ಬೆಂಗಳೂರು ವಿಶ್ವವಿಖ್ಯಾತಿಗೆ ಕೆಂಪೇಗೌಡರ ದೂರದೃಷ್ಠಿ ಕಾರಣ
ಕೋಲಾರ,ಜೂ,೨೮- ಕರ್ನಾಟಕದ ರಾಜಧಾನಿ ಬೆಂಗಳೂರು ಭಾರತ ಮಾತ್ರವಲ್ಲ ಏಷ್ಯ ಖಂಡದಲ್ಲಿಯೇ ವಿಖ್ಯಾತಿ ಪಡೆಯಲು ನಾಡಪ್ರಭು ಕೆಂಪೇಗೌಡರ ದೂರ ದೃಷ್ಠಿಯೇ ಕಾರಣ ಎಂದು ಜಿಲ್ಲಾಧಿಕಾರಿ ಅಕ್ರಂಪಾಷ ಅಭಿಪ್ರಾಯ ಪಟ್ಟರು,
ನಗರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ೫೧೫ನೇ ಕೆಂಪೇಗೌಡರ ಜಯಂತಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದ ಅವರು ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು,
ಕೆಂಪೇಗೌಡರು ಅಂದಿನ ಕಾಲದಲ್ಲಿ ವಿಶಾಲವಾದ ದೂರದೃಷ್ಠಿ ಹೊಂದಿದ್ದು ನೀರಾವರಿ ಸೌಲಭ್ಯಗಳಿಗೆ ಕೆರೆ,ಕಟ್ಟೆಗಳು, ಸೂಕ್ತ ರಕ್ಷಣೆಗೆ ಕಾವಲು ಗೋಪುರ, ಸಂರಕ್ಷಣೆಯ ಕೋಟೆ, ಪರಿಸರದ ಅಭಿವೃದ್ದಿಗೆ ರಸ್ತೆ ಬದಿಯಲ್ಲಿ ಗಿಡಮರಗಳ ಬೆಳಸುವಿಕೆ, ವಾಣಿಜ್ಯದ ಅಭಿವೃದ್ದಿಗೆ ವಿವಿಧ ಸಮಯದಾಯದವರ ವೃತ್ತಿಗೆ ಅನುಗುಣವಾಗಿ ಪೇಟೆಗಳನ್ನು ನಿರ್ಮಿಸುವ ಮೂಲಕ ಬೆಂಗಳೂರು ನಗರವನ್ನು ಅರ್ಥಪೂರ್ಣವಾಗಿ ಸರ್ವಾಂಗೀಣ ಅಭಿವೃದ್ದಿ ಪಡೆಸಿದ ಹಿನ್ನಲೆಯಲ್ಲಿ ಬೆಂಗಳೂರು ನಗರವು ವಿಶ್ವದಲ್ಲಿಯೇ ಮಾದರಿ ನಗರವಾಗಿ ಖ್ಯಾತಿ ಪಡೆದು ರಾಜ್ಯದ ಇತಿಹಾಸದಲ್ಲಿ ಅವಿಸ್ಮರಣೆಯ ನಗರವಾಗಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಮಾತನಾಡಿ ರಾಜ್ಯದಲ್ಲಿ ನಾಡಪ್ರಭು ಬೆಂಗಳೂರು ನಗರವನ್ನು ಆದರ್ಶವಾಗಿ ನಿರ್ಮಿಸುವ ಮೂಲಕ ಐತಿಹಾಸಿಕ ದಾಖಲೆಯ ಇತಿಹಾಸವನ್ನು ನಿರ್ಮಾಣ ಮಾಡಿದ್ದಾರೆ. ೫ ಶತಮಾನದ ಹಿಂದೆಯೇ ಅವರ ದೂರದ ಆಲೋಚನೆಗಳು ಅಧ್ಬುತವಾಗಿದ್ದು ಅವರ ಶ್ರಮವನ್ನು ಪ್ರತಿಯೊಬ್ಬರು ಅಭಿನಂದಿಸುವಂತ ಸಾಧನೆಯಾಗಿದೆ ಎಂದು ಶ್ಲಾಘಿಸಿದರು,
ಉಪನ್ಯಾಸಕ ನಾಗನಂದ ಕೆಂಪರಾಜ್ ಉಪನ್ಯಾಸದಲ್ಲಿ ಕೆಂಪೇಗೌಡರ ಜೀವನ ಚರಿತ್ರೆಯನ್ನು ಅಂಕಿ ಅಂಶಗಳ ಸಮೇತ ವಿವರಿಸಿ ಅವರ ಆಡಳಿತದಲ್ಲಿನ ವೈಜ್ಞಾನಿಕ ಸುಧಾರಣಾ ಕ್ರಮಗಳನ್ನು ವಿವರಿಸಿದರು,
ಕೆಂಪೇಗೌಡರು ಒಂದು ಸಮುದಾಯಕ್ಕೆ ಮೀಸಲಾಗಿರಲಿಲ್ಲ ರಾಜ್ಯದ ಸರ್ವಾಂಗೀನ ಅಭಿವೃದ್ದಿಗೆ, ಸಮಾನತೆಗೆ ಬದ್ದರಾಗಿದ್ದರು, ಸಮಾಜದ ಅಭಿವೃದ್ದಿಗೆ ಶ್ರಮಿಸಿದಂತ ಧೀಮಾಂತರು ಇವರ ಸಾಧನೆಯು ಅವಿಸ್ಮರಣೆಯ ಎಂಬುವುದಕ್ಕೆ ರಾಜಧಾನಿ ಬೆಂಗಳೂರು ಅಭಿವೃದ್ದಿ ನಿದರ್ಶನವಾಗಿದೆ. ಇತಿಹಾಸವನ್ನು ಅರಿಯಲು ದಾರ್ಶನಿಕರ ಜಯಂತಿಗಳು ಅತ್ಯಗತ್ಯವಾಗಿದೆ ಎಂದರು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕಾರಿಸಲಾಯಿತು,
ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶಿವಕುಮಾರ್, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಶಂಕರ್, ಜಿಲ್ಲಾ ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಬಿಸಪ್ಪ ಗೌಡ, ನಗರಸಭಾ ಸದಸ್ಯ ಮುರಳೀಗೌಡ, ಒಕ್ಕಲಿಗ ಸಮುದಾಯದ ಮುಖಂಡರಾದ ರೋಟರಿ ಹೊದಲವಾಡಿ ವೆಂಕಟೇಶಪ್ಪ, ಪ್ರಭಾಕರ್, ಪವನ್ ನಾರಾಯಣಸ್ವಾಮಿ, ವೀರ ವೆಂಕಟಪ್ಪ, ಹೆಚ್.ರಾಮಚಂದ್ರ, ಡಿ. ಕೃಷ್ಣಪ್ಪ, ಡಾ.ಕೆ.ಎಂ.ರಮೇಶ್, ಮಮತಮ್ಮ ಉಪಸ್ಥಿತರಿದ್ದರು,
ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಾಯಕ ನಿರ್ದೇಶಕಿ ಗೀತಾ ಸ್ವಾಗತಿಸಿದರು, ರೇಣುಕ ನಿರೂಪಿಸಿದರು,ನಾಡಗೀತೆಗಳಾದವು,