ಸಂಸ್ಕಾರ, ಸಂಸ್ಕೃತಿ ಮಕ್ಕಳಿಗೆ ಕಲಿಸಿದಾಗ ಮಾತ್ರ ಉತ್ತಮ ವ್ಯಕ್ತಿಗಳಾಗುತ್ತಾರೆ: ಉಜ್ಜಯಿನಿ ಶ್ರೀ
ಸಂಜೆವಾಣಿವಾರ್ತೆ
ಹರಪನಹಳ್ಳಿ.ಸೆ.೨೬; ಸಂಸ್ಕಾರ, ಸಮಸ್ಕ್ರೃತಿ, ಧರ್ಮ, ಗುರುಗಳು, ಆಚಾರ್ಯರು ಕೊಟ್ಟು ಹೋದ ಗುಣಗಳನ್ನು ಎಲ್ಲರೂ ಬಳಸಿ, ಬೆಳೆಸಬೇಕು ಎಂದು ಶ್ರೀ ಉಜ್ಜಯಿನಿ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದಕರು ಹೇಳಿದರು.ತಾಲೂಕಿನ ಚಿರಸ್ಥಹಳ್ಳಿ ಗ್ರಾಮದಲ್ಲಿ ಮಲ್ಲಿಕಾರ್ಜುನ ಸ್ವಾಮಿ ಕಲ್ಮಠರವರ ನಿವಾಸದ ಬಳಿ ನಾಮಕರಣ, ಕನಕಾಭಿಷೇಕ ಹಾಗೂ ಷಷ್ಠಬ್ದಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಶಾಸ್ತ್ರದಲ್ಲಿ ವ್ಯಕ್ತಿಯ ಹುಟ್ಟು ಅರವತ್ತು ಸಂವತ್ಸರ ಪಡೆದುಕೊಳ್ಳುತ್ತದೆ ನಂತರ ಮರು ಹುಟ್ಟು ಆಗುತ್ತದೆ, ೭೦ ಕ್ಕೂ ವಿಶಿಷ್ಟ ಶಕ್ತಿ ಇದೆ. ಭೀಮವೃತ ಶಾಂತಿ, ಎಂಬತ್ತರ ದಶಕದಲ್ಲಿ ಸಹಸ್ರ ಚಂದ್ರ ದರ್ಶನ ಆಗಿರುತ್ತದೆ. ಯಾವ ವ್ಯಕ್ಯಿ ಕ್ರಿಯಾಶೀಲನಾಗಿರುತ್ತಾರೆ, ಉತ್ತಮ ಆಲೋಚನೆಗಳ ಸದ್ವಿಚಾರ ಹೊಂದಿ ವೃತ್ತಿ, ಪ್ರವೃತ್ತಿ ಮೈಗೊಂಡಿಸಿರುವ ವ್ಯಕ್ತಿ ಆರೋಗ್ಯವಂತರಾಗಿ, ವಜ್ರಕಾಯವಾಗಿ ಇರುತ್ತಾರೆ ಅವರು ಕಲ್ಮಠದ ಪರಿವಾರದವರು ಮೈಗೂಡಿಸಿಕೊಂಡು ಬಂದಿದ್ದಾರೆ ಎಂದ ಅವರು ಹಿರಿಯರು ಶಾಸ್ತ್ರಗಳನ್ನು ಯಾವುದು ಹಾಗೆ ಮಾಡಿರುವುದಿಲ್ಲ ನಕ್ಷತ್ರ ಸಮಯದಲ್ಲಿ ನಾಮಕರಣ ಮಾಡಬೇಕು ಎಂದರು.ಸಂಸ್ಕ್ರಾರ ಬಹಳ ದೊಡ್ಡದಾಗಿದೆ, ಇದರ ಬೀಜ ಗಟ್ಟಿಯಾಗಿರಬೇಕು, ಉತ್ತಮ ಸಂಸ್ಕಾರವನ್ನು ಮಕ್ಕಳಿಗೆ ಕಲಿಸಬೇಕಿದೆ ಎಂದು‌ ಕಿವಿ ಮಾತು ಹೇಳಿದರು.ಇದೊಂದು ವಿಶಿಷ್ಟ ಕಾರ್ಯಕ್ರಮವಾಗಿದೆ, ಕನಕಾಭಿಷೇಕದಿಂದ ಮೊದಲುಗೊಂಡು ಷಷ್ಠಬ್ದಿ ಜೊತೆಗೆ ಮೊಮ್ಮಗನ ನಾಮಕರಣ ಸ್ಮರಣೀಯ ಕಾರ್ಯಕ್ರಮ ಇದಾಗಿದೆ ಎಂದು ಹೇಳಿದರು.