ನಾಡಪ್ರಭು ಕೆಂಪೇಗೌಡರ ಆದರ್ಶಗಳು ನಮ್ಮೆಲ್ಲರಿಗೂ ಮಾದರಿ: ಶಾಸಕ ಮಂಜುನಾಥ್
ಸಂಜೆವಾಣಿ ವಾರ್ತೆ
ಹನೂರು ಜೂ 28 :- ಪಟ್ಟಣದ ಅತಿಥಿ ಗೃಹದ ಅವರಣದಲ್ಲಿ ತಾಲೂಕು ಆಡಳಿತ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶ್ರೀ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ ಕಾರ್ಯಕ್ರಮ ಶಾಸಕ ಎಂಆರ್ ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ಸರಳವಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಕೆಂಪೇಗೌಢಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ಸಮರ್ಪಿಸಿದ ಶಾಸಕ ಮಂಜುನಾಥ್ ಅವರು ನಂತರ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಂತರ ಶಾಸಕ ಮಂಜುನಾಥ್ ಅವರು ಮಾತನಾಡಿ ನಾಡಪ್ರಭು ಕೆಂಪೇಗೌಡರು ಬೆಂಗಳೂರು ನಗರವನ್ನು ಕಟ್ಟಿ ಬೆಳೆಸಿದರು. ಅವರ ಹೋರಾಟ ಆದರ್ಶಗಳು ನಮ್ಮೆಲ್ಲರಿಗೂ ಮಾದರಿ. ಅದರಂತೆ ನಾವುಗಳು ಅವರು ಆದರ್ಶಗಳಂತೆ ನಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಶ್ರಮೀಸಿ ಮಾದರಿಯಾಗಬೇಕು.
ಕೆಂಪೇಗೌಡರು ನಿರ್ಮಾಣ ಮಾಡಿದಂತಹ ಬೆಂಗಳೂರು ಒಂದು ಆದರ್ಶ ನಗರವಾಗಿ ಬೆಳೆದು ಇಡೀ ರಾಜ್ಯಕ್ಕೆ ಮಾದರಿಯಾಗಿರುವ ಹಾಗೆ ನಾನು ಕೂಡ ಎಲ್ಲರ ಸಹಕಾರದಿಂದ ನಮ್ಮ ಹನೂರು ತಾಲೂಕಿನ ಮೂಲಭೂತ ಸೌಲಭ್ಯಗಳು ರಸ್ತೆ ಇರಬಹುದು, ನೀರಾವರಿ ಇರಬಹುದು ಅಥವಾ ಉದ್ಯೋಗದ ವಿಚಾರ ಇರಬಹುದು ಎಲ್ಲದಕ್ಕೂ ಕೂಡ ಕೆಂಪೇಗೌಡರ ಹಾದಿಯಲ್ಲಿ ಪ್ರಯತ್ನ ಮಾಡುತ್ತೇನೆ ಎಂದು ತಮ್ಮ ಆಶಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಗುರುಪ್ರಸಾದ್, ಧನಂಜಯ್, ಡಾ.ಪ್ರಕಾಶ್, ತಾಲೂಕು ಪಂ. ಇಒ ರವೀಂದ್ರ, ಬಿಇಒ ಮಹೇಶ್, ಪಟ್ಟಣ ಪಂಚಾಯತ್ ಸದಸ್ಯ ಆನಂದ್, ಮಮಸ್ತಾಜ್ ಬೆಳಗಾಂ, ಮುಖಂಡರು ರಾಜುಗೌಡ, ಮಂಜೆಶ್, ಲಿಂಗೆಗೌಡ, ಚಂಗಡಿ ಕರಿಯಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.