ಸೆ.೨೮-೨೯ ರಂದು ಮಾಸ್ಟರ್ಸ್ ವೇಟ್ ಲಿಫ್ಟಿಂಗ್-ಪವರ್ ಲಿಫ್ಟಿಂಗ್ ಪಂದ್ಯಾವಳಿ
ಸಂಜೆವಾಣಿ ವಾರ್ತೆ
ದಾವಣಗೆರೆ. ಸೆ.೨೬; ಹಿರಿಯ‌ ವೇಟ್ ಲಿಫ್ಟರ್ಸ್ ಗಳಿಗಾಗಿ ದಾವಣಗೆರೆ ನಗರದ ಕೆಇಬಿ ಸಮುದಾಯ ಭವನದಲ್ಲಿ ಸೆ.೨೮ ಹಾಗೂ ೨೯ ರಂದು ಬೆಳಗ್ಗೆ ೧೦ ಕ್ಕೆ೩ ನೇ ರಾಷ್ಟ್ರೀಯ ಮಾಸ್ಟರ್ಸ್ ವೇಟ್ ಲಿಫ್ಟಿಂಗ್ ಮತ್ತು ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್- ೨೦೨೪  ಆಯೋಜಿಸಲಾಗಿದೆ ಎಂದು ಅಂತರಾಷ್ಟ್ರೀಯ ಕ್ರೀಡಾಪಟು ಪಿ.ಸಾಯಿನಾಥ್ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸೆ.೨೮ ರಂದು ಬೆಳಗ್ಗೆ ೧೦ ಕ್ಕೆ ಉದ್ಘಾಟನೆ ನಡೆಯಲಿದೆ. ಈ ವೇಳೆ ಪ್ಯಾನ್ ಇಂಡಿಯಾ ಪ್ರಧಾನ ಕಾರ್ಯದರ್ಶಿ ನಟರಾಜ್ ,ಮಾಜಿ ಮೇಯರ್ ಬಿ.ಜಿ ಅಜಯ್ ಕುಮಾರ್,ಬಿಜೆಪಿ ಯುವ ಮುಖಂಡ ಶ್ಯಾಮ್ ಮತ್ತಿತರರು ಆಗಮಿಸಲಿದ್ದಾರೆ ಎಂದರು.ದೇಶಾದ್ಯಂತ ಸುಮಾರು ೧೬೦ ಕ್ರೀಡಾಪಟುಗಳು ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲಿದ್ದಾರೆಂದರು.ವಿಜೇತರಾದ ಕ್ರೀಡಾಪಟುಗಳಿಗೆ ಪದಕಗಳು ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು.ಇದೇ ವೇಳೆ ಭಾರತದ ಬಲಿಷ್ಠ ಪುರುಷ,ಬಲಿಷ್ಠ ಮಹಿಳೆ,ಶ್ರೇಷ್ಠ ಲಿಫ್ಟರ್ ಪುರುಷ,ಮಹಿಳೆ ಹೀಗೆ ವಿಶೇಷ ಪ್ರಶಸ್ತಿ ನೀಡಲಾಗುವುದು ಎಂದರು.ಪ್ರವೇಶ ಶುಲ್ಕ ೧ ಸಾವಿರ ನಿಗಧಿ ಮಾಡಲಾಗಿದೆ.ಸೆ.೨೯ ರಂದು ವೇಟ್ ಲಿಫ್ಟಿಂಗ್ ಹಾಗೂ ಸೆ.೨೯ ರಂದು ಪವರ್ ಲಿಫ್ಟಿಂಗ್ ಪಂದ್ಯಾವಳಿ ನಡೆಯಲಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಕ್ರೀಡಾಪಟುಗಳಾದ ಬಸವರಾಜ್, ಷಣ್ಮುಖಾಚಾರ್, ಜಿ. ಫಕೃದ್ದೀನ್, ಜಕಣಾಚಾರ್, ರಾಜು, ಮಂಜುನಾಥ್, ವಿರೂಪಾಕ್ಷಪ್ಪ, ಲಕ್ಷ್ಮೀಕಾಂತ್ ಉಪಸ್ಥಿತರಿದ್ದರು.
One attachment • Scanned by Gmail