ಡಾ. ಸಾರಿಕಾ ಎಸ್ ಗಂಗಾ ಕರ್ನಾಟಕ ಮಹಿಳಾ ರತ್ನ ಪ್ರಶಸ್ತಿಗೆ ಆಯ್ಕೆ
ಹುಮನಾಬಾದ್ :ಸೆ.26:ಜಿಲ್ಲೆಯ ಸಾಹಿತಿ, ಉತ್ತಮ ಸಂಘಟಕಿ ಹಾಗೂ ಪ್ರೌಢಶಾಲಾ ಶಿಕ್ಷಕಿಯಾದ ಡಾ. ಸಾರಿಕಾ ಎಸ್ ಗಂಗಾ ಅವರಿಗೆ ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆ
ಸೂರ್ಯ ಫೌಂಡೇಶನ್(ರಿ ) ಬೆಂಗಳೂರು ಹಾಗೂ ಸ್ಮಾರ್ಕ ಅಕಾಡೆಮಿ(ರಿ ) ಬೆಂಗಳೂರು ಕೊಡ ಮಾಡುವ 2024ನೇ ಸಾಲಿನ ಕರ್ನಾಟಕ ಮಹಿಳಾ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಸೋಮೇಶ್ ನವೋದಯ ಅವರು ತಿಳಿಸಿದ್ದಾರೆ. ಡಾಕ್ಟರ್ ಸಾರಿಕಾ ಗಂಗಾ ಅವರು ಮಹಿಳಾ ರತ್ನ ಪ್ರಶಸ್ತಿಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರಸಂಫದ ಸಂಸ್ಥಾಪಕ ರಾಷ್ಟ್ರ ಹಾಗೂ ರಾಜ್ಯಾಧ್ಯಕ್ಷರಾದ ಡಾ. ಲತಾ ಎಸ್ ಮುಳ್ಳೂರ್, ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಡಾ. ಭುವನೇಶ್ವರಿ, ಕೋಶಾಧ್ಯಕ್ಷರಾದ ಶರಣಮ್ಮ ನಾರಾಯಣಪೇಟ್ಕರ್, ಉಪಾಧ್ಯಕ್ಷರಾದ ಸುನಿತಾ ಪಾಟೀಲ್, 8 ತಾಲೂಕಿನ ಅಧ್ಯಕ್ಷರು, ಸಂಘಟನೆಯ ವಿವಿಧ ಹಂತದ ಪದಾಧಿಕಾರಿಗಳು, ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷರಾದ ಶರದಕುಮಾರ್ ನಾರಾಯಣಪೇಟ್ಕರ್ ಹಾಗೂ ವಿವಿಧ ಪದಾಧಿಕಾರಿಗಳು, ಕನ್ನಡ ಸಾಹಿತ್ಯ ಪರಿಷತ್ತಿನ ವಿವಿಧ ಪದಾಧಿಕಾರಿಗಳು ಹೀಗೆ ಹತ್ತು ಹಲವಾರು ಸಂಘಟನೆಯ ಪದಾಧಿಕಾರಿಗಳು ಜಿಲ್ಲೆಯ ಶಿಕ್ಷಕ – ಶಿಕ್ಷಕಿಯರು ಡಾ. ಸಾರಿಕಾ ಗಂಗಾ ಅವರ ಆಯ್ಕೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.