ಧರ್ಮಸ್ಥಳ ಟ್ರಸ್ಟ್ ನ ಯೋಜನೆಗಳು ಸದಾ ಸಮಾಜಮುಖಿ:ಆನಂದ್ ಟೈಗರ್
ಚಿಂಚೋಳಿ:ಸೆ.26: ಧರ್ಮಸ್ಥಳ ಟ್ರಸ್ಟ್ ನ ಯೋಜನೆಗಳು ಸದಾ ಸಮಾಜಮುಖಿಯಾಗಿವೆ, ವಿನೂತನ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವಂತಹ ಕಾರ್ಯ ಮಾಡುತ್ತಿದೆ ಎಂದು ಪುರಸಭೆಯ ಅಧ್ಯಕ್ಷ ಆನಂದ್ ಟೈಗರ್ ಅಭಿಪ್ರಾಯದ ನುಡಿಗಳನ್ನು ವ್ಯಕ್ತಪಡಿಸಿದರು.
ತಾಲ್ಲೂಕಿನ ಚಂದಾಪುರ ಪಟ್ಟಣದಲ್ಲಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಚಿಂಚೋಳಿ ಹಾಗೂ ಜನಜಾಗೃತಿ ವೇದಿಕೆ ವತಿಯಿಂದ ಆಯೋಜಿಸಿದ್ದ ಸಾಮಾಜಿಕ ಅರಣ್ಯಕರಣ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ,ಗಿಡಗಳನ್ನು ನಾಟಿ ಮಾಡಿ ಮಾತನಾಡಿದ ಅವರು, ಇಂದು ಕೇವಲ ಹಣಕಾಸು ವ್ಯವಹಾರವಷ್ಟೇ ಅಲ್ಲದೆ ಜನರಲ್ಲಿ ಅರಿವು ಮೂಡಿಸುವಂತಹ ಕೆಲಸಗಳು ಕೂಡ ಟ್ರಸ್ಟ್ ನಿಂದ ನಡೆಯುತ್ತಿದ್ದು ಅವೆಲ್ಲವೂ ಶ್ಲಾಘನೀಯ ಕಾರ್ಯಕ್ರಮಗಳು ಎಂದರು. ಬಳಿಕ ಯೋಜನಾಧಿಕಾರಿ ಗೋಪಾಲ್ ಮಾತನಾಡಿ ಸಾಮಾಜಿಕ ಅರಣ್ಯಕರಣ ಕಾರ್ಯಕ್ರಮ ಮತ್ತು ಅರಣ್ಯದ ಮಹತ್ವವನ್ನು ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು.ಇದೆ ಸಂದರ್ಭದಲ್ಲಿ ರೈತರಿಗೆ ಹಣ್ಣಿನ ಗಿಡಗಳನ್ನು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ, ಜನಜಾಗೃತಿ ವೇದಿಕೆ ಜಿಲ್ಲಾ ಉಪಾಧ್ಯಕ್ಷೆ ನರಸಮ್ಮ ಆವುಂಟಿ, ಸದಸ್ಯ ಸುರೇಶ ದೇಶಪಾಂಡೆ,ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಸಂತೋಷ ಪಾಟೀಲ್ ಸೇರಿದಂತೆ ವಲಯದ ಮೇಲ್ವಿಚಾರಕರು,ಸೇವಾ ಪ್ರತಿನಿಧಿಗಳು,ಶೌರ್ಯ ತಂಡದ ಸದಸ್ಯರುಗಳು,ರೈತರು ಮತ್ತು ಸ್ವ ಸಹಾಯ ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.