ಸಂವಿಧಾನ ಬದಲಾವಣೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ
ಕೋಲಾರ,ಜೂ,೨೮-ದೇಶದ ಸಂವಿಧಾನವನ್ನು ಬದಲಾವಣೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ, ಅದು ಮಗ್ಗಿ ಪುಸ್ತಕ ಹಾಗೂ ಪಠ್ಯ ಪುಸ್ತಕನಾ ಬದಲಾವಣೆ ಮಾದಲು ಸಾಧ್ಯನೇ ಇಲ್ಲ ಎಂದು ಮಾಜಿ ಶಾಸಕ ಎನ್.ಮಹೇಶ್ ಹೇಳಿದರು.
ನಗರದ ಸುವರ್ಣ ಕನ್ನಡ ಭವನದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ನಾಗರೀಕರ ವೇದಿಕೆಯಿಂದ ತುರ್ತು ಪರಿಸ್ಥಿತಿ ಸಂವಿಧಾನದ ಆಶಯಕ್ಕೆ ಅಪಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ತಿದ್ದುಪಡಿ ಮಾಡುವ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಸಮಯಕ್ಕೆ, ಸಂಧರ್ಭಕ್ಕೆ ತಕ್ಕಂತೆ ದೇಶದ ಹಿತಸಾಕ್ತಿಗೆ ಸಂವಿಧಾನ ಬದಲಾವಣೆ ಮಾಡಲು ಬಿಡುವುದಿಲ್ಲ ಎಂದು ಅದನ್ನೇ ಅಸ್ತ್ರವಾಗಿಸಿಕೊಂಡಿದೆ, ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾಯಿಸುತ್ತಾರೆ ಎಂಬ ಅಪಪ್ರಚಾರದಲ್ಲಿ ಕಾಂಗ್ರೆಸ್ ಪಕ್ಷ ನಿಂತುಕೊಂಡಿದೆ, ಆದರೆ ಸಂವಿದಾನ ಬದಲಾವಣೆ ಮಾಡುವ ಪ್ರಶ್ನೆಯೇ ಯಾರಿಂದಲೂ ಆಗುವುದಿಲ್ಲ, ಕಾಂಗ್ರೆಸ್ ಪಕ್ಷ ಅದರ ರಕ್ಷಣೆ ಮಾಡಲು ಮುಂದಾಗಿದ್ದೇವೆ ಎಂದು ಹೇಳಿಕೊಂಡು ಲೋಕಸಭಾ ಚುನಾವಣೆ ಪ್ರಚಾರದಲ್ಲಿ ತೊಡಗಿತ್ತು, ಹೀಗಾಗಿ ಬಿಜೆಪಿ ಪಕ್ಷಕ್ಕೆ ಸ್ಪಲ್ಪ ಹಿನ್ನಡೆಯಾಗಿ ಕಾಂಗ್ರೇಸ್ ಪಕ್ಷವು ತನ್ನು ಸಂಖ್ಯಾ ಬಲವನ್ನು ಹೆಚ್ಚಿಸಿ ಕೊಂಡಿದ್ದಾರೆ ಎಂದರು.
ಆಡಳಿತ ಧರ್ಮಗ್ರಂಥ ಸಂವಿಧಾನ ಅಂತ ಮೋದಿ ಹೇಳಿದ್ದಾರೆ, ಇದನ್ನು ಜನ ನಂಬಲಿಲ್ಲ, ಆದರೆ ರಾಹುಲ್ ಗಾಂಧಿ ಹೇಳಿದನ್ನು ಬೇಗ ನಂಬಿದರು, ಡಾ.ಬಿ.ಆರ್.ಅಂಬೇಡ್ಕರ್ ಅವರು ಬಂದು ಬದಲಾಯಿಸಲಾಗಲ್ಲ, ಇದನ್ನು ಜನ ಸರಿಯಾದ ರೀತಿ ಗ್ರಹಿಸಿಕೊಳ್ಳಲಾಗಲಿಲ್ಲ, ಸಂವಿಧಾನ ಬದಲಾವಣೆ ಮಾಡಲು ಅದೇನು ಮಗ್ಗಿ ಪುಸ್ತಕವಲ್ಲ, ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾರೆ, ದೇಶದಲ್ಲಿ ಯುಪಿಎ ಸರ್ಕಾರದ ಅಧಿಕಾರದಲ್ಲಿ ಇದ್ದಾಗ ಸಂವಿಧಾನ ಪುಸ್ತಕವನ್ನು ಮುಟ್ಟದೆ , ಈಗ ಸಂವಿಧಾನದ ಪುಸ್ತಕವನ್ನು ಇಟ್ಟುಕೊಂಡು ಲೋಕಸಭೆ ಬಗ್ಗೆ ವ್ಯಾಕ್ಯನ ಮಾಡಲು ಮುಂದಾಗಿದ್ದಾರೆ, ಅನಂತ ಕುಮಾರ್ ಹೆಗಡೆ ಹೇಳಿಕೆ ವೈಯಕ್ತಿಕ ವಿಚಾರವಾಗಿದೆ. ಇದರಿಂz ಪಕ್ಷಕ್ಕೆ ಮುಜುಗರ ಹೇಳಿಕೆ ಅಗಿದ್ದರಿಂದ ಅವರಿಗೆ ಚುನಾವಣೆಯಲ್ಲಿ ಟಿಕೆಟ್ ಕೊಡಲಿಲ್ಲ, ಕಾಂಗ್ರೇಸ್ ಪಕ್ಷವು ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಉತ್ತರ ಪ್ರದೇಶದ ಎಂಪಿ ಚುನಾವಣೆಯಲ್ಲಿ ಮನೆಗೆ ಕಳುಹಿಸಿರುವುದು ಇತಿಹಾಸದಲ್ಲಿ ಮರೆಯಲಾಗದ ದುರಂತದ ವಿಷಯವಾಗಿದೆ ಎಂದು ವಿಷಾಧಿಸಿದರು,
ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ. ವೇಣುಗೋಪಾಲ್, ಮಾಜಿ ಸಂಸದ ಮುನಿಸ್ವಾಮಿ, ಮಾಜಿ ಶಾಸಕ ವೈ.ಸಂಪಂಗಿ , ಆರ್.ಪಿ.ಐ ರಾಜ್ಯಾಧ್ಯಕ್ಷ ಎಂ.ವೆಂಕಟಸ್ವಾಮಿ, ಎಸ್.ಬಿ.ಮುನಿವೆಂಕಟಪ್ಪ, ಬಂಗಾರಪೇಟೆ ಮಹೇಶ್, ಕೆಂಬೋಡಿ ನಾರಾಯಣಸ್ವಾಮಿ ಮಾಗೇರಿ ನಾರಾಯಣಸ್ವಾಮಿ,ರಾಜೇಶ್ ಸಿಂಗ್, ಎಸ್.ವಿ.ಲೋಕೇಶ್ ಇದ್ದರು.