ರೇಷ್ಮೆ ರೈತ ಉತ್ಪಾದಕ ಕಂಪನಿಗೆ ಆಯುಕ್ತ ರಾಜೇಶ್‌ಗೌಡ ಭೇಟಿ
ಕೋಲಾರ,ಜೂ.೨೮- ನಗರದ ರೇಷ್ಮೆ ರೈತ ಉತ್ಪಾದಕ ಕಂಪನಿಗೆ ರೇಷ್ಮೆ ಕೃಷಿ ಆಯುಕ್ತ ರಾಜೇಶ್‌ಗೌಡ ಭೇಟಿ ನೀಡಿ ಕಂಪನಿಯ ಕಾರ್ಯ ಚಟುವಟಿಕೆಗಳು ಹಾಗೂ ವ್ಯಾಪಾರ ವಹಿವಾಟು, ದಾಖಲಾತಿ ನಿರ್ವಹಣೆ ಮತ್ತು ಕಂಪನಿಯು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುವುದರ ಬಗ್ಗೆ ಪ್ರಶಂಶಿಸಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ನಿರ್ದೇಶಕ ತಿಮ್ಮಯ್ಯ, ರೇಷ್ಮೆ ಉಪ ನಿರ್ದೇಶಕರಾದ ಎಸ್.ಎನ್ ಶ್ರೀನಿವಾಸ್, ಮಾರುಕಟ್ಟೆ ಉಪ ನಿರ್ದೇಶಕ ನಾಗರಾಜ್, ಸಹಾಯಕ ನಿರ್ದೇಶಕ ಬೈರೇಗೌಡ, ಕಂಪನಿಯ ಅಧ್ಯಕ್ಷ ಬಳಗೆರೆ ಶಂಕರಗೌಡ, ಕಾಡು ದ್ಯಾವಂಡಹಳ್ಳಿ ಎಂ.ರಮೇಶ್, ಉಪಾಧ್ಯಕ್ಷ ರಮೇಶ್, ನಿರ್ದೇಶಕ ಸುರೇಶ್, ಜಿಲ್ಲಾಧ್ಯಕ್ಷರಾದ ನಾಗನಾಳ ಶ್ರೀನಿವಾಸ್ ಮತ್ತು ಸಿಬ್ಬಂದಿ ವರ್ಗ ಹಾಜರಿದ್ದರು.