ಅಕ್ರಮವಾಗಿ ಅರಣ್ಯ ಪ್ರವೇಶ ಮಾಡಿದ್ದ ಮೂವರು ಬೇಟೆಗಾರು: ಇಬ್ಬರ ಬಂಧನ
ಸಂಜೆವಾಣಿ ವಾರ್ತೆ
ಹನೂರು.ಜೂ.28 :- ಅಕ್ರಮವಾಗಿ ಅರಣ್ಯ ಪ್ರವೇಶ ಮಾಡಿ ವನ್ಯ ಪ್ರಾಣಿಗಳನ್ನು ಬೇಟೆಯಾಡಲು ತೆರಳಿದ್ದ ಮೂವರು ವ್ಯಕ್ತಿಗಳಲ್ಲಿ ಒಬ್ಬರಿಗೆ ಹಾವು ಕಚ್ಚಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು ಇನ್ನಿಬ್ಬರನ್ನು ಬಂಧನಕ್ಕೆ ಒಳಪಡಿಸಿರುವ ಘಟನೆ ನಡೆದಿದೆ.
ಕಾವೇರಿ ವನ್ಯಜೀವಿ ವಿಭಾಗ ವ್ಯಾಪ್ತಿಯ ತೋಮಿಯರ್ ಪಾಳ್ಯ ಸಮೀಪದ ಹಳೆಯೂರು ನತ್ತ ಅರಣ್ಯ ಪ್ರದೇಶದಲ್ಲಿ ಬುಧವಾರ ತಡರಾತ್ರಿ ಸಮಯದಲ್ಲಿ ನಡೆದಿದೆ. ಬೇಟೆಗಾರರಿಂದ ಎರಡು ನಾಡ ಬಂದೂಕು ವಶಪಡಿಸಿಕೊಳ್ಳಲಾಗಿದೆ.
ಹನೂರು ತಾಲೂಕಿನ ಮರಿಯಮಂಗಲ ಗ್ರಾಮದ ಸೆಲ್ವನಾಥನ್ ಎಂಬುವನಿಗೆ ಹಾವು ಕಚ್ಚಿ ಕಾಮಗೆರೆ ಹೋಲಿ ಕ್ರಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿ. ಅದೇ ಗ್ರಾಮದ ಮೇರಿಲೂಯಿಸ್, ವಿನ್ಸೇಂಟ್ ಇಬ್ಬರನ್ನು ಬಂಧಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಘಟನೆ ವಿವರ: ಮರಿಯಮಂಗಲ ಗ್ರಾಮ ಸೆಲ್ವನಾಥನ್, ಮೇರಿ ಲೂಯಿಸ್, ವಿನ್ಸೇಂಟ್
ಮೂವರು ವ್ಯಕ್ತಿಗಳು ವನ್ಯಜೀವಿಯನ್ನು ಬೇಟೆಯಾಡಲು ಬುಧವಾರ ತಡರಾತ್ರಿ ಅರಣ್ಯ ಪ್ರದೇಶಕ್ಕೆ ತೆರಳಿದ್ದಾರೆ. ಈ ವೇಳೆ ಸೆಲ್ವನಾಥನ್ ಎಂಬುವನಿಗೆ ಹಾವು ಕಚ್ಚಿದೆ. ನಂತರ ಮೂವರು ಹಳೆಯೂರು ನತ್ತ ಕಾಲುದಾರಿ ಅರಣ್ಯ ಪ್ರದೇಶದಲ್ಲಿ ಬರುವಾಗ ಬ್ಯಾಟರಿ ಬೆಳಕು ಬಂದಿದೆ
ಗಸ್ತಿನಲ್ಲಿದ್ದ ಅರಣ್ಯ ಇಲಾಖೆ ಸಿಬ್ಬಂದಿಗಳು ಬೆಳಕು ಬರುವುದನ್ನು ಕಂಡು ಆರ್.ಎಫ್.ಒ ನಿರಂಜನ್ ಅವರಿಗೆ ತಿಳಿಸಿದ್ದಾರೆ. ಕಾರ್ಯಪ್ರವೃತ್ತರಾದ ಅಧಿಕಾರಿಗಳು ಸಿಬ್ಬಂದಿಗಳೊಡನೆ ದಾಳಿ ನಡೆಸಿ ಮೂವರನ್ನು ಹಿಡಿದು ವಿಚಾರಣೆ ನಡೆಸಿದಾಗ ಬೇಟೆಯಾಡಲು ಬಂದಿರುವುದು ತಿಳಿದುಬಂದಿದೆ. ಹಾಗೂ ಬೇಟೆಯಾಡಲು ಬಳಸಲಾಗಿದ್ದ ಎರಡು ನಾಡ ಬಂದೂಕು ಇತರ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.
ಸೆಲ್ವನಾಥನ್ ಎಂಬುವನಿಗೆ ಹಾವು ಕಚ್ಚಿರುವುದಾಗಿ ತಿಳಿಸಿದ್ದಾರೆ. ನಂತರ ಮೇರಿಲೂಯಿಸ್ , ವಿನ್ಸೇಂಟ್ ಇಬ್ಬರನ್ನು ವಶಕ್ಕೆ ತೆಗೆದುಕೊಂಡು. ಹಾವು ಕಚ್ಚಿದ್ದ ಚೆಲುವನಾಥನ್ ಎಂಬ ವ್ಯಕ್ತಿಯನ್ನು ಅರಣ್ಯಾಧಿಕಾರಿ ಸಿಬ್ಬಂದಿಗಳು ತಮ್ಮ ವಾಹನದಲ್ಲಿ ಕರೆದುಕೊಂಡು ಹೋಗಿ ಕಾಮಗೆರೆ ಹೋಲಿ ಕ್ರಾಸ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕಾರ್ಯಾಚರಣೆಯಲ್ಲಿ ಆರ್.ಎಫ್.ಒ ನಿರಂಜನ್, ಅರಣ್ಯ ಗಸ್ತು ಪಾಲಕರಾದ ವಿವೇಕನಂದಾ ಗೋರಿಸಾಬ್, ಯಲಗೂರಪ್ಪ ಗುಬ್ಬಿ, ರವಿಚಂದ್ರ ಇನ್ನಿತರರು ಸಿಬ್ಬಂದಿಗಳು ಇದ್ದರು. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಅರಣ್ಯ ಇಲಾಖೆ ಅಧಿಕಾರಿಗಳು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮುಂದಿನ ಕ್ರಮ ಕೈಗೊಂಡಿದ್ದಾರೆ.