೋರಾಟದ ಸ್ಪೂರ್ತಿ ಆಗಬೇಕು ಎಂದು ನಟ ಚೇತನ ಹೇಳಿದರು ಪಟ್ಟಣದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ತಾಲೂಕಾ ಭೀಮ ಆರ್ಮಿ ಸಮಿತಿ ವತಿಯಿಂದ ರಾಜ್ಯ ಮಟ್ಟದ ಪೂನಾ ಒಪ್ಪಂದದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರಗತಿಪರ ಚಿಂತಕರು,ಸಮಾಜ ಸೇವಕರು ಹಾಗು ಹೋರಾಟಗಾರರಾದ ಶ್ರೀ ಭಗವಂತರಾಯ ಬೆಣ್ಣೂರ ರವರಿಗೆ ರಾಜ್ಯ ಮಟ್ಟದ ಬುದ್ಧ ಬಸವ ಅಂಬೇಡ್ಕರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಭೀಮ ಆರ್ಮಿ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷರಾದ ವಿನಯ ರತನಸಿಂಗ್ ಜೀ ರಾಜ್ಯಾಧ್ಯಕ್ಷರಾದ ರಾಜಗೋಪಾಲ್ ರಾಷ್ಟ್ರೀಯ ಸಂಘಟನೆ ಸಚಿವ ಬೈ ಯಶಪಾಲ್ ಬೋರೆ ಜಿಲ್ಲಾಧ್ಯಕ್ಷರಾದ ಸೂರ್ಯಕಾಂತ ಜಿಡಗಾ ಮುಖಂಡರುಗಳಾದ ಗಿರೀಶ್ ಪಾಟೀಲ್.ರದ್ದೇವಾಡಗಿ ಮಲ್ಲಿಕಾರ್ಜುನ ಬೂದಿಹಾಳ ಬಾಬ ಪರೀದ ಮಳ್ಳಿಕರ ಮಹಾಂತಯ್ಯ ಹಿರೇಮಠ ದೇವಿಂದ್ರ ಮಯೂರ ಹಾಗು ಭೀಮ್ ಆರ್ಮಿ ಸಮಿತಿ ತಾಲೂಕಾಧ್ಯಕ್ಷರಾದ ಯಮನೇಶ ಅಂಕಲಗಿ ಜಿಲ್ಲಾ ಸಂಘಟನ ಕಾರ್ಯದರ್ಶಿ ಅಬ್ದುಲ್ ಗನಿ ಆಜಾದ್ ರಾವಣ್ ಉಪಾಧ್ಯಕ್ಷ ವಿಶ್ವರಾಧ್ಯ ಗೋಪಾಲ್ಕರ್. ಸಂಘಟನೆ ಕಾರ್ಯದರ್ಶಿಯಾದ ಸುನಿಲ್ ಬಡಿಗೇರ್. ಸೇರಿದಂತೆ ಅನೇಕರಿದ್ದರು